Advertisement

ಅಂಗನವಾಡಿ ಆಹಾರ ವಿತರಣೆಯಲ್ಲಿ ತಾರತಮ್ಯ

05:09 PM Apr 02, 2021 | Team Udayavani |

ಶಿರಹಟ್ಟಿ: ತಾಲೂಕಿನ ಬನ್ನಿಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು,ಗರ್ಭಿಣಿಯರು ಹಾಗೂ ಬಾಣಂತಿಯರಿಗೆಹಂಚುವ ಮೊಟ್ಟೆ, ಬೆಲ್ಲ, ಅಕ್ಕಿ, ಬೆಳೆಗಳನ್ನುಅಂಗನವಾಡಿ ಕಾರ್ಯಕರ್ತರುಸಮರ್ಪಕವಾಗಿ ವಿತರಿಸದೇ ತಾರತಮ್ಯಮಾಡುತ್ತಿದ್ದಾರೆ. ತಾರತಮ್ಯ ಆಗಬಾರದೆಂದರೆ ಅಂಗನವಾಡಿಯಲ್ಲಿ ಚಾರ್ಟ್‌ ಪ್ರಕಟಿಸಬೇಕೆಂದು ತಾಪಂ ಸದಸ್ಯೆ ಉಮಾ ಹೊನಗಣ್ಣವರಆಗ್ರಹಿಸಿದರು.

Advertisement

ಸ್ಥಳೀಯ ತಾಪಂ ಸಭಾ ಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಇಲಾಖೆವಾರು ಚರ್ಚೆಯಲ್ಲಿ ಮಾತ ನಾಡಿದರು. ಪೌಷ್ಟಿಕ ಆಹಾರ ವಿತರಣೆಯಲ್ಲಿವ್ಯತ್ಯಾಸವಾಗುತ್ತಿದ್ದು, ಗುಣಮಟ್ಟದ ಆಹಾರ ಪೂರೈಸುತ್ತಿರುವ ಬಗ್ಗೆ ಪ್ರತಿ ಅಂಗನವಾಡಿಗೆಭೇಟಿ ನೀಡಿ ಪರಿಶೀಲಿಸಿ ಎಂದು ಸಿಡಿಪಿಒ ಅಧಿಕಾರಿ ಮೃತ್ಯುಂಜಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಪಕ್ಕಾ ರಸ್ತೆ ನಿರ್ಮಿಸಿ: ಭೂ ಸೇನೆ ನಿಗಮದ ಅಧಿಕಾರಿಗಳು ಛಬ್ಬಿ ಗ್ರಾಮದಲ್ಲಿ ಬಂಜಾರ ಅಭಿವೃದ್ಧಿ ನಿಗಮದ 35 ಲಕ್ಷ ಅನುದಾನ ಬಳಸಿಕೊಂಡು ರಸ್ತೆ ಅಭಿವೃದ್ಧಿಪಡಿಸಿದ್ದಾರೆ.ಆದರೆ, ರಸ್ತೆ ಅಕ್ಕಪಕ್ಕ ಮೋರಂ(ಮಣ್ಣು)ಹಾಕಿಲ್ಲ, ಗುಣಮಟ್ಟದ ಕಾಮಗಾರಿಗೆ ಆದ್ಯತೆನೀಡಿಲ್ಲ. ಅವಶ್ಯವಿಲ್ಲದ ಕಡೆ ರಸ್ತೆ ಕಾಮಗಾರಿನಡೆಸುವುದರ ಮೂಲಕ ಸರ್ಕಾರದ ಅನುದಾನ ದುರ್ಬಳಕೆ ಮಾಡುತ್ತಿದ್ದಾರೆ ಎಂದು ತಾಪಂ ಸದಸ್ಯ ದೇವಪ್ಪ ಲಮಾಣಿ ಅವರು ಭೂ ಸೇನಾ ನಿಗಮದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಲಸಿಕೆ ಪಡೆಯಲು ಹಿಂದೇಟು: ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು,ಇಂದಿನಿಂದ 45 ವರ್ಷ ಮೇಲ್ಪಟ್ಟವರು ಮತ್ತು ಹಿರಿಯ ನಾಗರಿಕರು ತಪ್ಪದೇ ಕೋವಿಡ್‌ ಲಸಿಕೆಪಡೆಯುವಂತೆ ಜಾಗೃತಿ ಮೂಡಿಸುವುದುಅವಶ್ಯವಿದೆ. ಲಸಿಕೆ ಪಡೆದವರ ಪ್ರಮಾಣ ಕಡಿಮೆಇದ್ದು, ಅದರಲ್ಲೂ ಶಿರಹಟ್ಟಿ ಪಟ್ಟಣದಲ್ಲಿ ಲಸಿಕೆಪಡೆದುಕೊಳ್ಳುವವರು ಮುಂದೆ ಬರುತ್ತಿಲ್ಲ. 2ನೇಕೋವಿಡ್‌ ಸೋಂಕು ತಾಲೂಕಿನ ಕಡಕೋಳಗ್ರಾಮದಲ್ಲಿ ಒಂದು ಮತ್ತು ಹರಿಪೂರದಲ್ಲಿಒಂದು ಸೇರಿ ಎರಡು ಕೇಸ್‌ಗಳು ಮಾತ್ರ ಕಂಡುಬಂದಿದ್ದು, ಹಿರಿಯ ನಾಗರಿಕರು ಹಾಗೂಅನಾರೋಗ್ಯಪೀಡಿತರು ಲಸಿಕೆ ಪಡೆಯದಿದ್ದರೆ ಸೋಂಕಿನ ಪ್ರಮಾಣ ಹೆಚ್ಚುವ ಸಂಭವವಿದೆಎಂದು ತಾಲೂಕು ವೈದ್ಯಾಧಿಕಾರಿ ಸುಭಾಸ ದೈಗೊಂಡ ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಈಶಪ್ಪ ಲಮಾಣಿ, ಉಪಾಧ್ಯಕ್ಷೆ ಪವಿತ್ರ ಶಂಕಿದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ, ತಾಪಂ ಇಒ ನಿಂಗಪ್ಪ ಓಲೇಕಾರ ಸೇರಿದಂತೆ ತಾಪಂ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next