Advertisement

ಸುರಕ್ಷಿತ ಏರ್‌ ಶೋಗೆ ವಿಪತ್ತು ನಿರ್ವಹಣಾ ಯೋಜನೆ

11:52 AM Jan 22, 2021 | Team Udayavani |

ಬೆಂಗಳೂರು: ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಯಾವುದೇ ಅವಘಡ, ವಿಪತ್ತು ಉಂಟಾಗ ದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಇತರೆ ಇಲಾಖೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ವಿಪತ್ತು ನಿರ್ವಹಣೆ ಯೋಜನೆ ರೂಪಿಸಿದೆ.

Advertisement

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್‌.ಅಶೋಕ್‌, 2019ರ “ಏರೋ ಇಂಡಿಯಾ’ ಪ್ರದರ್ಶನ ಸಂದರ್ಭದಲ್ಲಿ ವಾಯುನೆಲೆಯ ಹೊರಾಂಗಣದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ರೀತಿಯ ಅವಘಡ ಉಂಟಾಗದಂತೆ ತಡೆಯಲು ಯಲಹಂಕದ ಭಾರತೀಯ ವಾಯುನೆಲೆ ವತಿಯಿಂದ ಒಳಾಂಗಣ ವಿಪತ್ತು ನಿರ್ವಹಣೆ ಯೋಜನೆ ರೂಪಿಸಿದ್ದರೆ, ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗ ಹೊರಾಂಗಣ ವಿಪತ್ತು ನಿರ್ವಹಣೆ ಯೋಜನೆ ರೂಪಿಸಿದೆ ಎಂದು ಹೇಳಿದರು.

ವೆಬ್ಸೈಟ್‌- ಆ್ಯಪ್ಅಭಿವೃದ್ಧಿ: ಇದೇ ಮೊದಲ ಬಾರಿಗೆ ವೈಮಾನಿಕ ಪ್ರದರ್ಶನಕ್ಕಾಗಿ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ವಿಶೇಷ ಭೌಗೋಳಿಕ ಮಾಹಿತಿ ವ್ಯವಸ್ಥೆಯ (ಜಿಐಎಸ್‌) ವೆಬ್‌ಸೈಟ್‌ (//dev. ksrsac.in/aeroshow)  ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಒಳಾಂಗಣ, ಹೊರಾಂಗಣ ವಿಪತ್ತು ನಿರ್ವಹಣಾ ಯೋಜನೆಯ ಎಲ್ಲ ಮಾಹಿತಿ ಲಭ್ಯವಿರಲಿದೆ. ವಿಪತ್ತು, ತುರ್ತು ಘಟನೆಗಳನ್ನು ವರದಿ ಮಾಡಲು ಹಾಗೂ ಅಗತ್ಯ ಸಂಪನ್ಮೂಲಗಳನ್ನು ಗುರುತಿಸಿ ನೆರವಾಗಲು ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು.

ಅಧಿಕಾರಿಗಳ ನಿಯೋಜನೆ: ವಿಪತ್ತು ನಿರ್ವಹಣೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವಿಪತ್ತು ಸ್ಪಂದನೆ ಮೇಲ್ವಿಚಾರಣಾ ಕೇಂದ್ರ ವ್ಯವಸ್ಥೆ ರೂಪಿಸಲಾಗಿದೆ. ಒಳಾಂಗಣ ವಿಪತ್ತು ನಿರ್ವಹಣೆಗೆ ವಾಯುಸೇನೆಯ ಒಬ್ಬ ಹಿರಿಯ ಅಧಿಕಾರಿ, ಹೊರಾಂಗಣ ವಿಪತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರನ್ನು ಆದೇಶಾಧಿಕಾರಿಯಾಗಿ ನೇಮಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಗಳ ಒಬ್ಬ ಉಪ ಆದೇಶಾಧಿಕಾರಿ ಮತ್ತು ನೋಡಲ್‌ ಅಧಿಕಾರಿ  ಇರಲಿದ್ದಾರೆ.ಜತೆಗೆ ಎಚ್‌ಎಎಲ್‌, ಭಾರತೀಯ ವಾಯುಪಡೆ, ಸಿಐಎಸ್‌ಎಫ್, ಎನ್‌ಡಿಆರ್‌ಎಫ್ ಹಾಗೂ ಕೇಂದ್ರ ಸರ್ಕಾರದ ಇತರೆ ಸಂಸ್ಥೆಗಳ ಅಧಿಕಾರಿಗಳಿರಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಡ್ರಗ್ಸ್‌ ದಂಧೆ: ಪೆಡ್ಲರ್‌ಗಳಿಬ್ಬರ ಬಂಧನ

Advertisement

61 ವಿಮಾನ ಪ್ರದರ್ಶ

13ನೇ ಆವೃತ್ತಿಯ “ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ 14 ರಾಷ್ಟ್ರಗಳ 541 ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಈ ಪೈಕಿ 463 ದೇಶೀಯ ಹಾಗೂ 78 ವಿದೇಶಿ ಪ್ರದರ್ಶಕರಿ ರಲಿದ್ದಾರೆ. ಒಟ್ಟು 61 ವಿಮಾನಗಳು ಪ್ರದರ್ಶನ ನೀಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next