ದೊಂದಿಗೆ ಬಾರ್ಯ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
Advertisement
ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಪೈ ಕಾರ್ಯಕ್ರಮ ಉದ್ಘಾಟಿಸಿ, ಸರಕಾರ ಕೃಷಿ ಚಟುವಟಿಕೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಗ್ರಾಮೀಣ ಭಾಗದ ರೈತರಿಗೆ ಮಾಹಿತಿಯ ಕೊರತೆಯಿಂದಾಗಿ ತಲುಪುತ್ತಿಲ್ಲ. ಇಲಾಖಾ ಸಹಾಯಧನವನ್ನು ರೈತರಿಗೆ ಮುಟ್ಟಿಸುವ ಉದ್ದೇಶದಿಂದ ಈ ಇದನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ, ಪ್ರಗತಿಪರ ಕೃಷಿಕ ಪ್ರಸನ್ನ ಗೌಡ ಎನ್., ತೆಕ್ಕಾರು ಪ್ರಗತಿಪರ ಕೃಷಿಕ ಪಾಂಡುರಂಗ ನಾಯಕ್, ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್‌ನ
ನಿರ್ದೇಶಕ ಜಯರಾಜ್‌ಹೆಗ್ಡೆ ಪುತ್ತಿಲ, ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಸತೀಶ್, ಸ್ಪಂದನ ರೈತರ ಸೇವಾ ಕೂಟದ ಅಧ್ಯಕ್ಷ ವಿವೇಕಾನಂದ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು. ಸಹಕಾರಿ ಸಂಘದ ಉಪಾಧ್ಯಕ್ಷ ಶೇಷಪ್ಪ ಸಾಲ್ಯಾನ್ ಸ್ವಾಗತಿಸಿ, ಮಂಜುನಾಥ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ಸೇವಾ ಕೂಟದ ಕಾರ್ಯದರ್ಶಿ ಗಣೇಶ್ ಪಿ. ವಂದಿಸಿದರು.