Advertisement

ಚರ್ಚೆ ಚಾವಡಿ: NEP V/s SEP

11:19 PM Aug 31, 2023 | Team Udayavani |

ನಮ್ಮ ರಾಜ್ಯಕ್ಕೆ ನಮ್ಮದೇ ಶಿಕ್ಷಣ ನೀತಿ ಸಮಂಜಸ
1947ರಲ್ಲಿ ಭಾರತಕ್ಕೆ ಸ್ವತಂತ್ರ ಬಂದಾಗ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಶೇ.18. ಸುದೀರ್ಘ‌ ಪ್ರಯತ್ನ ಮತ್ತು ಸುಧಾರಣೆಯ ಮೂಲಕ 2022ರ ವರೆಗೆ ನಾವು ಸಾಧಿಸಿದ ಸಾಕ್ಷರತಾ ಪ್ರಮಾಣ ಶೇ. 77.70. ಶಿಕ್ಷಣಕ್ಕೆ ಪ್ರತೀ ಸರಕಾರಗಳು ಆದ್ಯತೆಯನ್ನು ನೀಡಿ­ದ್ದರೂ, ಅನೇಕ ಶೈಕ್ಷಣಿಕ ನೀತಿಗಳ ಮೂಲಕ ಬದಲಾವಣೆ ಮಾಡಿದ್ದರೂ ಇಂದಿನ ಹೊಸ ಶಿಕ್ಷಣ ನೀತಿ ಹಲವಾರು ಕಾರಣಗಳಿಗೆ ವಿವಾದಗಳನ್ನು ಮೇಲೆಳೆದುಕೊಂಡಿದೆ.

Advertisement

ಸ್ವತಂತ್ರ ಭಾರತದಲ್ಲಿ ಸಮಗ್ರ ಅಭಿವೃದ್ಧಿಯನ್ನು ಬಯಸಿದ್ದ ಅಂದಿನ ಪ್ರಧಾನಿ ಜವಾಹರ್‌ಲಾಲ್‌ ನೆಹರೂರವರು ತಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ತಮ್ಮ ಸಂಪುಟದ ಮೊದಲ ಶಿಕ್ಷಣ ಸಚಿವ ಮೌಲನಾ ಅಬ್ದುಲ್‌ ಕಲಂ ಅಜಾದ್‌ ಮುಖಾಂತರ ಬಲವಾದ, ರಾಷ್ಟ್ರವಾದದ ಮತ್ತು ಬಹುಸಂಸ್ಕೃತಿಯ ಶಿಕ್ಷಣ ನೀತಿ ನೀಡುವ ಪ್ರಯತ್ನ ಮಾಡಿದರು. 1948-49ರಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗ, 1952- 53ರಲ್ಲಿ ಸೆಕಂಡರಿ ಶಿಕ್ಷಣ ಆಯೋಗ, ಯೂನಿರ್ವಸಿಟಿ ಗ್ರಾಂಟ್ಸ… ಕಮಿಷನ್‌, ಕೊತಾರಿ ಕಮಿಷನ್‌ ಮೂಲಕ ದೇಶದಲ್ಲಿ ಆಧುನಿಕ ಶಿಕ್ಷಣ ನೀತಿಯನ್ನು ಮತ್ತು ವಿಜ್ಞಾನ ನೀತಿಯಲ್ಲಿ ಗೊತ್ತುವಳಿಯನ್ನು ಜಾರಿಗೊಳಿಸಿದರು. ಕೊತಾರಿ ಆಯೋಗದ ವರದಿಗೆ ಅನುಗುಣವಾಗಿ 1968ರಲ್ಲಿ ಆಮೂಲಾಗ್ರ ಬದಲಾವಣೆಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೊಳಿಸಿದರು. ಸಂವಿಧಾನದ ಅಡಿಯಲ್ಲಿ 14 ವರ್ಷದ ವರೆಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದು ಇದರ ಮೂಲಭೂತ ಉದ್ದೇಶವಾಗಿತ್ತು.

