Advertisement

ಸ್ಟಿರಾಯ್ಡ್ ಪ್ರಕರಣ: ಕಮಲ್‌ಪ್ರೀತ್ ಕೌರ್‌ಗೆ ಮೂರು ವರ್ಷ ನಿಷೇಧ

11:00 PM Oct 12, 2022 | Team Udayavani |

ಹೊಸದಿಲ್ಲಿ: ಸ್ಟಿರಾಯ್ಡ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಭಾರತದ ಅಗ್ರಮಾನ್ಯ ಡಿಸ್ಕರ್‌ ಎಸೆತಗಾರ್ತಿ ಕಮಲ್‌ಪ್ರೀತ್‌ ಕೌರ್‌ ಅವರಿಗೆ “ಆ್ಯತ್ಲೆಟಿಕ್ಸ್‌ ಇಂಟೆಗ್ರಿಟಿ ಯೂನಿಟ್‌’ (ಎಐಯು) 3 ವರ್ಷ ಗಳ ನಿಷೇಧ ವಿಧಿಸಿದೆ. ಕಳೆದ ಮಾರ್ಚ್‌ 29ರಿಂದ ಅನ್ವಯವಾಗುವಂತೆ ಈ ನಿಷೇಧ ಜಾರಿಗೆ ಬರಲಿದೆ.

Advertisement

ಮಾರ್ಚ್‌ 7ರಂದು ಪಟಿಯಾಲಾದಲ್ಲಿ ಎಐಯು ಕಮಲ್‌ಪ್ರೀತ್‌ ಕೌರ್‌ ಅವರ ಸ್ಯಾಂಪಲ್‌ ಪರೀಕ್ಷಿಸಿತ್ತು. ಇದರಲ್ಲಿ ನಿಷೇಧಿತ “ಸ್ಟಾನೊಝೊಲೋಲ್‌’ ಅಂಶವಿದ್ದದ್ದು ಪತ್ತೆಯಾಗಿತ್ತು. ಅಂದೇ ಅವರನ್ನು ಅಮಾನತಿ ನಲ್ಲಿ ಇರಿಸಲಾಗಿತ್ತು. ಇದೀಗ ಶಿಕ್ಷೆ ಪ್ರಕಟಗೊಂಡಿದೆ.

ಕಳೆದ ಟೋಕಿಯೊ ಒಲಿಂಪಿಕ್ಸ್‌ ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ಕಮಲ್‌ಪ್ರೀತ್‌ 6ನೇ ಸ್ಥಾನ ಸಂಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ 65.06 ಮೀಟರ್‌ ದೂರದ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next