Advertisement

JDS ಜತೆಗಿನ ಮೈತ್ರಿಗೆ ಬಿಜೆಪಿಯಲ್ಲಿ ಭಿನ್ನಧ್ವನಿ

10:16 PM Jul 26, 2023 | Team Udayavani |

ಬೆಂಗಳೂರು: ಜೆಡಿಎಸ್‌ ಜತೆಗಿನ ತೆರೆಮರೆಯ ಹೊಂದಾಣಿಕೆಯ ಬಗ್ಗೆ ಈಗ ಬಿಜೆಪಿಯಲ್ಲೇ ಭಿನ್ನಧ್ವನಿ ವ್ಯಕ್ತವಾಗಿದ್ದು, ಪಕ್ಷಕ್ಕೆ ಬಲ ಇರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ.

Advertisement

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಪತ್ರಿಕಾಗೋಷ್ಠಿಯ ಬಳಿಕ ಬಿಜೆಪಿಯ ಆಂತರಿಕ ವಲಯದಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೆಡಿಎಸ್‌ ಸಂದರ್ಭಕ್ಕೆ ಅನುಸಾರವಾಗಿ ತನ್ನ ನಡೆಯನ್ನು ಬದಲಿಸಿಕೊಳ್ಳುತ್ತಿದೆ. ಇದರಿಂದ ಪಕ್ಷದ ಹಿತಾಸಕ್ತಿಗೆ ಸಮಸ್ಯೆಯಾಗುತ್ತಿದೆ. ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲೇ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ತೆರೆಮರೆಯ ಹೊಂದಾಣಿಕೆ ನಡೆದರೆ ಈ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆ ಎಂಬುದು ಬಿಜೆಪಿಯ ವಾದ.

ಪ್ರತ್ಯಕ್ಷ ಅಥವಾ ಪರೋಕ್ಷ ಹೊಂದಾಣಿಕೆ ನಡೆದರೂ ಹಳೆ ಮೈಸೂರು ಭಾಗದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಮೇಲೆ ಜೆಡಿಎಸ್‌ ಕಣ್ಣು ಹಾಕಬಹುದು. ಇದರಿಂದ ಪಕ್ಷಕ್ಕೆ ಖಂಡಿತ ಲಾಭವಾಗಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next