1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇನ್ನಷ್ಟು ಸುಧಾರಣೆ ಜಾರಿಗೆ ತಂದ ಆಂದಿನ ಪ್ರಧಾನಿ ರಾಜೀವ್‌ ಗಾಂಧಿಯವರು ಸಾಮಾಜಿಕ ಬದಲಾವಣೆಯ ವ್ಯತ್ಯಾಸಗಳನ್ನು ಸರಿಪಡಿಸಿ ದಮನಿತರು, ಮಹಿಳೆಯರಿಗೆ ಸಮಾನಾಂತರ ಶಿಕ್ಷಣ ನೀಡುವ ಸುಧಾರಣೆಗಳನ್ನು ಜಾರಿಗೆ ತಂದರು. ಮಕ್ಕಳ ಕೇಂದ್ರಿತ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿ ಆಪರೇಷನ್‌ ಬ್ಲಾಕ್‌ ಬೋರ್ಡ್‌ ಯೋಜನೆ ಮುಖಾಂತರ ಇಡೀ ದೇಶದಲ್ಲಿ ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಕೇಂದ್ರದ ಒಟ್ಟಾರೆ ಜಿಡಿಪಿಯಲ್ಲಿ ಶೇ. 6ರಷ್ಟು ಶಿಕ್ಷಣಕ್ಕೆ ವೆಚ್ಚ ಮಾಡಲು ಅವಕಾಶ ಕಲ್ಪಿಸಿದರು. 1992ರಲ್ಲಿ ಪಿ.ವಿ.ನರಸಿಂಹರಾವ್‌ ಅವರ ಕೇಂದ್ರ ಸರಕಾರ ಈ ನೀತಿಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿತು. 2005ರಲ್ಲಿ ಕೇಂದ್ರದ ಮನಮೋಹನ್‌ ಸಿಂಗ್‌ ಅವರ ಯುಪಿಎ ಸರಕಾರ ಸಾಮಾನ್ಯ ಕನಿಷ್ಠ ಕಾರ್ಯಸೂಚಿ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೆಲವು ಮಾರ್ಪಾಟುಗಳನ್ನು ಮಾಡಿ ವೃತ್ತಿಪರ ಕೋರ್ಸ್‌ಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರವೇಶ ಪರೀಕ್ಷೆಗೆ ಅವಕಾಶವಾಯಿತು.

ಈ ನೀತಿಯು ವೃತ್ತಿಪರ ಕೋರ್ಸ್‌ಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು, ಸಾಮಾಜಿಕ ನ್ಯಾಯ ಪರಿಪಾಲಿಸಲು ಮತ್ತು ಶಿಕ್ಷಣ ಶುಲ್ಕದ ಮೇಲೆ ನಿಯಂತ್ರಣ ಹಾಕಲು ಅವಕಾಶ ಮಾಡಿಕೊಟ್ಟಿತು.

2019ರಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಹೊಸ ಶಿಕ್ಷಣ ನೀತಿಯ ಕರಡನ್ನು ಪ್ರಕಟಿಸಿತು. ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಕೇಂದ್ರ ಸರಕಾರದ ಪೂರ್ವ ನಿಯೋಜಿತ ನಿರ್ಧಾರಕ್ಕೆ ಅನುಗುಣವಾಗಿ ಈ ನೀತಿಯನ್ನು ಕೇಂದ್ರ ಸಂಪುಟದ ಅನುಮೋದನೆ ಮೂಲಕ ಜಾರಿಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ 10+2 ಶಿಕ್ಷಣ ವ್ಯವಸ್ಥೆಗೆ ಬದಲಾಗಿ 5+3+3+4 ಹಂತದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು ಇದರ ಉದ್ದೇಶವಾಗಿದೆ. ಅಂದರೆ ಕರ್ನಾಟಕದಲ್ಲಿ ಪ್ರಸ್ತುತ 1ರಿಂದ 5ನೇ ತರಗತಿಯವರೆಗೆ ಪ್ರಾಥಮಿಕ, 6 ರಿಂದ 8ನೇ ತರಗತಿಯವರೆಗೆ ಮಾಧ್ಯಮಿಕ, 9 ಮತ್ತು 10ನೇ ತರಗತಿ ಸೆಕೆಂಡರಿ ಮತ್ತು 11 ರಿಂದ 12 ನೇ ತರಗತಿಯನ್ನು ಪದವಿ ಪೂರ್ವ ಎಂದು ವರ್ಗೀಕರಿಸಲಾಗಿದೆ. ಪದವಿ ಪೂರ್ವದ ಅನಂತರ 3 ವರ್ಷದ ಪದವಿ ಅಥವಾ 4 ವರ್ಷದ ವೃತ್ತಿಪದವಿಗೆ ಅವಕಾಶವಿರುತ್ತದೆ. ಇದರಿಂದ ಪ್ರಾಥಮಿಕ ಹಂತದಲ್ಲಿ ನಮ್ಮ ರಾಜ್ಯದ ಮಕ್ಕಳು ತಮ್ಮ ಇಚ್ಚೆಗೆ ಅನುಗುಣವಾಗಿ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

