Advertisement
ವಿಧಾನಪರಿಷತ್ ಸದಸ್ಯರಾದ ಮಧು ಮಾದೇಗೌಡ ಅವರು ಕೆಆರ್‌ಎಸ್ ಆಣೆಕಟ್ಟಿಗೆ ಯಾವುದೇ ರೀತಿ ಹಾನಿ ಆಗದಂತೆ ಡಿಸ್ನಿ ಲ್ಯಾಂಡ್ ಮಾದರಿ ಉದ್ಯಾನವನ ಮಾಡುವಂತೆ ಕೋರಿ ಕೇಳಿದ ಪ್ರಶ್ನೆಗೆ ಉತ್ತರಿಸಿ, “ಹಿಂದೆ ಕಾಂಗ್ರೆಸ್ ಸರ್ಕಾರದ ವೇಳೆಯಲ್ಲೇ ಡಿಸ್ನಿಲ್ಯಾಂಡ್ ಮಾದರಿ ಉದ್ಯಾನವನ ಯೋಜನೆ ಬಜೆಟ್‌ನಲ್ಲಿಯೂ ಆಗಿತ್ತುಆದರೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಬೆಂಗಳೂರು ಮತ್ತು ಮೈಸೂರು ಭಾಗದಲ್ಲಿ ಯಾವುದೇ ಮನರಂಜನಾತ್ಮಕ ಪಾರ್ಕ್‌ಗಳಿಲ್ಲ, ಗುಂಡುರಾವ್ ಅವರ ಕಾಲದಲ್ಲಿ ಒಳ್ಳೆ ಉದ್ಯಾನವನ ಆಯಿತು. ಸರ್ಕಾರದ 198 ಎಕರೆ ಜಮೀನು ಏರಿಯಾ ಕೆಳಗೆ ಇದೆ, PPP ಮಾದರಿಯಲ್ಲಿ ಉದ್ಯಾನವನ ಮಾಡಬಹುದೇ ಎಂಬುದರ ಕುರಿತು ಆಲೋಚನೆ ಮಾಡಲಾಗುವುದು.ಕೆ.ಆರ್‌ಎಸ್ ಅಣೆಕಟ್ಟಿಗೆ ಯಾವುದೇ ತೊಂದರೆ ಆಗುವುದಿಲ್ಲ, ಅದರಿಂದ ಸ್ವಲ್ಪ ದೂರದಲ್ಲೆ ಉದ್ಯಾನವನ ನಿರ್ಮಾಣ ಮಾಡಲಾಗುವುದು.ಇದು ಮಧು ಮಾದೇಗೌಡ ಅವರ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಈ ಯೋಜನೆಯಿಂದ ಸ್ಥಳೀಯ ಉದ್ಯೋಗ ಸೃಷ್ಟಿಯಾಗಬೇಕು, ಹಾಗೂ ಜನರಿಗೆ ಒಳ್ಳೆಯದಾಗಬೇಕು.” ಎಂದು ಉತ್ತರಿಸಿದರು.
ಯು.ಬಿ.ವೆಂಕಟೇಶ್ ಅವರು, ಬಸವನಗುಡಿಯಲ್ಲಿ ಇರುವ ಸ್ಕೇಟಿಂಗ್ ಟ್ರಾಕ್‌ನಲ್ಲಿ ಖಾಸಗಿಯವರು ಹಣ ಪಡೆದು ವ್ಯವಹಾರ ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಉಪಯೋಗವಾಗುತ್ತಿಲ್ಲ. ಇದನ್ನ ಬಿಬಿಎಂಪಿಯಿಂದ ತೆಗೆದು ಕ್ರೀಡಾ ಇಲಾಖೆಗೆ ನೀಡಬೇಕಾಗಿ ಮನವಿ ಮಾಡಿದುದಕ್ಕೆ ಪ್ರತಿಕ್ರಿಯಿಸಿ, “ಸುಮಾರು 5.5 ಕೋಟಿ ಖರ್ಚು ಮಾಡಿ ಸ್ಕೇಟಿಂಗ್ ರಿಗ್ ನಿರ್ಮಾಣ ಮಾಡಲಾಗಿದೆ. 1,510 ಚದರ ಮೀ ಇದೆ. ಯಾವುದೇ ಕಾರಣಕ್ಕೂ ಈ ಟ್ರಾಕನ್ನ ಯಾರಿಗೂ ಗುತ್ತಿಗೆ ನೀಡಿಲ್ಲ. ಬಿಬಿಎಂಪಿಯಿಂದ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಯೋಚಿಸಲಾಗುವುದು.” ಎಂದರು.