Advertisement

ಕಾಲು ಬಾಯಿ ರೋಗ ತಡೆಗೆ ಕ್ರಮ ವಹಿಸಿ

05:44 PM Jun 11, 2021 | Team Udayavani |

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಮೂರುಗ್ರಾಮಗಳಲ್ಲಿ ರಾಸುಗಳಿಗೆ ಕಾಣಿಸಿಕೊಂಡಿರುವ ಕಾಲುಬಾಯಿರೋಗ ಹರಡದಂತೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನುಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚನೆನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಸಂಬಂಧ ಗುರುವಾರ ನಡೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ, ಹೊಂಗಳ್ಳಿ ಮತ್ತುಬೆಂಡಗಹಳ್ಳಿ ಗ್ರಾಮಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದಕಾಲುಬಾಯಿ ರೋಗ ಸಂಬಂಧ ವಿವರ ಮಾಹಿತಿ ಪಡೆದಜಿಲ್ಲಾಧಿಕಾರಿರೋಗ ವ್ಯಾಪಿಸದಂತೆ ಎಲ್ಲಾ ಮುನ್ನೆಚ್ಚರಿಕೆಕ್ರಮಗಳನ್ನು ಅತ್ಯಂತ ಕಟ್ಟೆಚ್ಚರದಿಂದ ಕೈಗೊಳ್ಳುವಂತೆ ತಿಳಿಸಿದರು.

ಕಾಲುಬಾಯಿ ರೋಗದಿಂದ ಬಳಲುವ ರಾಸುಗಳನ್ನು ಇತರೆರಾಸುಗಳೊಂದಿಗೆ ಇರದಂತೆ ಪ್ರತ್ಯೇಕವಾಗಿ ಇರಿಸಬೇಕು.ಪ್ರಕರಣ ಕಂಡ ಬಂದ ಸ್ಥಳದಲ್ಲಿ ಸೋಡಿಯಂ ಬೈ ಕಾಬೊìನೆಟ್‌ಸಿಂಪಡಿಸಬೇಕು. ಇನ್ನಿತರ ಅಗತ್ಯ ಕ್ರಮಗಳನ್ನು ಪಾಲಿಸಬೇಕುಎಂದರು. ರೋಗ ಕಾಣಿಸಿಕೊಳ್ಳಬಹುದಾದ ಸ್ಥಳಗುರುತಿಸಬೇಕು. ರೋಗ ತಡೆಗೆ ಅನುಸರಿಸಬೇಕಿರುವಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾನುವಾರು ಮಾಲಿಕರಿಗೆ ಅರಿವುಮೂಡಿಸಬೇಕು. ರೋಗದ ಹತೋಟಿ ಕುರಿತು ಹೆಚ್ಚಿನ ಮಾಹಿತಿಸಲಹೆ ನೀಡಬೇಕೆಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯವೀರಭದ್ರಯ್ಯ ಮಾತನಾಡಿ, ರೋಗ ಕಾಣಿಸಿಕೊಳ್ಳುವಸಂದರ್ಭದಲ್ಲಿ ಪಾಲಿಸಬೇಕಾದ ಎಲ್ಲಾ ಕ್ರಮಗಳಿಗೆ ಇಲಾಖೆಮುಂದಾಗಿದೆ. ಪ್ರಸ್ತುತ ರೋಗ ನಿಯಂತ್ರಣದಲ್ಲಿದೆ ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next