Advertisement

ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಆಯ್ಕೆ ಮಾಡಿ ತರಬೇತಿಯ ಮುಖಾಂತರ ಅವರ ಬೋಧ ನೆಗೆ ಅವಕಾಶ ಮಾಡಲಾಗಿದೆ. ಹೊಸ ಶಿಕ್ಷಣ ವ್ಯವಸ್ಥೆ ಜಾರಿಯಾದರೆ ನಮ್ಮ ರಾಜ್ಯದ ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರುವುದರ ಜತೆಗೆ ತರಬೇತಿ ಪಡೆದ ಶಿಕ್ಷಕರ ಮತ್ತು ಉಪನ್ಯಾಸಕರ ಕೊರತೆಯೂ ಎದುರಾ ಗುತ್ತದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಆಯ್ಕೆಗೆ ಈಗಿನ ವ್ಯವಸ್ಥೆಯಲ್ಲಿ ಮುಕ್ತ ಅವಕಾಶವಿರುತ್ತದೆ. ಹೊಸ ಶಿಕ್ಷಣ ನೀತಿಯ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಪರೋಕ್ಷವಾಗಿ ಹೇರುವ ಹುನ್ನಾರವಿರುತ್ತದೆ. ಹೊಸ ಶಿಕ್ಷಣ ನೀತಿಯು ಭಾರ ತೀಯ ಶಿಕ್ಷಣ ಪದ್ಧತಿಯ ಹೆಸರಿನಲ್ಲಿ ಈಗಿ ರುವ ಬಹು ಸಂಸ್ಕೃ ತಿಯ ಶಿಕ್ಷಣ ಪದ್ಧತಿಯನ್ನು ಕೊನೆಗಾಣಿಸುವ ಹುನ್ನಾರವನ್ನು ಹೊಂದಿರುತ್ತದೆ. ಇತಿಹಾಸ ತಿರುಚುವ, ವಾಸ್ತವ ಮರೆ ಮಾಚುವ, ಭಾವನಾತ್ಮಕ­ವಾಗಿ ಮನಸ್ಸು ಗಳನ್ನು ಕದಡುವ ಎಲ್ಲ ಅವಕಾಶ ಹೊಸ ನೀತಿಯಲ್ಲಿ ಕಾಣ ಬಹುದು.

