Advertisement
ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಸಹಿತವಾಗಿ ವರಿಷ್ಠರ ಸಭೆ ಕೂಡ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಬಿಜೆಪಿ ಕಾರ್ಯಕರ್ತರನ್ನು ಉಪಚುನಾವಣೆ ಯಲ್ಲಿ ಸಂಘಟಿತಗೊಳಿಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಸರ್ಕಾರವನ್ನು ಮುಂದಿನ ಮೂರು ವರ್ಷಕ್ಕೆ ಭದ್ರಪಡಿ ಸಿಕೊಳ್ಳಲು ಅಗತ್ಯವಿರುವ ಕಾರ್ಯತಂತ್ರ ಸಿದ್ಧವಾಗುತ್ತಿದೆ.
Related Articles
Advertisement
ರಮೇಶ್ ಜಾರಕಿಹೋಳಿ, ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಬೈರತಿ ಬಸವರಾಜು, ಶಿವ ರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ. ಸೋಮಶೇಖರ್ ಮೊದಲಾದವರನ್ನು ಸಚಿವರನ್ನಾಗಿ ಮಾಡಿ ಚುನಾವಣೆ ಎದುರಿಸುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಆದರೆ, ನ್ಯಾಯಾಲಯದ ತೀರ್ಪು ಹೇಗೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಜೆಪಿ ಹಿರಿಯ ಮುಖಂಡ ರೊಬ್ಬರು ಮಾಹಿತಿ ನೀಡಿದರು.
ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡುವುದು ಬಹುತೇಕ ಖಚಿತ ಎಂದು ಬಿಜೆಪಿಯ ಮೂಲಗಳೇ ಹೇಳುತ್ತಿವೆ. ಆದರೆ, ಸುಪ್ರೀಂ ತೀರ್ಪು ಅನರ್ಹರಿಗೆ ವಿರುದ್ಧವಾಗಿ ಬಂದು, ಚುನಾವಣೆ ಸ್ಪರ್ಧೆಗೆ ಅವಕಾಶ ನೀಡದೇ ಇದ್ದರೆ ಬಿಜೆಪಿ ತಟಸ್ಥ ನಿಲುವು ಹೊಂದುವ ಜತೆಗೆ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಿ, ಜಯಿಸಿಕೊಳ್ಳಲು ಕ್ಷೇತ್ರವಾರು ಸಂಘಟನೆ ಕಾರ್ಯ ಆರಂಭವಾಗಿದೆ. ರಾಜ್ಯಬಿಜೆಪಿ ಅಧ್ಯಕ್ಷರು ಈಗಾಗಲೇ ಎಲ್ಲ ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿ ದ್ದು, ಚುನಾವಣಾ ತಯಾರಿ ಆರಂಭಿಸಿದ್ದಾರೆ.
ಪಕ್ಷಕ್ಕೆ ಆಹ್ವಾನ: ವಿವಿಧ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿರುವ ಹಿರಿಯ ಮುಖಂಡರನ್ನು ಪುನಃ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಬಿಜೆಪಿ ಸತತ ಪ್ರಯತ್ನ ನಡೆಯುತ್ತಿದೆ. ಉಪಚುನಾವಣೆ ಯಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ದೃಷ್ಟಿಯಿಂದ ವಿವಿಧ ಪಕ್ಷದ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿ ಕೊಳ್ಳುವ ಕಾರ್ಯವೂ ಸತತವಾಗಿ ನಡೆಯುತ್ತಿದೆ. ಮಾಜಿ ಸಂಸದ ವಿಜಯ್‌ಶಂಕರ್ ಎರಡು ದಿನಗಳ ಹಿಂದಷ್ಟೇ ಮರಳಿ ಬಿಜೆಪಿಗೆ ಸೇರಿದರು. ಹೀಗೆ ಇನ್ನು ಅನೇಕ ನಾಯಕರು ಬಿಜೆಪಿಗೆ ಸೇರುವವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಮ್ಮದು ಕೇಡರ್ ಆಧಾರಿತ ಪಕ್ಷ. ಯಾವುದೇ ಸಂದರ್ಭದಲ್ಲಿ ಉಪಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಸಂಘಟನೆ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳ ಆಧಾರದಲ್ಲಿ ಚುನಾವಣೆ ನಡೆಯುತ್ತದೆ. ಆದರೆ, ಕೆಲವು ಪಕ್ಷದಲ್ಲಿ ಅಭ್ಯರ್ಥಿಗಳು ಕೇವಲ ಉತ್ಸವ ಮೂರ್ತಿಗಳಂತೆ ಇರುತ್ತಾರೆ.-ಸಿ.ಟಿ.ರವಿ, ಸಚಿವ * ರಾಜು ಖಾರ್ವಿ ಕೊಡೇರಿ