Advertisement

ದಿನಕರನ್‌ ಬಣಕ್ಕೆ ಅನರ್ಹತೆ ಶಾಕ್‌

07:30 AM Sep 19, 2017 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಮತ್ತೂಂದು ಸುತ್ತಿನ ರಾಜಕೀಯ ಯುದ್ಧ ಆರಂಭವಾಗಿದೆ. ಎಐಎಡಿಎಂಕೆ ಭಿನ್ನಮತೀಯ ನಾಯಕ ಟಿ.ಟಿ.ವಿ.ದಿನಕರನ್‌ ಬೆಂಬಲಿಗರಾಗಿರುವ 18 ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ.

Advertisement

ತಮಿಳುನಾಡು ವಿಧಾನಭೆ ಸ್ಪೀಕರ್‌ ಪಿ.ಧನಪಾಲ್‌ ಸೋಮವಾರ ಈ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಸೆ.20ರ ನಂತರ ನಡೆಯಬಹುದಾದ ವಿಶ್ವಾಸಮತ ಕೋರಿಕೆಯಲ್ಲಿ ಪಳನಿಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಗಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಬೆಳವಣಿಗೆಯಿಂದಾಗಿ ಆಳುವ ಎಐಎಡಿಎಂಕೆಯಲ್ಲಿ ಪಕ್ಷ ಮತ್ತು ಅಧಿಕಾರದ ನಿಯಂತ್ರಣಕ್ಕಾಗಿ ಹಲವು ತಿಂಗಳಿಂದ ನಡೆಯುತ್ತಿದ್ದ ಗುದ್ದಾಟ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.

ಹೀಗಾಗಿ, ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರಕ್ಕೆ ಬಹುಮತಕ್ಕೆ 107 ಮತಗಳು ಬಂದರೆ ಸಾಕು. ಎರಡೂ ಬಣಗಳ ಶಾಸಕರ ಸಂಖ್ಯೆ ಸೇರಿ ಒಟ್ಟು 124 ಶಾಸಕರ ಬೆಂಬಲ ಇದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಹೇಳಿಕೊಂಡಿದ್ದರು. ಈ ನಡುವೆ ಕೇಂದ್ರದಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಿಎಂ ಪಳನಿಸ್ವಾಮಿ ಮುಂದಾಗಿದ್ದಾರೆ ಎಂದು ಹೇಳಲಾಗು ತ್ತಿದೆ. ನಮಕ್ಕಲ್‌ನಲ್ಲಿ ಪಳನಿ ಆಡಿದ್ದ ಮಾತುಗಳು ಅದಕ್ಕೆ ಪೂರಕವಾಗಿದೆ. ಕೇಂದ್ರ-ರಾಜ್ಯದ ಬಾಂಧವ್ಯ ಹೇಗಿರ ಬೇಕೋ ಹಾಗೆ ತಮಿಳುನಾಡು ನಡೆದು ಕೊಳ್ಳುತ್ತಿದೆ. ರಾಜ್ಯವೇನೂ ಕೇಂದ್ರದ ಗುಲಾಮ ಅಲ್ಲ ಎಂದಿದ್ದಾರೆ.

ಆಡಳಿತಾರೂಢ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿ.ಕೆ.ಶಶಿಕಲಾ ಮತ್ತು ಉಪ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಟಿ.ಟಿ.ವಿ.ದಿನಕರನ್‌ರನ್ನು ಕಿತ್ತು ಹಾಕಿ, ಡಿಸಿಎಂ ಓ.ಪನ್ನೀರ್‌ಸೆಲ್ವಂ ಮತ್ತು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಬಣ ನಿರ್ಣಯ ಕೈಗೊಂಡಿತ್ತು. ದಿನಕರನ್‌ ಬಣದ ಶಾಸಕರು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ ರಾವ್‌ ಬಳಿಗೆ ತೆರಳಿ ಸರ್ಕಾರಕ್ಕೆ ಬೆಂಬಲವಿಲ್ಲವೆಂ ದಿದ್ದರು. ಹೀಗಾಗಿ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌, ದಿನಕರನ್‌ ಬಣ ಮದ್ರಾಸ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಸೆ.14ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಸೆ.20ರ ವರೆಗೆ ವಿಶ್ವಾಸಮತ ಕೋರಬೇಕಾದ ಅಗತ್ಯವಿಲ್ಲ ಎಂದು ಹೇಳಿತ್ತು. ಹೀಗಾಗಿ, ಹೈಕೋರ್ಟ್‌ ತೀರ್ಮಾನವೂ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next