Advertisement

4551 ಕಡತಗಳ ವಿಲೇವಾರಿ

05:03 PM Nov 20, 2018 | Team Udayavani |

ಬಳ್ಳಾರಿ: ಕಂದಾಯ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ 10 ಸಾವಿರಕ್ಕೂ ಹೆಚ್ಚು ಕಡತಗಳು ಬಾಕಿ ಉಳಿದಿದೆ. ಇವುಗಳನ್ನು ಕಳೆದ ಒಂದು ವಾರದಿಂದ ಕಂದಾಯ ಇಲಾಖೆಯಲ್ಲಿ ನಡೆದ ಕಡತ ವಿಲೇವಾರಿ ಸಪ್ತಾಹದಲ್ಲಿ ಕೈಗೆತ್ತಿಕೊಂಡು ವಿವಿಧ ವಿಭಾಗದ 4551 ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು, 6140 ಕಡತಗಳು ಬಾಕಿ ಉಳಿದಿವೆ.

Advertisement

ಜಿಲ್ಲಾ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಭೂ ದಾಖಲೆಗಳು, ಮಾಸಾಶನ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಕಳೆದ 2018 ಮೇ.22ರಿಂದ 2018 ಅ.30ರ  ವರೆಗೆ ಜಿಲ್ಲೆಯಾದ್ಯಂತ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ 12061, ಸಹಾಯಕ ಆಯುಕ್ತರ ಕಚೇರಿ 21419, ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿ 3561, ಬಳ್ಳಾರಿ ತಾಲೂಕು ಕಚೇರಿ 10155, ಸಿರುಗುಪ್ಪ 29440, ಸಂಡೂರು 25576, ಹೊಸಪೇಟೆ 78314, ಹ.ಬೊ.ಹಳ್ಳಿ 7437, ಹಡಗಲಿ 22168, ಕೂಡ್ಲಿಗಿ 35142 ಸೇರಿದಂತೆ ಒಟ್ಟು 2,45,273 ಅರ್ಜಿಗಳು ಸಲ್ಲಿಕೆಯಾಗಿದ್ದವು.
 
ಈ ಪೈಕಿ 2018ರ ಮೇ.23 ರಿಂದ 2018 ನವೆಂಬರ್‌ 9ರ ವರೆಗೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ 10526, ಬಳ್ಳಾರಿ
ಸಹಾಯಕ ಆಯುಕ್ತರ ಕಚೇರಿ 19128, ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿ 3118, ಬಳ್ಳಾರಿ ತಾಲೂಕು ಕಚೇರಿ 9261, ಸಿರುಗುಪ್ಪ 28271, ಸಂಡೂರು 25055, ಹೊಸಪೇಟೆ 76827, ಹ.ಬೊ.ಹಳ್ಳಿ 6906, ಹಡಗಲಿ 21144, ಕೂಡ್ಲಿಗಿ 34346 ಕಡತಗಳನ್ನು ವಿಲೇವಾರಿ ಮಾಡಲಾಗಿತ್ತು.

2018 ಮೇ.9 ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ 1535, ಬಳ್ಳಾರಿ ಎಸಿ ಕಚೇರಿ 2291, ಹೊಸಪೇಟೆ ಎಸಿ ಕಚೇರಿ
443, ಬಳ್ಳಾರಿ ತಾಲೂಕು ಕಚೇರಿ 894, ಸಿರುಗುಪ್ಪ 1169, ಸಂಡೂರು 521, ಹೊಸಪೇಟೆ 1487, ಹ.ಬೊ.ಹಳ್ಳಿ 531,
ಹಡಗಲಿ 1024, ಕೂಡ್ಲಿಗಿ 796 ಸೇರಿದಂತೆ ಒಟ್ಟು 10691 ಕಡತಗಳು ಬಾಕಿ ಉಳಿದಿದ್ದು, ಕಳೆದ ನ.12 ರಿಂದ ನ.18ರ ವರೆಗೆ ನಡೆದ ಕಂದಾಯ ಇಲಾಖೆಯ ಕಡತ ವಿಲೇವಾರಿ ಸಪ್ತಾಹದಲ್ಲಿ ಆದ್ಯತೆ ಮೇರೆಗೆ ತೆಗೆದುಕೊಂಡ ಪರಿಣಾಮ ಬಳ್ಳಾರಿ ಡಿಸಿ ಕಚೇರಿ 540 (995 ಬಾಕಿ), ಎಸಿ ಕಚೇರಿ 509 (1782 ಬಾಕಿ), ಹೊಸಪೇಟೆ ಎಸಿ ಕಚೇರಿ 36 (407 ಬಾಕಿ), ಬಳ್ಳಾರಿ ತಾಲೂಕು ಕಚೇರಿ 224 (670 ಬಾಕಿ), ಸಿರುಗುಪ್ಪ 712 (457 ಬಾಕಿ), ಸಂಡೂರು 319 (202 ಬಾಕಿ) ಹೊಸಪೇಟೆ 801 (686 ಬಾಕಿ), ಹ.ಬೊ.ಹಳ್ಳಿ 104 (427 ಬಾಕಿ), ಹಡಗಲಿ 714 (310 ಬಾಕಿ), ಕೂಡ್ಲಿಗಿ 596 (204 ಬಾಕಿ) ಸೇರಿ ಒಟ್ಟು 4551 ಕಡತಗಳನ್ನು ವಿಲೇವಾರಿ ಮಾಡಿದ್ದು, ಇನ್ನೂ 6140 ಕಡತಗಳು ಬಾಕಿ ಉಳಿದಿವೆ. ಅವುಗಳನ್ನು ಸಹ ಆದ್ಯತೆ ಮೇರೆಗೆ ಈ ತಿಂಗಳೊಳಗೆ ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. 

