Advertisement

ವಿಲೇವಾರಿಯಾಗದ ಮೂಟೆಗಟ್ಟಲೆ ತ್ಯಾಜ್ಯ: ಸಾಂಕ್ರಾಮಿಕ ರೋಗ ಭೀತಿ

10:38 PM Dec 28, 2020 | mahesh |

ಕೋಟೇಶ್ವರ: ರಾ.ಹೆದ್ದಾರಿ - 66ರ ಗೋಪಾಡಿ ಮುಖ್ಯ ರಸ್ತೆಯ ಎಡಭಾಗದಲ್ಲಿ ಎಸೆಯಲಾಗಿರುವ ಮೂಟೆಗಟ್ಟಲೆ ತಾಜ್ಯವು ದುರ್ನಾತದಿಂದ ಕೂಡಿದ್ದು, ಆ ಭಾಗದ ನಿವಾಸಿಗಳು ಮೂಗು ಮುಚ್ಚಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ರಾ. ಹೆದ್ದಾರಿ ತನಕ ತಾಜ್ಯ
ರಸ್ತೆಯುದ್ದಕ್ಕೂ ಎಸೆಯಲಾಗಿರುವ ತಾಜ್ಯವು ರಸ್ತೆ ಪಕ್ಕದಲ್ಲಿ ಸಾಗುವ ಪಾದಚಾರಿಗಳಿಗೂ ಅಸಹ್ಯ ಎನಿಸುವಷ್ಟರ ಮಟ್ಟಿಗೆ ಮೂಟೆಗಟ್ಟಲೆ ತುಂಬಿದೆ. ಈ ಬಗ್ಗೆ ಉದಯವಾಣಿ ಕಳೆದ ತಿಂಗಳು ಸಚಿತ್ರ ವರದಿ ಮಾಡಿದ್ದರೂ ಈ ವರೆಗೆ ರಾ.ಹೆದ್ದಾರಿ ಪ್ರಾ ಧಿಕಾರ ಸಹಿತ ಗೋಪಾಡಿ ಗ್ರಾ.ಪಂ.ಸ್ಪಂದಿಸದಿರುವುದು ಅಲ್ಲಿನ ನಿವಾಸಿಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಕೋಟೇಶ್ವರ ಗ್ರಾ.ಪಂ.ವ್ಯಾಪ್ತಿಯ ಹಿಂದೂ ರುದ್ರ ಭೂಮಿಯ ಎದುರುಗಡೆ ಎಸೆಯಲಾಗಿರುವ ತಾಜ್ಯ ವಿಲೇವಾರಿಗೊಳಿಸಲಾಗಿದ್ದರೂ ಮಾಲ್‌ ಬಳಿಯಲ್ಲಿ ಮತ್ತೆ ತಾಜ್ಯ ಪ್ರತ್ಯಕ್ಷವಾಗಿರುವುದು ಗ್ರಾ.ಪಂ.ಗೆ ಸವಾಲಾಗಿದೆ.

ಸ್ವಚ್ಛ ಗ್ರಾಮ ಪರಿಕಲ್ಪನೆಗೆ ಹಿನ್ನಡೆ
ಪ್ರತಿ ಗ್ರಾಮಗಳಲ್ಲಿ ಗ್ರಾ.ಪಂ.ಗಳು ಸ್ವಚ್ಛತೆಗೆ ಅದ್ಯತೆ ನೀಡಿ ಸcತ್ಛ ಗ್ರಾಮ ಪರಿಕಲ್ಪನೆಯ ಯೋಜನೆಗೆ ಒತ್ತುಕೊಟ್ಟು ಶ್ರಮಿಸುತ್ತಿದ್ದರೂ ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿರುವುದು ಪಂಚಾಯತ್‌ಗಳಿಗೆ ಸವಾಲಾಗಿ ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

ಸ್ಪಂದಿಸದ ರಾ.ಹೆದ್ದಾರಿ ಪ್ರಾಧಿಕಾರ
ಇಲ್ಲಿನ ಗ್ರಾ.ಪಂ.ಗಳಿಗೆ ತಾಜ್ಯ ವಿಲೇವಾರಿಗೆ ಘಟಕದ ಸಮಸ್ಯೆ ಎದುರಾಗಿರುವುದರಿಂದ ಬಹುತೇಕ ಗ್ರಾ.ಪಂ.ಗಳು ಪುರಸಭೆಯನ್ನು ಅವಲಂಬಿಸಬೇಕಾಗಿದೆ. ಆದರೆ ಪುರಸಭೆಗೆ ಕಾನೂನಾತ್ಮಕ ತೊಡಕು ಇರುವುದರಿಂದ ನಿರ್ದಿಷ್ಟ ಗ್ರಾ.ಪಂ.ಗಳ ತಾಜ್ಯ ವಿಲೇವಾರಿಗೆ ಮಾತ್ರ ಸೀಮಿತವಾಗಿದೆ. ಈ ಒಂದು ವಿದ್ಯಮಾನದಿಂದ ಈ ಭಾಗದ ಗ್ರಾ.ಪಂ.ಗಳು ತಾಜ್ಯ ವಿಲೇವಾರಿಗೆ ಸೂಕ್ತ ಜಾಗವಿಲ್ಲದೆ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾ.ಹೆದ್ದಾರಿ ಪ್ರಾಧಿ ಕಾರ ಸ್ಪಂದಿಸಬೇಕಾಗಿದೆ.

ಜಾಗದ ಕೊರತೆ
ಗ್ರಾ.ಪಂ.ಪರಿಸರದಲ್ಲಿ ತಾಜ್ಯ ವಿಲೇವಾರಿಗೆ ಸೂಕ್ತ ಜಾಗದ ಕೊರತೆಯಿದೆ. ಸರಕಾರಿ ಜಾಗದಲ್ಲಿ ತಾಜ್ಯ ಸಂಸ್ಕರಣ ಘಟಕ ಆರಂಭಿಸಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವುದರಿಂದ ತಾಜ್ಯ ವಿಲೇವಾರಿ ಪ್ರಕ್ರಿಯೆ ಸವಾಲಾಗಿದೆ. ರಾ.ಹೆದ್ದಾರಿ ಪ್ರಾ ಧಿಕಾರ ಕ್ರಮಕೈಗೊಳ್ಳುವುದು ಸೂಕ್ತ.
-ಗಣೇಶ್‌, ಪಂಚಾಯತ್‌ ಅಭಿವೃದ್ಧಿ ಅ ಧಿಕಾರಿ, ಗೋಪಾಡಿ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next