Advertisement
ಈ ಸಮಸ್ಯೆಗೆ ಕಾರಣ ಹುಡುಕಲು ಹೊರಟರೆ ಹಲವಾರು ಕಾರಣಗಳು ಬಿಚ್ಚಿಕೊಳ್ಳುತ್ತವೆ. ಆದರೆ ಪ್ರತಿಯೊಂದು ಕಾರಣವೂ ಬಾಲಿಷದಂತೆ ಭಾಸವಾಗುತ್ತದೆ ವಿನಃ ಯಾವುದೂ ಗಂಭೀರವಾದದ್ದು ಎಂದು ಅನಿಸುವುದೇ ಇಲ್ಲ. ಮುಂದೊಂದು ದಿನ ಇದರ ಪರಿಣಾಮದಿಂದ ಮದುವೆಯೇ ಬೇಡ ಎಂಬ ಮನಸ್ಥಿತಿ ಬಹುತೇಕರಲ್ಲಿ ಮೂಡಿದರು ಯಾವುದೇ ಸಂದೇಹವಿಲ್ಲ.
Related Articles
Advertisement
ಅಲ್ಲಿಗೆ ತಂದೆ ಅದೆಷ್ಟೋ ವರ್ಷ ಕಷ್ಟಪಟ್ಟು ಕೂಡಿ ಹಾಕಿ ಸಾಲವೋ ಮೂಲವೋ ಮಾಡಿ ಮಾಡಿಸಿದ ಮದುವೆ ಅರೇ ಘಳಿಗೆಯಲ್ಲಿ ನೀರ ಮೇಲೆ ಇಟ್ಟ ಹೋಮದಂತೆ ಆಗುತ್ತದೆ. ಆತನ ನಿಸ್ವಾರ್ಥ ಸೇವೆಗೆ ಮಕ್ಕಳು ನೀಡುವ ಬೆಲೆಯಿದು! ಆತನ ಬೆವರಿನ ದುಡಿಮೆಗೆ ಮಕ್ಕಳು ಕೊಡುವ ಮರ್ಯಾದಿಯಿದು! ಒಂದು ಬಾರಿಯಾದರು ಇದರ ಕುರಿತಾಗಿ ಯೋಚಿಸಿ ತಾಳ್ಮೆಯಿಂದ ಮುಂದುವರೆದರೆ ಇಂಥಹ ಅದೆಷ್ಟೋ ಕೌಟುಂಬಿಕ ಕಲಹಗಳನ್ನು ತಪ್ಪಿಸಬಹುದು.
ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ. ಯಾಕೆಂದರೆ ಭೂಮಾತೆಯ ಮೇಲೆ ನಾವು ಎಷ್ಟೇ ಪ್ರಹಾರ ನಡೆಸಿದರು ಆಕೆ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಹೆಣ್ಣು ಹಾಗೆಯೇ. ಸಹನಾ ಮೂರ್ತಿ. ಆದರೆ ಇಂದಿನ ಯುಗದ ಹೆಣ್ಣುಮಕ್ಕಳಲ್ಲಿ ಸಹನೆ ತಾಳ್ಮೆ ಇದೆಯೇ ಎಂದು ಕೇಳಿದರೆ ನಾನು ಕೊಡುವ ಉತ್ತರ ಖಂಡಿತ ಇಲ್ಲ. ಇದ್ದಿದ್ದರೆ ಹೆಣ್ಣು ಮಕ್ಕಳು ಮದುವೆಯಾದ ಮೂರೇ ತಿಂಗಳಿಗೆ ಓಡಿ ಬಂದು ತವರು ಮನೆಯಲ್ಲಿ ಕೂರುವುದಿಲ್ಲ. ಅಥವಾ ಕೂರುವಂತ ಪ್ರಮೇಯವೂ ಬರುವುದಿಲ್ಲ. ಅದು ಕೂಡ ಬಾಲಿಶ ಕಾರಣಕ್ಕೆ! ಇದನ್ನು ವಿಪರ್ಯಾಸ ಅನ್ನಬೇಕೋ ಅಥವಾ ನಮ್ಮಲ್ಲಿ ಕುಂಠಿತಗೊಳ್ಳುತ್ತಿರುವ ಸಂಸ್ಕಾರದ ಅಡ್ಡ ಪರಿಣಾಮವೋ ನನಗಂತೂ ತಿಳಿಯುತ್ತಿಲ್ಲ.
