Advertisement

ರೋಗಬಾಧೆಗೆ ತೆಂಗು ನಾಶ: ಕಂಗಾಲಾದ ರೈತರು

04:39 PM Sep 05, 2017 | |

ಹಾರನಹಳ್ಳಿ: ತೆಂಗಿಗೆ ಹವಮಾನ ವೈಪರೀತ್ಯವಾಗಿ ರೋಗದ ಬಾಧೆ ಹೆಚ್ಚಾಗಿ ರೈತರು ಕಂಗಲಾಗಿದ್ದಾರೆ. ನಗರೀಕರಣದ ವ್ಯಾಮೋಹ ವೈಭವೀಕರಣದ ಜೊತೆ ಹಳ್ಳಿಯಲ್ಲಿ ಕೃಷಿ ಬಿಡುವ ಪರಿಸ್ಥಿತಿ ಬಂದಿದೆ ಎಂದು ಕಾಸರಗೋಡು ಅಖೀಲ ಭಾರತೀಯ ತೋಟಪಟ್ಟಿ ಬೆಳೆಗಳ ಸುಸಂಘಟಿತ ಯೋಜನೆಯ ಸಮನ್ವಯಾಧಿಕಾರಿ ಡಾ.ಮಹೇಶ್ವರಪ್ಪ ಹೇಳಿದರು.

Advertisement

ಸಮೀಪದ ಬೋರನಕೊಪ್ಪಲು ತೋಟಗಾರಿಕೆ ವಿಜಾnನಗಳ ವಿಶ್ವ ವಿದ್ಯಾಲಯ ಬಾಗಲಕೋಟ, ತೆಂಗು ಸಂಶೋಧನಾ ಮತ್ತು ವಿಸ್ತರಣಾಕೇಂದ್ರ ಹಾಗೂ ಅಖೀಲ ಭಾರತೀಯ ತೆಂಗು ಸಂಶೋಧನಾ ಸಮನ್ವಯ ಯೋಜನೆ ಇವರ ಸಹಯೋಗದಲ್ಲಿ ನೆಡೆದ ವಿಶ್ವ ತೆಂಗು ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಂತ್ರಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಅರಸೀಕೆರೆ, ತಿಪಟೂರು ಈ ಭಾಗದ ತೆಂಗಿನ ಕಾಯಿ ಉತ್ತಮ್ಮ ಬೇಡಿಕೆ ಮಾರುಕಟ್ಟೆಯಿದೆ. ಆದರೆ ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ತೆಂಗಿನ ಮರಗಳಿಗೆ ಸುಳಿಕೂಳೆ ರೋಗ, ಎಲೆ ಚುಕ್ಕೆರೋಗ ಇತರ ರೋಗಗಳ ಬಗ್ಗೆ ಸಂಶೋಧನೆ ನೆಡೆಸಿ ರೋಗದ ನಿಯಂತ್ರಣದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಮಾಡಿ ರೈತರಿಗೆ ತೋರಿಸುವ ಕಾರ್ಯಗಳು ಈ ಕೇಂದ್ರದಿಂದ ನಡೆಯುತ್ತಿದೆ. ನೀರು ಇದ್ದರೆ ಮಾತ್ರ ತೆಂಗು ಬೆಳೆಯಿರಿ ಇಂದು ತಾಂತ್ರಿಕ ಕೃಷಿ ಪದ್ಧತಿಗಳನ್ನು ರೈತರು ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು. 

ತೆಂಗಿನ ಮರಗಳನ್ನು ಉಳಿಸಿ: ರಾಜ್ಯ ಸೌಹಾರ್ದ ಸಹಕಾರ ಒಕ್ಕೂಟದ ಅಧ್ಯಕ್ಷ ಮನೋಹರ್‌ ಮಸ್ಕಿ ಮಾತನಾಡಿ, ತೆಂಗಿನ ಬೆಳೆ ನೀರಿಲ್ಲದೆ ಸುಳಿಗಳು ಬಿಳುತ್ತಿದೆ ಇಂತಹ ಸಂದರ್ಭದಲ್ಲಿ ಇರುವ ತೆಂಗಿನ ಮರಗಳ ಉಳಿವಿಗೆ ಸ್ಥಳೀಯ ರೈತರ ಒಕ್ಕೂಟ ಸಂಘ ಮಾಡಿ ಸರ್ಕಾರ ಜಾಗದಲ್ಲೂ ರೈತರ ಜಾಗದಲ್ಲಿ ನೀರು ಪಡೆದು ತೆಂಗಿನ ಮರಗಳ ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಕುಣಿಗಲ್‌ ತಾಲೂಕು ತೆಂಗು ಉತ್ಪಾದಕ ಸಂಘದ ವ್ಯವಸ್ಥಾಪಕ ನಿರ್ದೇಶಕ, ಕಿರುತೆರೆ ನಟ ಹುಲಿಮಾನ ಗಂಗಾಧರಯ್ಯ ಮಾತನಾಡಿ, ಕಳೆದ 15 ವರ್ಷದ ಹಿಂದೆ ತೆಂಗಿನಕಾಯಿ ಬೆಲೆ 5, 6 ಇತ್ತು ಆದರೆ ಈಗ 20 ರೂ ಆಗಿದೆ. ಆದರೆ ಮಾರುಕಟ್ಟೆಯಲ್ಲಿ ಬೇರೆ ಧಾನ್ಯ ಇತರ ಬೆಲೆಗಳು ಗಗನಕ್ಕೆ ಹೋಗಿದೆ ತೆಂಗಿನ ಕಾಯಿ ಕೊಬ್ಬರಿಗಳಿಗೆ ಬೆಳೆ ಸಿಗುತ್ತಿಲ್ಲ ಏಕೆಂದರೆ ದಲ್ಲಾಳಿಗಳಿಂದ ತೆಂಗು ಬೆಳೆ ಬೆಳೆದ ರೈತರು ಶೋಷಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು. 

