Advertisement

ಕೋವಿಡ್ ಸೋಂಕಿನಿಂದ ರಷ್ಯಾ ಅಧ್ಯಕ್ಷರ ರಕ್ಷಣೆಗೆ ಸುರಂಗ !

02:24 PM Jun 19, 2020 | sudhir |

ಮಾಸ್ಕೋ: ರಷ್ಯಾ ಅಧ್ಯಕ್ಷರನ್ನು ಕೋವಿಡ್‌ -19 ವೈರಸ್‌ನಿಂದ ರಕ್ಷಿಸುವ ಸಲುವಾಗಿ ಪ್ರತ್ಯೇಕ ಡಿಸಿನ್ಫೆಕ್ಷನ್‌ ಸುರಂಗವೊಂದನ್ನು ಸಿದ್ಧಪಡಿಸಿರುವ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Advertisement

ರಷ್ಯಾದಲ್ಲಿ ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಪಟ್ಟಿಯಲ್ಲಿ ರಷ್ಯಾ 3ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್‌ಪುಟಿನ್‌ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸಿನ್ಫೆಕ್ಷನ್‌ ಸುರಂಗವನ್ನು ಅಧ್ಯಕ್ಷರ ಭದ್ರತಾ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

ಯಾರಾದರೂ ಅಧ್ಯಕ್ಷರು ವಾಸಿಸುವ ಕಟ್ಟಡ ಪ್ರವೇಶಿಸಬೇಕೆಂದರೆ ಡಿಸಿನ್ಫೆಕ್ಷನ್‌ ಸುರಂಗ ಮಾರ್ಗದ ಮೂಲಕ ತೆರಳು ವ್ಯವಸ್ಥೆ ಮಾಡಲಾಗಿದೆ. ರಷ್ಯಾದ ಪೆನ್ಜಾ ನಗರದಲ್ಲರುವ ಕಂಪೆನಿಯೊಂದು ಈ ಅತ್ಯಾಧುನಿಕ ಸುರಂಗ ಮಾರ್ಗ ನಿರ್ಮಿಸಿದೆ.

ರಷ್ಯಾದಲ್ಲಿ ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಿದ್ದು, ಗುರುವಾರ ರಾಷ್ಟ್ರದಲ್ಲಿನ ಸೋಂಕಿತರ ಸಂಖ್ಯೆ 5,53,301ಕ್ಕೆ ಹೆಚ್ಚಳವಾಗಿದೆ. 7,478 ಮಂದಿ ಮೃತಪಟ್ಟಿದ್ದಾರೆ. 3,04,342 ಮಂದಿ ಈ ವರೆಗೆ ಗುಣಮುಖರಾಗಿದ್ದು, 2,41,481 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next