Advertisement

ಬಡ್ತಿ ನೀಡಲು ಇರುವ ತೊಡಕು ನಿವಾರಣೆಗೆ ನಿಗಮ ಸಭೆಯಲ್ಲಿ ಚರ್ಚಿಸಿ ಕ್ರಮ

12:01 PM Feb 07, 2017 | |

ಬೆಂಗಳೂರು: ಕೆಪಿಟಿಸಿಎಲ್‌ನಲ್ಲಿರುವ ಡಿಪ್ಲೊಮಾ ಎಂಜನಿ ಯರ್‌ಗಳನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ ಮತ್ತು ಅದಕ್ಕಿಂತ ಹೆಚ್ಚಿನ ಹುದ್ದೆಗೆ ಬಡ್ತಿ ನೀಡಲು ಇರುವ ತೊಡಕುಗಳ ಬಗ್ಗೆ ಮುಂದಿನ ನಿಗಮದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು. 

Advertisement

ನಗರದ ಕಾವೇರಿ ಭವನದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ದ ಡಿಪ್ಲೊಮಾ ಎಂಜಿನಿಯರ್ ಅಸೋಸಿಯೇಷನ್‌ ಸೋಮವಾರ ಹಮ್ಮಿಕೊಂಡಿದ್ದ ತಾಂತ್ರಿಕ ದಿನಚರಿ ಯಲ್ಲಿ ಮಾತನಾಡಿದ ಅವರು, “ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಪ್ಲೊಮಾ ಎಂಜನಿಯರ್‌ಗಳ ಮುಂಬಡ್ತಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು,” ಎಂದರು.  

2,500 ಕೋಟಿ ರೂ. ಬಾಕಿ: ರಾಜ್ಯದಲ್ಲಿ ಉಂಟಾದ ತೀವ್ರ ಬರದಿಂದ ಕೆಪಿಟಿಸಿಎಲ್‌ನ ವಿವಿಧ ವಿಭಾಗಗಳಿಗೆ ಗ್ರಾಹಕರು ಪಾವತಿಸಬೇಕಿದ್ದ 2,500 ಕೋಟಿ ರೂ. ಬಾಕಿ ಇದೆ. ಒಂದು ಕಡೆ ಕೈಗಾರಿಕೆಗಳಿಂದ ವಿದ್ಯುತ್‌ ಬೇಡಿಕೆ ಕಡಿಮೆಯಾದರೂ ಲಾಭ ಹರಿದುಬರುತ್ತಿದೆ.

ಆದರೆ, ರಾಜ್ಯದಲ್ಲಿ ಕೃಷಿ ಕ್ಷೇತ್ರದಿಂದ ಹೆಚ್ಚಿನ ಬೇಡಿಕೆ ಇದೆ. ಇಷ್ಟಿದ್ದರೂ ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.  ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್‌, ಕೆಪಿಟಿಸಿಎಲ್‌ ನಿರ್ದೇಶಕರಾದ ಡಾ.ಅದಿತಿ ರಾಜನ್‌, ಆರ್‌. ಶ್ರೀಧರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next