Advertisement

ರೇಷ್ಮೆ ಬೆಳೆಗಾರರ ಸಮಸ್ಯೆಗಳ ಚರ್ಚೆ

06:25 AM Jun 13, 2020 | Lakshmi GovindaRaj |

ರಾಮನಗರ: ಕೋವಿಡ್‌-19ರ ಪರಿಣಾಮ ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮಾಗಡಿ ಶಾಸಕ ಎ.ಮಂಜು ನೇತೃತ್ವ ದಲ್ಲಿ ಜಿಲ್ಲೆಯ ರೈತರು ರೇಷ್ಮೆ ಸಚಿವ ನಾರಾ ಯಣಗೌಡರು ಆಹ್ವಾನಿಸಿದ್ದ  ಸಭೆಯಲ್ಲಿ ಭಾಗವಹಿಸಿ ದ್ದರು. ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಮತ್ತು ರೈತರು ಕೋವಿಡ್‌-19 ಹಿನ್ನೆಲೆಯಲ್ಲಿ ತಾವು ಪಡುತ್ತಿರುವ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

Advertisement

ರೇಷ್ಮೆ ನೂಲು ಬಿಚ್ಚಾಣಿಗೆದಾರರಿಂದ ಉತ್ಪಾದನೆಯಾಗುತ್ತಿರುವ ಒಟ್ಟು ನೂಲು ಪ್ರಮಾಣದಲ್ಲಿ ಶೇ.18ರಷ್ಟು ಮಾತ್ರ ರಾಜ್ಯದಲ್ಲಿ ಬಳಕೆಯಾಗುತ್ತಿದೆ. ಉಳಿದ ಶೇ.82ರಷ್ಟು ಕಚ್ಚಾ ರೇಷ್ಮೆ ಉತ್ತರ ಪ್ರದೇಶ, ಗುಜರಾತ್‌, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು  ಹಾಗೂ ದೇಶದ ಇನ್ನಿತರ ರಾಜ್ಯಗಳಲ್ಲಿ ಮಾರಾಟವಾಗಬೇಕಿತ್ತು. ಆದರೆ ಕೋವಿಡ್‌-19 ಕಾರಣ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವು ಬೆಳೆದ ಗೂಡಿನ ಬೆಲೆಯೂ ಕುಸಿಯುತ್ತಿದೆ ಎಂದು ರೈತರು ಸಚಿವರಿಗೆ ಮಾಹಿತಿ ನೀಡಿದರು. 1 ಕೇಜಿ ಗೂಡು ಬೆಳೆಯಲು ತಮಗೆ ಕನಿಷ್ಠ 350 ರೂ. ವೆಚ್ಚವಾಗುತ್ತಿದೆ. ಆದರೆ ತಮ್ಮ ಗೂಡು ಕೇವಲ 100 ರಿಂದ 200 ರೂ.ಗೆ ಮಾರಾಟವಾಗುತ್ತಿದೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.

ಕೇಜಿ ಗೂಡಿಗೆ 150 ಪ್ರೋತ್ಸಾಹ ಧನಕ್ಕೆ ಒತ್ತಾಯ:  ರೇಷ್ಮೆ ಉದ್ಯಮ ಇಡೀ ಜಿಲ್ಲೆಯ ಆರ್ಥಿಕ ಜೀವ ನಾಡಿ, ಇದು ಉಳಿಯಬೇಕಾದರೆ ರೇಷ್ಮೆ ಕೃಷಿಕರ ಸಂಕಷ್ಟ ದೂರವಾಗಬೇಕು. ಹೀಗಾಗಿ ಪ್ರತಿ ಕೇಜಿ ಗೂಡಿಗೆ 150 ರೂ. ಪ್ರೋತ್ಸಾಹ ಧನ ಕೊಡುವಂತೆ ರೈತರು ಆಗ್ರಹಿಸಿದರು. ನರೇಗಾ  ಯೋಜನೆಯಡಿ ಯಲ್ಲಿ 1 ಎಕರೆಗೆ ಕನಿಷ್ಠ 50 ಸಾವಿರ ರೂ. ಕೂಲಿ ಹಾಗೂ ಇತರೆ ವೆಚ್ಚಗಳು ಸಿಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ರಾಜ್ಯದ ಆಯವ್ಯಯ ದಲ್ಲಿ ಪ್ರತಿ ವರ್ಷ ಕನಿಷ್ಠ 500 ಕೋಟಿ ರೂ. ಅನುನಾದನವನ್ನು ರೇಷ್ಮೆ  ಕೃಷಿಗೆ ಮೀಸಲಿಡಬೇಕು. ರೇಷ್ಮೆ ಇಲಾಖೆಯನ್ನು ಕೃಷಿ ಅಥವಾ ತೋಟಗಾರಿಕೆ ಇಲಾ ಖೆಯೊಂದಿಗೆ ವಿಲೀನ ಬೇಡ ಎಂದು ಶಾಸಕರಾದಿ ಯಾಗಿ ರೈತರು ಸಚಿವರನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next