ಹೊಸ ಶಿಕ್ಷಣ ಪದ್ದತಿಯು ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಸಣ್ಣ ಸಣ್ಣ ಶಾಲೆಗಳನ್ನು ಆಡಳಿತಾತ್ಮಕ ಕಾರಣಗಳನ್ನು ನೀಡಿ ಆಖೈರುಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ. ಇದರಿಂದ ಪ್ರಾದೇಶಿಕ­ವಾರು ಪ್ರಾಥಮಿಕ ಶಾಲೆಗಳು ಖಾಸಗಿಯವರ ಹಿಡಿತಕ್ಕೆ ಜಾರುತ್ತದೆ. ಹೊಸ ನೀತಿಯಲ್ಲಿ 6 ರಿಂದ 8ನೇ ತರಗತಿಯವರೆಗೆ ಬುನಾದಿ ಶಿಕ್ಷಣ ಎಂದು ಹೇಳಲಾಗಿದ್ದು, ಇದರ ಹಿಂದೆ ಗೌಪ್ಯ ಅಜೆಂಡಾ ಇರುತ್ತದೆ. ಯಾವುದೇ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅಥವಾ ಪ್ರಯೋಗ ಪ್ರಾಥಮಿಕ ಹಂತದಿಂದ ಪ್ರಾರಂಭಗೊಳ್ಳಬೇಕು. ಕರ್ನಾಟಕದಲ್ಲಿ 2 ವರ್ಷಗಳ ಹಿಂದೆ ಹೊಸ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಾಲೆಗಳನ್ನು ಹೊರತುಪಡಿಸಿ ಪದವಿ ಕಾಲೇಜುಗಳಲ್ಲಿ ಜಾರಿಗೊಳಿಸಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಹೊಸ ಶಿಕ್ಷಣ ನೀತಿಯಲ್ಲಿ ಆಯುರ್ವೇದ ಮತ್ತು ಭಾರತೀಯ ವೈದ್ಯ ಪದ್ಧತಿಯನ್ನು ಎಂಬಿಬಿಎಸ್‌ನಲ್ಲಿ ವಿಲೀನಗೊಳಿಸುವುದಾಗಿ ಹೇಳಲಾಗಿದೆ. ಇದಕ್ಕೆ ಪೂರ್ವ ತಯಾರಿ ಆಗಲಿ ಅಥವಾ ಸಮರ್ಥನೆಯಾಗಲಿ ಇರುವುದಿಲ್ಲ. ಹೊಸ ಶಿಕ್ಷಣ ನೀತಿಯಿಂದ ಯಾವ ಯಾವ ರೀತಿ ಉದ್ಯೋಗ ಅವಕಾಶಗಳು ದೊರೆಯುತ್ತದೆ ಎಂಬುದರ ಖಾತರಿ ಇಲ್ಲ. ಕೇಂದ್ರ ಸರಕಾರವು ತನ್ನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟಾರೆ ಜಿಡಿಪಿಯಲ್ಲಿ ಶೇಕಡಾ 3 ರಷ್ಟು ಅನುದಾನ ನೀಡಿದೆ ಆದರೆ ಹೊಸ ನೀತಿಗೆ ಶೇಕಡಾ 6 ಆವಶ್ಯಕತೆಯಿದೆ.

ರಾಜ್ಯ ಶಿಕ್ಷಣ ನೀತಿಯನ್ನು ಸರ್ವ ಜನರ ಬಹುಸಂಸ್ಕೃತಿಯ ಶಿಕ್ಷಣ ವ್ಯವಸ್ಥೆಯ ಆಧಾರದ ಮೇಲೆ ವ್ಯಕ್ತಿತ್ವ ನಿರ್ಮಾಣದ ಉದ್ದೇಶ ಮತ್ತು ಬೌದ್ಧಿಕ ವಿಕಸನದ ಆಧಾರದ ಮೇಲೆ ರಚಿಸ ಲಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತವರು ಮತ್ತು ಕಲಿಯುತ್ತಿರುವವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗಳನ್ನು ಮಾಡಿರುತ್ತಾರೆ. ನಮ್ಮ ಶಿಕ್ಷಣ ಈ ದೇಶದಲ್ಲಿ ಬಹು ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಗರನ್ನು ನೀಡಿರುತ್ತದೆ. ಇಡೀ ದೇಶದಲ್ಲಿ ಕರ್ನಾಟಕವು ಕುವೆಂಪುರವರ ಆಶಯದಂತೆ ಸರ್ವ ಜನರ ಸರ್ವ ಬದುಕಿನ ಶಾಂತಿಯ ತೋಟವಾಗಿರುತ್ತದೆ. ಹೊಸ ಶಿಕ್ಷಣ ನೀತಿ ಹೆಸರಿನಲ್ಲಿ ಕರ್ನಾಟಕವು ತನ್ನತನವನ್ನು ಸಂಸ್ಕೃತಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ಕರ್ನಾಟಕ ರಾಜ್ಯವು ನಮ್ಮ ದೇ ಶಿಕ್ಷಣ ನೀತಿಯ ಮುಖಾಂತರ ಇಡೀ ದೇಶಕ್ಕೆ ಮಾದರಿ ಆಗಿದ್ದು, ಕೇಂದ್ರ ಸರಕಾರವು ಆಯಾ ರಾಜ್ಯಗಳ ಶಿಕ್ಷಣ ನೀತಿಯನ್ನು ಗೌರವಿಸಲಿ.
 ರಮೇಶ್‌ ಬಾಬು,ವಿಧಾನ ಪರಿಷತ್ತಿನ ಮಾಜಿ ಸದಸ್ಯ

