Advertisement
ಆದರೆ ಅಧಿ ಕಾರಿಗಳ ನಿರ್ಲಕ್ಷ್ಯವೋ ಅಥವಾ ಸಿಬ್ಬಂದಿಗಳು ನಿರ್ಲಕ್ಷ್ಯವೋ, ವಿದ್ಯಾರ್ಥಿಗಳು ಮಾತ್ರ ಸೌಕರ್ಯಗಳಿಂದ ಚಿತರಾಗಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಅಸ್ವತ್ಛತೆಯಿಂದ ಎನ್1ಎಚ್1 ಸೋಂಕು ತಗುಲಿ ಈಚೆಗೆ ಗ್ರಾಮದಲ್ಲಿ ವ್ಯಕ್ತಿ ಮೃತ್ತಪಟ್ಟಿರುವ ಘಟನೆ ನಡೆದಿದೆ. ಆದರೂ ಸಂಬಂಧಪಟ್ಟವರು ಸರ್ಕಾರದಿಂದ ಮಂಜೂರಾದ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಆರೋಗ್ಯಯುತ ವಾತವರಣ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸೌಕರ್ಯಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಅಡುಗೆ ಕೋಣೆ ಅನೈರ್ಮಲ್ಯದ ತಾಣವಾಗಿದೆ. ನೀರಿನ ಟ್ಯಾಂಕ್ ಮೇಲೆ
ಯಾವುದೇ ಮುಚ್ಚಳ ಅಳವಡಿಸಲಿಲ್ಲ. ಹೀಗಾಗಿ ನೀರಿನಲ್ಲಿ ಕಸಕಡ್ಡಿ ಬಿದ್ದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾದರೂ ಅದನ್ನೇ ನಿತ್ಯ ಬಳಕೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ವಾಟರ್ ಹೀಟರ್ ಹಾಳು: ವಸತಿ ನಿಲಯದ ಮೇಲೆ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾಗಿದ್ದ, ವಾಟರ್ ಹೀಟರ್ ಯಂತ್ರ ಉಪಯೋಗಕ್ಕೆ ಬಾರದಂತಾಗಿದೆ. ಆದರೂ ಈವರೆಗೆ ಅದನ್ನು ದುರಸ್ಥಿ ಮಾಡುವುದು ಅಥವಾ ಬೇರೆ ವ್ಯವಸ್ಥೆ ಮಾಡಲು ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಚಳಿಗಾಲದಲ್ಲೂ ತಣ್ಣೀರು ಸ್ನಾನ ಮಾಡಿ ಶಾಲೆ ಹೋಗುವ ಸ್ಥಿತಿ ಇದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ವಸತಿ ನಿಲಯದಲ್ಲಿ ವಾಟರ್ μಲ್ಟರ್ ಯಂತ್ರ ನೀಡಲಾಗಿದೆ. ಇದು ಮಕ್ಕಳಿಗೆ ಉಪಯೋಗಕ್ಕೆ ಬಾರದೇ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಆದರೂ ಸಂಬಂಧ ಪಟ್ಟವರು ದುರಸ್ಥಿ ಮಾಡಲು ಮುಂದಾಗಿಲ್ಲ.
ಹೀಗಾಗಿ ಇಟ್ಟ ಸ್ಥಳದಲ್ಲೆ ಧೂಳು ತಿನ್ನುತ್ತಿದೆ.
Related Articles
Advertisement
ಅಡುಗೆ ಕೋಣೆ ಅವ್ಯವಸ್ಥೆ ತಾಣ: ಅಡುಗೆ ಮಾಡುವ ಕೋಣೆ ಅವ್ಯವಸ್ಥೆಯ ತಾಣವಾಗಿದೆ. ಒಳಗಡೆ ಹೋದರೆ ಸಾಕು ಪಾತ್ರೆಗಳು ಹಾಗೂ ಊಟ ಮಾಡುವ ತಟ್ಟೆ ಅಲ್ಲಲ್ಲಿ ಬಿದ್ದಿವೆ. ನೀರಿನ ಟ್ಯಾಂಕ್ ಮೇಲೆ ಯಾವುದೇ ಮುಚ್ಚಳ ಅಳವಡಿಸದೇ ಎಲ್ಲಾ ಕೆಲಸಕ್ಕೂ ಇಲ್ಲಿನ ನೀರನ್ನೇ ಬಳಸಲಾಗುತ್ತ¨
ವೀರಾರೆಡ್ಡಿ ಆರ್.ಎಸ್.