Advertisement

20 ಶಾಸಕರ ಅನರ್ಹತೆ; ಚುನಾವಣೆಗೆ ಹೆದರಲ್ಲ:AAP

12:31 PM Jan 21, 2018 | Team Udayavani |

ಹೊಸದಿಲ್ಲಿ: 20 ಶಾಸಕರನ್ನು ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಅನರ್ಹಗೊಳಿಸುವಂತೆ ರಾಷ್ಟ್ರಪತಿಗೆ ಚುನಾವಣಾ ಆಯೋಗ ಶಿಫಾರಸು ಮಾಡಿರುವುದನ್ನು ಟೀಕಿಸಿರುವ ಆಮ್‌ ಆದ್ಮಿ ಪಕ್ಷ, ಚುನಾವಣೆಗೆ ಹೆದರಲ್ಲ ಎಂದಿದೆ. ಅಲ್ಲದೆ ಪಕ್ಷದ ವಾದವನ್ನು ಮಂಡಿಸಲು ಚುನಾವಣಾ ಆಯೋಗ ಅವಕಾಶ 
ನೀಡಿಲ್ಲ. ನೇರವಾಗಿ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ ಎಂದು ಎಎಪಿ ದೆಹಲಿ ಘಟಕದ ಮುಖ್ಯಸ್ಥ ಗೋಪಾಲ್‌ ರಾಯ್‌ ಹೇಳಿದ್ದಾರೆ. 

Advertisement

ಸಂಸದೀಯ ಕಾರ್ಯದರ್ಶಿ ಹುದ್ದೆಗೆ 11 ರಾಜ್ಯಗಳಲ್ಲಿ ನೇಮಕ ಮಾಡಲಾಗುತ್ತಿದೆ. ಆದರೆ ದಿಲ್ಲಿಗೆ ಮಾತ್ರವೇ ಅಡ್ಡಿಪಡಿಸಲಾಗುತ್ತಿದೆ. ನ್ಯಾಯಕ್ಕಾಗಿ ನಾವು ಪ್ರಜಾಪ್ರಭುತ್ವದಡಿಯಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಪುದುಚೇರಿಯಲ್ಲೂ ವಿವಾದ
ದಿಲ್ಲಿ ಶಾಸಕರನ್ನು ಅನರ್ಹ ಗೊಳಿಸಲು ಶಿಫಾರಸು ಮಾಡುತ್ತಿದ್ದಂತೆಯೇ, ಪುದುಚೇರಿಯಲ್ಲಿ ಕಾಂಗ್ರೆಸ್‌ ಮತ್ತು ಡಿಎಂಕೆ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಲಾಗುವುದು ಎಂದು ಎಐಎಡಿಎಂಕೆ ಹೇಳಿದೆ. 

ಪುದುಚೇರಿಯಲ್ಲೂ ಶಾಸಕರು ಸರಕಾರ ನೇತೃತ್ವದ ಮಂಡಳಿಯ ಮುಖ್ಯಸ್ಥರಾಗಿ ಹಾಗೂ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಎಂದು ಎಐಎಡಿಎಂಕೆ ಮುಖಂಡ ಎ ಅನºಳಗನ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next