ರಾಷ್ಟ್ರೀಯ ಶಿಕ್ಷಣ ನೀತಿ ಬಿಜೆಪಿ, ಕೇಂದ್ರದ ನೀತಿ ಅಲ್ಲ

ದೇಶದಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020′ (ಎನ್‌ಇಪಿ-2020) ನಮ್ಮ ದೇಶದ 3ನೇ ರಾಷ್ಟ್ರೀಯ ಶಿಕ್ಷಣ ನೀತಿಯಾಗಿದೆ.
ದೇಶದ ಪ್ರತೀ ಮಗುವಿನ ಉತ್ತಮ ಭವಿಷ್ಯ, ಸಮಗ್ರ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತದ ಪ್ರಗತಿಯ ದೃಷ್ಟಿಕೋನದಿಂದ ಎನ್‌ಇಪಿ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿಯವರು ಎನ್‌ಇಪಿ ಕುರಿತು ಹೇಳಿದ್ದರು. ಹೀಗಾಗಿ ಎನ್‌ಇಪಿ ಬಿಜೆಪಿ ನೀತಿಯೂ ಅಲ್ಲ. ಕೇಂದ್ರ ಸರಕಾರದ ನೀತಿಯೂ ಅಲ್ಲ. ಇದೊಂದು ಭಾರತ ದೇಶದ ನೀತಿ. ರಾಷ್ಟ್ರೀಯ ನೀತಿಯಾಗಿದ್ದರೂ ಆಯಾ ರಾಜ್ಯಗಳಲ್ಲಿನ ಅವಶ್ಯಕತೆ, ಪ್ರಗತಿ, ಕೊರತೆಯನ್ನು ನೋಡಿಕೊಂಡು ಎನ್‌ಇಪಿಯನ್ನು ಮೂಲವಾಗಿಟ್ಟುಕೊಂಡು ಅಗತ್ಯತೆ ಅನುಸಾರ ಪಠ್ಯಕ್ರಮ ಸಿದ್ಧಪಡಿಸಿಕೊಂಡು ಅನುಷ್ಠಾನಗೊಳಿಸಬಹುದಾಗಿದೆ.

ನಮ್ಮ ದೇಶ ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಶಿಕ್ಷಣವೇ ಮೂಲ ಕಾರಣವಾಗಿದ್ದು, ಶಿಕ್ಷಣದÇÉೇ ಪರಿಹಾರಗಳಿವೆ. ಕೃತಕ ಬುದ್ಧಿಮತ್ತೆಯ (ಎಐ) ಈ ಕಾಲದಲ್ಲಿ 2 ದಶಕಗಳ ಹಿಂದೆ ರೂಪಿಸಲಾದ (2005 ಇಸವಿಯಲ್ಲಿ) ಪಠ್ಯಕ್ರಮವನ್ನು ಇಂದಿಗೂ ಪಾಲಿಸುವುದು ನಾವು ನಮ್ಮ ಮಕ್ಕಳಿಗೆ ಮಾಡುವ ಅನ್ಯಾಯವಲ್ಲದೇ ಇನ್ನೇನು? ಸಿಬಿಎಸ್‌ಸಿ, ಐಸಿಎಸ್‌ಇ ಹಾಗೂ ಇನ್ನಿತರ ಪಠ್ಯಕ್ರಮದ ಶಾಲೆಗಳಲ್ಲಿ ಓದುವ ಮಕ್ಕಳು ಸ್ಪರ್ಧೆಯಲ್ಲಿ ಸ್ವಲ್ಪಮಟ್ಟಿಗೆ ಮುಂದೆ ಸಾಗುತ್ತಾರೆ. ಆದರೆ, ಅವರಿಗಿಂತ ದೊಡ್ಡ ಸಂಖ್ಯೆಯಲ್ಲಿರುವ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ ಬಡವರ ಮಕ್ಕಳ ಗತಿ ಏನು?

