Advertisement

ರಾಜ್ಯದಲ್ಲಿ ಇಂದು ಕೋವಿಡ್ ಗೆ 52 ಬಲಿ : 41,400 ಹೊಸ ಪ್ರಕರಣಗಳು

06:48 PM Jan 25, 2022 | Team Udayavani |

ಬೆಂಗಳೂರು : ಕರ್ನಾಟಕದಲ್ಲಿ ಇಂದು (ಮಂಗಳವಾರ) ಹೊಸ ಕೋವಿಡ್ ಪ್ರಕರಣಗಳು 41,400 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 19,105 ಪ್ರಕರಣಗಳ ವರದಿಯಾಗಿದೆ.

Advertisement

ರಾಜ್ಯದ ಪಾಸಿಟಿವಿಟಿ ದರ 26.70% ಆಗಿದ್ದು, ದಾಖಲೆಯ ಅತೀ ಹೆಚ್ಚು ಒಂದೇ ದಿನ 53,093 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ3,50,742 ಸಕ್ರಿಯ ಪ್ರಕರಣಗಳಿದ್ದು,ಬೆಂಗಳೂರಿನಲ್ಲಿ ಅತೀ ಹೆಚ್ಚು 2 ಲಕ್ಷದ 12 ಸಾವಿರ ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 52 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 19 ಮಂದಿ ಬೆಂಗಳೂರಿನವರಾಗಿದ್ದಾರೆ.ಇಂದು 1,55,054 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next