Advertisement

ಶಿಸ್ತಿನಿಂದ ವಿದೇಶದಲ್ಲೂ ಉತ್ತಮ ಹುದ್ದೆ: ಗೌಡಪ್ಪಗೋಳ

11:54 AM Jul 23, 2017 | Team Udayavani |

ಧಾರವಾಡ: ಭಾರತೀಯರು ಇಂದು ವಿದೇಶಗಳಲ್ಲಿ ಕೂಡ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವುದಕ್ಕೆ ಅವರು ಅಳವಡಿಸಿಕೊಂಡ ಶಿಸ್ತು, ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವವೇ ಕಾರಣ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಬಿ. ಗೌಡಪ್ಪಗೋಳ ಹೇಳಿದರು. 

Advertisement

ಜೆಎಸ್ಸೆಸ್‌ ಬನಶಂಕರಿ ಕಲಾ, ವಿಜ್ಞಾನ ಮತ್ತು ಎಸ್‌.ಕೆ. ಗುಬ್ಬಿ ವಿಜ್ಞಾನ ಮಹಾ ವಿದ್ಯಾಲಯದಲ್ಲಿ “ಸಮುತ್ಕರ್ಷ’ದ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ “ಐಎಎಸ್‌ ಒಂದು ವೃತ್ತಿ’ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 134 ಕೋಟಿ ಭಾರತೀಯರಲ್ಲಿ ಶೇ. 60ಕ್ಕಿಂತ ಹೆಚ್ಚು ಜನರು ಯುವಕರಾಗಿದ್ದಾರೆ.

2020ಕ್ಕೆ ಭಾರತೀಯರ ಸರಾಸರಿ ವಯಸ್ಸು 29 ಆಗಲಿದೆ. 2020ರಿಂದ 2050 ರವರೆಗೆ ಭಾರತಕ್ಕೆ ಸುವರ್ಣಯುಗವಾಗಲಿದೆ. ಭಾರತವು ವಿಶ್ವಮಾನ್ಯ ಆಗಬೇಕಾದರೆ ಯುವಶಕ್ತಿಯ ಸದ್ಬಳಕೆಯಾಗಬೇಕು ಎಂದರು. ದೇಶದ ಆಗು-ಹೋಗುಗಳನ್ನು ಮತ್ತು ಆಡಳಿತವನ್ನು ನಡೆಸುವ ಐಎಎಸ್‌ ಅಧಿಕಾರಿಗಳು ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯರಾಗಬೇಕು.

ಆ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಸಮುತ್ಕರ್ಷ ಧಾರವಾಡ ಘಟಕ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆಯಬೇಕು ಎಂದರು. ಕಾಲೇಜಿನ ಪ್ರಾಚಾರ್ಯ ಡಾ| ಜಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಬಿಐಟಿಎಂ ಎಂಜಿನೀಯರಿಂಗ್‌ ಕಾಲೇಜಿನ ಪ್ರೊ| ಸೂರಜ ಯಡಹಳ್ಳಿ ಐಎಎಸ್‌ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ನಾರಾಯಣ ಶ್ಯಾನಭಾಗ ಅವರು ಸಮುತ್ಕರ್ಷ ನಡೆಸುವ ತರಬೇತಿ ಬಗ್ಗೆ ವಿವರಿಸಿದರು. ಸಮುತ್ಕರ್ಷ ಕರ್ನಾಟಕ ಘಟಕದ ಚೇರಮನ್‌ರಾದ ನರರೋಗ ತಜ್ಞ ಡಾ| ಕ್ರಾಂತಿಕಿರಣ ಮತ್ತು ಡಾ| ಜಗದೀಶ ಬರಗಿ, ಅಚ್ಯುತ ಲಿಮಯೆ, ನಾರಾಯಣ ಶ್ಯಾನಭಾಗ, ಡಾ| ಶೋಭಾ, ಜಗದೀಶ ಹಿರೇಮಠ, ಪ್ರೊ| ಜೋಗಿನ, ನಿವೇದಿತಾ ಭಟ್‌, ವೈಭವ ಮುತಾಲಿಕ, ವಿಶಾಲ ಸಂಗಣ್ಣವರ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next