ಎನ್‌ಇಪಿಯಲ್ಲಿನ ಉತ್ತಮ ಅಂಶಗಳನ್ನು ಪತ್ತೆ ಮಾಡಿ, ಅದನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಬದಲು ಎನ್‌ಇಪಿ ರದ್ದು ಮಾಡುವುದಾಗಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಬಡ ಮಕ್ಕಳಿಗೆ ಮಾಡುವ ಅನ್ಯಾಯವಾಗಿದೆ.

50 ಲಕ್ಷಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುವ ಸರಕಾರಿ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ಪ್ರಮುಖವಾಗಿ ಮೂಲಸೌಕರ್ಯ ಅಭಿವೃದ್ಧಿ, ಪಾಠ ಕಲಿಸುವ ಶಿಕ್ಷಕರಿಗೆ ತರಬೇತಿ ಮತ್ತು ಬೋಧನಾ ಸಾಮರ್ಥ್ಯ ಹೆಚ್ಚಳ ಹಾಗೂ ಕಲಿಕೆ ಬಲವರ್ಧನೆಗೊಳಿಸುವ ಚಟುವಟಿಕೆ ಆಧಾರಿತ ಕಲಿಕೆ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳ ಮಾಡಲೇಬೇಕಾದ ದೊಡ್ಡ ಸವಾಲುಗಳು ನಮ್ಮ ಮುಂದಿವೆ.

ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳಲ್ಲಿ ಸರಕಾರಿ ಶಾಲೆಗಳ ಮಕ್ಕಳು ಓದುವ, ಬರೆಯುವ ಹಾಗೂ ಲೆಕ್ಕ ಮಾಡುವ ಸಾಮರ್ಥ್ಯದಲ್ಲಿ ಹಿಂದುಳಿದಿವೆ. ವಯೋಮಾನಕ್ಕೆ ತಕ್ಕಂತೆ ಕಲಿಕೆ ಇಲ್ಲ ಎಂದು ವರದಿ ಮಾಡಿವೆ. ಇದಕ್ಕೆ ಹಾಲಿ ಇರುವ ಬೋಧನಾ ಕ್ರಮವೂ ಕಾರಣ. ಅದನ್ನು ಹೇಗೆ ಬಲಪಡಿಸಬೇಕು ಎಂಬುದು ಎನ್‌ಇಪಿಯಲ್ಲಿದೆ.

ಜಗತ್ತಿನÇÉೇ ಅತೀ ಹೆಚ್ಚು ಯುವಜನರು ಇರುವ ದೇಶ ಭಾರತ. ಆದರೆ, ಈ ಯುವಜನರಲ್ಲಿ ಕೌಶಲದ ಕೊರತೆ ಇದೆ. ಹೀಗಾಗಿ ದೊಡ್ಡ ಸಂಖ್ಯೆಯ ಯುವ ಸಮುದಾಯ ಈಗಲೂ ನಿರುದ್ಯೋಗಿಗಳಾಗಿ¨ªಾರೆ.