ಏನಿದು ಕಡತ ವಿಲೇವಾರಿ ಸಪ್ತಾಹ
ಕಂದಾಯ ಇಲಾಖೆಯಲ್ಲಿ ಕೆಲಸದ ಒತ್ತಡ, ಸೂಕ್ತ ದಾಖಲೆ ಸೇರಿ ಹಲವು ಕಾರಣಗಳಿಂದ ಸಾಕಷ್ಟು ಕಡತಗಳು ನಿಗದಿತ ಸಮಯಕ್ಕೆ ವಿಲೇವಾರಿಯಾಗದೇ ಬಾಕಿ ಉಳಿದಿರುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತವೆ. ಹಾಗಾಗಿ ಒಂದು ವಾರವನ್ನು ನಿಗದಿಗೊಳಿಸಿ, ಈ ಅವಧಿಯಲ್ಲಿ ಎಷ್ಟು ಕಡತಗಳನ್ನು ವಿಲೇವಾರಿ ಮಾಡಿ, ಸರ್ಕಾರಕ್ಕೆ ಅನುಪಾಲನಾ ವರದಿ ಕಳುಹಿಸಿ, ಕಾರ್ಯಾಲಯಕ್ಕೆ ಪ್ರತಿಯನ್ನು ಕಳುಹಿಸಬೇಕು. ಅಲ್ಲದೇ, ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಬಾಕಿ ಇರುವ ಕಡತ ಹಾಗೂ ಸಮಸ್ಯೆಗಳಿರುವಂತಹ ಪ್ರಕರಣಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬುದನ್ನು ಅಧೀನದಲ್ಲಿರುವ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಒಂದು ವರ್ಷಕ್ಕೂ ಹಿಂದಿನ ಕಡತಗಳಿಗೆ ಮೊದಲ ಆದ್ಯತೆ ನೀಡಿ ವಿಲೇವಾರಿ ಮಾಡಬೇಕು. ಜತೆಗೆ ಕಡತ ವಿಲೇವಾರಿಯು ಗುಣಾತ್ಮಕವಾಗಿರಬೇಕು ಎಂಬುದು ಸಪ್ತಾಹದ ಮುಖ್ಯ ಉದ್ದೇಶ.

ಭಾನುವಾರವೂ ಕಡತ ವಿಲೇ ರಜಾದಿನ ಭಾನುವಾರವೂ ಕಾರ್ಯನಿರ್ವಹಿಸಿದ ಸಿಬ್ಬಂದಿ ಕಂದಾಯ ಇಲಾಖೆಯಲ್ಲಿ ಬಾಕಿ
ಉಳಿದಿದ್ದ ಕಡತಗಳನ್ನು ವಿಲೇವಾರಿಗಾಗಿ ನ.12ರಂದು ಆರಂಭವಾದ ಕಂದಾಯ ಇಲಾಖೆಯ ಕಡತ ವಿಲೇವಾರಿ ಸಪ್ತಾಹದ ಕೊನೆಯ ದಿನ ನ.18 ಭಾನುವಾರವಾಗಿದ್ದು, ಅಂದು ರಜಾ ದಿನವಾದರೂ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. 10691 ಬಾಕಿ ಕಡತಗಳ ಪೈಕಿ ಒಟ್ಟು 4551 ಕಡತಗಳನ್ನು ವಿಲೇವಾರಿ ಮಾಡಿ, ಮಾಹಿತಿಯನ್ನು ಅಂದೇ ಸರಕಾರಕ್ಕೆ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next