Advertisement

ದೌರ್ಜನ್ಯ ಖಂಡಿಸಿ ಡಿಎಸ್ಸೆಸ್‌ ಪ್ರತಿಭಟನೆ

02:33 PM Jul 18, 2017 | |

ತಾಳಿಕೋಟೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಲಿತರ ಮೇಲೆ ದಬ್ಟಾಳಿಕೆ ಮತ್ತು ದೌರ್ಜನ್ಯ ನಡೆಯುತ್ತಿದ್ದರೂ ಗೃಹ ಇಲಾಖೆ ಮತ್ತು ಸರ್ಕಾರ ದಲಿತರಿಗೆ ರಕ್ಷಣೆ ಕೊಡಲು ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸೋಮವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ನಂತರ ವಿಜಯಪುರ ಸರ್ಕಲ್‌ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿಎಸ್ಸೆಸ್‌ ಜಿಲ್ಲಾ ಸಂಚಾಲಕ ಸುರೇಶ ಮಣೂರ ಮಾತನಾಡಿ, ರಾಜ್ಯದಲ್ಲಿ ದಲಿತ ವರ್ಗದ ಜನರ ಮೇಲೆ ದೌರ್ಜನ್ಯ ದಬ್ಟಾಳಿಕೆಗಳು ದಿನನಿತ್ಯ ನಡೆಯುತ್ತಿವೆ. ಸಾಮಾಜಿಕ ನ್ಯಾಯದ ತಳಹದಿ ಮೇಲೆ ಬದುಕುತ್ತಿರುವ ದಲಿತ ವರ್ಗದ ಜನರಿಗೆ ಕೆಲವು ಪಟ್ಟಣ ಮತ್ತು ಗ್ರಾಮಾಂತರ ಮಟ್ಟದಲ್ಲಿ ಬದುಕುವ ಹಕ್ಕನ್ನೇ ಕಳೆದುಕೊಂಡಂತಾಗಿದೆ ಎಂದರು. 

ಜಾತಿವಾದಿಗಳ ಅಟ್ಟಹಾಸಕ್ಕೆ ಎಷ್ಟೋ ದಲಿತ ಕುಟುಂಬಗಳು ನಲುಗಿ ಹೋಗಿವೆ. ಈ ಎಲ್ಲ ದೌರ್ಜನ್ಯ ಘಟನೆಗಳು ಹಾಡುಹಗಲೇ
ನಡೆಯುತ್ತಿದ್ದರೂ ಅ ಧಿಕಾರಿಗಳ ನಿರ್ಲಕ್ಷ ಮತ್ತು ಸರ್ಕಾರಗಳ ಜಾಣ ಕುರುಡುತನಕ್ಕೆ ದಲಿತ ಕುಟುಬಗಳು ಬಲಿಯಾಗುವಂತಹ ಸಂದರ್ಭ ಸೃಷ್ಟಿಯಾಗಿದೆ.

ವಿಜಯಪುರ ಜಿಲ್ಲೆಯ ಹಾಳ ಗುಂಡಕನಾಳ ಗ್ರಾಮದಲ್ಲಿ ದಲಿತ ವೃದ್ಧನನ್ನು ಕಂಬಕ್ಕೆ ಕಟ್ಟೆ ಥಳಿಸಿ ದೌರ್ಜನ್ಯ ನಡೆಸಲಾಗಿದೆ. ಮಡಿಕೇಶ್ವರ ಗ್ರಾಮದ ದಲಿತ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ದೇವರ ಹುಲಗಬಾಳ
ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಈ ಎಲ್ಲ ಘಟನೆಗಳನ್ನು ದಲಿತ ಸಘರ್ಷ ಸಮಿತಿ ಬಲವಾಗಿ ಖಂಡಿಸುತ್ತದೆ
ಎಂದರು. ದಲಿತರಿಗೆ ರಕ್ಷಣೆ ಕೊಡಬೇಕಾದ ಸರ್ಕಾರ ದಲಿತರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕೂಡಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಜರುಗಿಸಬೇಕು ಮತ್ತು ದಲಿತರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು. 

ಜಿಲ್ಲಾ ಸಂಘಟನಾ ಸಂಚಾಲಕ ದೇವೇಂದ್ರ ಹಾದಿಮನಿ ಮಾತನಾಡಿ, ರಾಜ್ಯದ ಬಹುತೇಕ ಕಡೆಗಳಲ್ಲಿ ದಲಿತ ಕುಟುಂಬದವರ ಮೇಲೆ ಹಲ್ಲೆ ದೌರ್ಜನ್ಯನಡೆಯುತ್ತಿದ್ದರು ಸರ್ಕಾರ ಕ್ರಮ ಕೈಗೊಂಡಿಲ್ಲ. ಹಾಳಗುಂಡಕನಾಳ, ದೇವರ ಹುಲಗಬಾಳ, ಮಡಿಕೇಶ್ವರ ಗ್ರಾಮದಲ್ಲಿ ದಲಿತರು ಒಬ್ಬಂಟಿಯಾಗಿ ತಿರುಗಾಡದಂತೆ ಜಾತಿವಾದಿಗಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಹಿರಂಗ ಸಭೆಗೂ ಮುನ್ನ ಅಂಬೇಡ್ಕರ್‌ ಸರ್ಕಲ್‌, ಅಂಬಾಭವಾನಿ ಮಂದಿರ ರಸ್ತೆ, ಕತ್ರಿ ಬಜಾರ್‌, ವಿಠಲ ಮಂದಿರ ರಸ್ತೆ, ಶಿವಾಜಿ ಸರ್ಕಲ್‌,
ರಾಣಾಪ್ರತಾಪ ಸರ್ಕಲ್‌ಗ‌ಳಿ ರ್ಯಾಲಿ ಸಾಗಿ ವಿಶೇಷ ತಹಶೀಲ್ದಾರ ಎಸ್‌.ಎಚ್‌. ಅರಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಮುಖಂಡರಾದ ಎಸ್‌.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಶಾಂತಪ್ಪ ತಮದಡ್ಡಿ, ಮಾಳಪ್ಪ ಬಿಳೇಭಾವಿ, ರಮೇಶ ಹೊನ್ನಳ್ಳಿ, ಮಹೇಶ ಚಲವಾದಿ, ಕಾಶೀನಾಥ ಕಾರಗನೂರ, ದೇವು ಗೊಟಕುಣಕಿ, ಮಹಾಂತೇಶ ಕಟ್ಟಿಮನಿ, ರಾಜು ಬಳಗಾನೂರ, ರಾಘವೇಂದ್ರ ಕೂಚಬಾಳ, ಶ್ರೀಶೈಲ ಕಟ್ಟಿಮನಿ, ಯಮನಪ್ಪ ತಳವಾರ, ಜೈಭೀಮ ಮುತ್ತಗಿ, ಚಂದ್ರಶೇಖರ ದೊಡಮನಿ, ಶರಣು
ಭಂಟನೂರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next