ಉತ್ತಮ ಗುಣಮಟ್ಟ ಮತ್ತು ತ್ವರಿತಗತಿಯ ಉತ್ಪಾದನೆಗಾಗಿ ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳ ನಿರ್ವಹಣೆ, ಕೌಶಲ, ಕೋಡಿಂಗ್‌, ಕೃತಕ ಬುದ್ಧಿಮತ್ತೆ, ಮಾಹಿತಿ ತಂತ್ರಜ್ಞಾನ, ರೋಬೋಟಿಕ್ಸ್‌, ಸಂಶೋಧನೆ, ನಾವಿನ್ಯತೆಯಂತಹ ಅಂಶಗಳನ್ನು ಪಠ್ಯಕ್ರಮದಲ್ಲಿ ಮೇಳವಿಸಿ, ಕ್ಷಿಪ್ರವಾಗಿ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ವೇಗಕ್ಕೆ ತಕ್ಕಂತೆ ಉದ್ಯೋಗ ಮತ್ತು ವ್ಯಾಸಂಗ’ ಒಂದಕ್ಕೊಂದು ಪೂರಕಗೊಳಿಸಬೇಕು ಎಂಬುದನ್ನು ಎನ್‌ಇಪಿ ಸ್ಪಷ್ಟವಾಗಿ ತಿಳಿಸಿದೆ. ಅದಕ್ಕೇನು ಮಾಡಬೇಕು ಎಂದು ವಿವರವಾಗಿ ತಿಳಿಸಿದೆ. ಮಾನವೀಯ ಮೌಲ್ಯಗಳು, ಮಕ್ಕಳ ಆಸಕ್ತಿ, ಸಂಗೀತ, ಕಲೆ, ಕ್ರೀಡೆ ಸೇರಿದಂತೆ ಅನೇಕ ಪ್ರಕಾರಗಳ ಪ್ರತಿಭೆಗೆ ಎನ್‌ಇಪಿ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ರಾತೋ ರಾತ್ರಿ ಇದನ್ನು ಜಾರಿಗೊಳಿಸಲಾಗದು. ಆದರೆ ಯೋಜಿತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ನಮ್ಮ ಮಕ್ಕಳು ಮತ್ತು ದೇಶದ ಭವಿಷ್ಯವನ್ನು ಉತ್ತಮವಾಗಿ ಕಟ್ಟಲು ಸಾಧ್ಯವಿದೆ.

ಬ್ರಿಟಿಷ್‌ ಕಾಲದಲ್ಲಿ ಅವರ ಆಳ್ವಿಕೆಗೆ ಪೂರಕವಾಗಿ, ಭಾರತೀಯರನ್ನು ದಾಸ್ಯತ್ವಕ್ಕೆ ಕಟ್ಟಿ ಹಾಕುವ ದೃಷ್ಟಿಯಿಂದ‌ ರೂಪಿಸಿದ್ದ ಶಿಕ್ಷಣದ ಬದಲು, ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಭಾರತೀಯ ಜ್ಞಾನ ಪರಂಪರೆಯನ್ನು ಆಧಾರಿತ ಶಿಕ್ಷಣವನ್ನು ಮರುಸ್ಥಾಪಿಸಬೇಕಿದೆ. ಬಹುಶಿಸ್ತೀಯ, ಬಹುಶಾಸ್ತ್ರೀಯ ಪದ್ಧತಿಗಳನ್ನು ಒಳಗೊಂಡ ಪರಿಣಾಮಕಾರಿ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು. ಪೂರ್ವ ಪ್ರಾಥಮಿಕ ಹಂತದಲ್ಲಿ ಮಗುವಿನ ಮೆದುಳಿನ ಕಲಿಕೆ ಸಾಮರ್ಥ್ಯ ಬಲವಾಗಿರುತ್ತದೆ. ವೇಗವಾಗಿ ಕಲಿಕೆ ಮತ್ತು ಅರ್ಥ ಮಾಡಿಕೊಳ್ಳುವ ಕಾರಣ ಆಟಿಕೆ, ಚಟುವಟಿಕೆ ಆಧಾರಿತ ನಲಿ, ಕಲಿಯಂತಹ ಪೂರಕ ಅಂಶಗಳಿಂದ ಹಿಡಿದು ಹೊಸದನ್ನು ಕಂಡು ಹಿಡಿಯುವ ಸಂಶೋಧನೆಗೆ ಉತ್ತೇಜಿಸುವ ಅಂಶಗಳು ಎನ್‌ಇಪಿಯಲ್ಲಿವೆ. ಸಾಮಾಜಿಕ, ಆರ್ಥಿಕವಾಗಿ ಅವಕಾಶ ವಂಚಿತರಿಗೆ ಸದೃಢ ಶಿಕ್ಷಣವನ್ನು ಒದಗಿಸಲು ಎನ್‌ಇಪಿ ಅಗತ್ಯವಿದೆ. ಏಕೆಂದರೆ ಸಿಬಿಎಸ್ಸಿ ಖಾಸಗಿ ಶಾಲೆಗಳು ಈಗಾಗಲೇ ಎನ…ಇಪಿ ಅಳವಡಿಸಿಕೊಂಡು ಮುಂದೆ ಸಾಗುತ್ತಿವೆ.ದೇಶದ ಎಲ್ಲ ರಾಜ್ಯ ಸರಕಾರಗಳ ಹಂತದಲ್ಲಿ ಚರ್ಚೆ ಮಾಡಿ ರಾಜ್ಯ ಸರಕಾರಗಳ ಶಿಕ್ಷಣ ಸಚಿವರ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಿ ನೀತಿಯನ್ನು ರೂಪಿಸಲಾಗಿದೆ. ಕರ್ನಾಟಕದ ಡಿಎಸ್‌ಇಆರ್‌ಟಿ, ಉನ್ನತ ಶಿಕ್ಷಣ ಪರಿಷತ್ತು ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಸಂಸ್ಥೆಗಳು, ಮುಖ್ಯಸ್ಥರು, ತಜ್ಞರು