ಇಲ್ಲಿ ಪ್ರತಿಯೊಂದು ಕೂಡ ಆಧುನಿಕವೇ ಆಗುತ್ತಿದೆ. ಜತೆಗೆ ಸಂಬಂಧಗಳು, ಬಾಂಧವ್ಯಗಳು ಎಲ್ಲವೂ. ಇವೆಲ್ಲ ಯಾವುದರ ಮುನ್ಸೂಚನೆಯೋ ಆ ದೇವರೇ ಬಲ್ಲ. ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ, ಜಗಳ, ಸಣ್ಣ ಪುಟ್ಟ ಮನಸ್ತಾಪ ಎಲ್ಲವೂ ಸಹಜ. ಹಾಗೆಂದ ಮಾತ್ರಕ್ಕೆ ಪ್ರತಿಯೊಂದು ವಿಷಯಕ್ಕೂ ಕೋಪಿಸಿಕೊಂಡು ತಾಳ್ಮೆ ಕಳೆದುಕೊಂಡು ಕೋರ್ಟ್ ಮೆಟ್ಟಿಲು ಹತ್ತುವುದು ಮೂರ್ಖತನವೇ ಹೊರತು ಬುದ್ಧಿವಂತಿಕೆ ಅಲ್ಲ. ಬುದ್ಧಿ ಇದ್ದವರು ಸಮಾಧಾನದ ಚಿತ್ತದಿಂದ ಯೋಚಿಸಿ ಹದಗೆಟ್ಟಿರುವ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುವುದು ಎಂದು ನೋಡುತ್ತಾರೆಯೇ ವಿನಃ ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ.
ಹಾಗೆ ನೋಡುವುದಾದರೆ ವೈವಾಹಿಕ ಜೀವನದಲ್ಲಿ ಗಂಡು ಹೆಣ್ಣಿನ ನಡುವೆ ನಡೆಯುವ ಪ್ರತಿಯೊಂದು ಕಲಾಪಕ್ಕೂ ಕೋರ್ಟ್ ಮೆಟ್ಟಿಲು ಹತ್ತಿ ವಿಚ್ಚೇದನದ ಮೊರೆ ಹೋದರೆ ದಾಂಪತ್ಯಕ್ಕೆ ಯಾವ ಅರ್ಥವು ಇರುವುದಿಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ನಮ್ಮ ಕೈಯಲ್ಲೇ ಇರುತ್ತದೆ. ಕೋಪದ ಕೈಗೆ ಬುದ್ಧಿ ಕೊಡದೆ ತಾಳ್ಮೆಯಿಂದ ಯೋಚಿಸಿ ನೋಡಿದರೆ ಕೋರ್ಟ್, ಕೇಸು, ಕಲಾಪ ಎಲ್ಲದಕ್ಕಿಂತಲೂ ಉತ್ತಮವಾದ ಪರಿಹಾರ ಸಿಗುತ್ತದೆ. ಅಲ್ಲಿ ನಮ್ಮ ಸಮಸ್ಯೆಗಳ ಕುರಿತು ವಾದ ಮಂಡನೆ ಮಾಡುವವರು ನಾವೇ. ಸರಿ ತಪ್ಪುಗಳ ತಾಳೆ ಹಾಕಿ ಸೂಕ್ತ ಪರಿಹಾರ ಕೊಡುವ ನ್ಯಾಯಮೂರ್ತಿಗಳು ನಾವೇ.
ಇದರಿಂದ ಅದೆಷ್ಟೋ ಸಂಸಾರಗಳು ಕೂಡ ಉಳಿಯುತ್ತವೆ. ನಮ್ಮ ಅನನ್ಯ ಸಂಸ್ಕೃತಿಯೂ ಕೂಡ ಉಳಿಯುತ್ತದೆ. ಜತೆಗೆ ಹೆತ್ತವರ ಕಣ್ಣಲ್ಲಿ ಕಣ್ಣೀರು ಹಾಕಿಸುವುದು ಕೂಡ ತಪ್ಪುತ್ತದೆ.
-ಸುಸ್ಮಿತಾ ಕೆ. ಎನ್. ಅನಂತಾಡಿ
ಬಂಟ್ವಾಳ