Advertisement

ಸರ್ಕಾರ ಗಮನ ಹರಿಸಲಿ: ಅರಸೀಕೆರೆ ತಾಲೂಕಿನ ಪ್ರಗತಿಪರ ರೈತ ಮಂಜುನಾಥ್‌ ಮಾತನಾಡಿ, ತೆಂಗಿನ ಜೊತೆ ಬಹು ಬೆಳೆಗಳ ಪದ್ಧತಿ ಅಳವಡಿಸಿ ಸಾವಯಕೃಷಿ, ಹೈನುಗಾರಿಕೆ, ಹನಿ ನೀರಾವರಿ ಪದ್ಧತಿ ಅಳವಡಿಸಿ ಕೊಂಡರೆ ನಾವು ಕೃಷಿ ಜೀವನ ನೆಡೆಸುವುದಕ್ಕೆ ಸಾಧ್ಯ ಮುಖ್ಯವಾಗಿ ನಮ್ಮ ಅರಸೀಕೆರೆ ತಾಲೂಕು ಬರ ಪರಿಸ್ಥಿತಿ ಶಾಶ್ವತ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದರು. 

ಅಂತರ್ಜಲ ಕುಸಿತ: ಬಾಗಲಕೋಟೆ ತೋಟ ಗಾರಿಕಾ ವಿಜಾnನಗಳ ವಿಶ್ವ ವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ.ವಿ.ನಾಚೇಗೌಡ ಮಾತನಾಡಿ, ರೈತರು ಜಮೀನುಗಳಲ್ಲಿ ಮನ ಬಂದಂತೆ ಕೊಳವೆ ಬಾವಿ ಕೊರೆದು ಅಂತರ್ಜಲ ಕುಸಿಯುತ್ತಿದೆ. ಮಳೆ ಅಭಾವ ಪ್ರಕೃತಿ ವಿಕೋಪದ ಪರಿಸ್ಥಿತಿ ಹಂತ ತಲುಪಿದ್ದೇವೆ ಭೂಮಿಗೆ ತಕ್ಕಂತ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ತಿಳಿಸಿದರು.

ಅರಸೀಕೆರೆ ತೋ.ಸಂ.ವಿ. ಕೇಂದ್ರ ಮುಖ್ಯಸ್ಥ ಆರ್‌.ಸಿದ್ದಪ್ಪ ವಿಶ್ವ ತೆಂಗು ದಿನಾಚರಣೆ ಮತ್ತು ಈ ಕೇಂದ್ರದಲ್ಲಿ ನೆಡೆಯುತ್ತಿರುವ ಕಾರ್ಯಾಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ತೆಂಗಿನ ತಳಿ ಇತರ ಮಾಹಿತಿಗಳ ಬಗ್ಗೆ ಕಿರುಹೊತ್ತಿಗೆಯನ್ನು ಬಿಡುಗೆಡೆ ಮಾಡಿ ರೈತರಿಗೆ ಹಂಚಿತರು.

ಅರಸೀಕೆರೆ ತೋಟಗಾರಿಕಾ ಇಲಾಖೆ ಸಹಾಯ ನಿರ್ದೇಶಕ ಶಿವಕುಮಾರ್‌ ಹನಿ ನೀರಾವರಿ ಬಗ್ಗೆ ಇತರೆ ಸರ್ಕಾರದಿಂದ ಬರುವ ಯೋಜನೆ ಬಗ್ಗೆ ತಿಳಿಸಿದರು. ಹಾಸನದ ತೋಟಗಾರಿಕಾ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಅಮರ ನಂಜುಂಡೇಶ್ವರ್‌, ಕೃಷಿ ಸಂಶೋಧನಾ ಕೇಂದ್ರದ ಪಾಲಣ್ಣ, ಹಾಸನ ಆಕಾಶವಾಣಿಯ ವಿಜಯ ಅಗಂಡಿ, ಹಾಸನದ ಗೌರಿಪುರದ ಪ್ರಗತಿ ಪರ ರೈತಮಹಿಳೆ ಹೇಮಾ ಅನಂತ್‌, ನೂರಾರು ರೈತರುಗಳು ಧರ್ಮಸ್ಥಳ ಸಂಘದ ಕಾರ್ಯಾಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next