ಎನ್‌ಇಪಿ ರೂಪಿಸಲು ಕೊಡುಗೆ ನೀಡಿ¨ªಾರೆ. ಎನ್‌ಇಪಿ ಉಪ ಸಮಿತಿಗಳಲ್ಲಿ ಅವರೆಲ್ಲರೂ ಕಾರ್ಯ ನಿರ್ವಹಿಸಿ¨ªಾರೆ. ಎನ್‌ಇಪಿಯನ್ನು ನಾಲ್ಕು ಗೋಡೆಗಳ ನಡುವೆ ಕುಳಿತು ಬರೆದಿದ್ದಲ್ಲ. ಅದನ್ನು ರೂಪಿಸುವಾಗ ಸಾರ್ವಜನಿಕವಾಗಿ ಅಭಿಪ್ರಾಯ ಕೋರಿ, ಪಡೆದು ಚರ್ಚೆ ಮಾಡಿ ರೂಪಿಸಲಾಗಿದೆ.
ಕರ್ನಾಟಕದ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಕೆಲವು ಯಶಸ್ವಿ ಮಾದರಿಗಳು, ಅನುಭವಗಳನ್ನು ಎನ್‌ಇಪಿ ರಚಿಸುವಾಗ ಬಳಸಲಾಗಿದೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿ¨ªಾಗ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನೇತೃತ್ವ ವಹಿಸಿದ್ದ ಎಸ್‌.ವಿ. ರಂಗನಾಥ ನೇತೃತ್ವದಲ್ಲಿ ಎನ್‌ಇಪಿ ಕುರಿತು ಚರ್ಚಿಸಿ, ಕರ್ನಾಟಕದಲ್ಲಿ ಅಳವಡಿಸಿಕೊಳ್ಳುವ ಕುರಿತು ನಿರ್ಧಾರ ಮಾಡಲಾಗಿತ್ತು ಎಂಬುದನ್ನು ಈಗ ನೆನಪಿಸಿಕೊಳ್ಳಬಹುದು.

ಉಳಿಸಿಕೊಂಡು, ಸವಾಲುಗಳು, ಲೋಪಗಳನ್ನು ಸರಿಪಡಿಸಿಕೊಂಡರೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಸುಳ್ಳು ಹರಡಿ ಎನ್‌ಇಪಿಗೆ ವಿರೋಧಭಾವ ಹುಟ್ಟಿಸಲು ಪ್ರಯತ್ನಿಸುವವರಿಗೆ, ಮಹಾತ್ಮಾ ಗಾಂಧಿಯವರ ಭಜನೆಯ ಸಾಲುಗಳಾದ ಸಬ್‌ಕೋ ಸನ್ಮತಿ ದೇ ಭಗವಾನ್‌’ ಮೂಲಕ ಪ್ರಾರ್ಥಿಸುತ್ತೇನೆ.
 ಅರುಣ್‌ ಶಹಾಪುರ ,ವಿಧಾನ ಪರಿಷತ್‌ ಮಾಜಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next