“ಆಚಾರ್ ಆ್ಯಂಡ್ ಕೋ’ ನಮ್ಮ ಅಚ್ಚ ಕನ್ನಡದ ಸೊಗಡಿನ ಸಿನಿಮಾ. ಸಿನಿಮಾವನ್ನು ನೋಡಿದ ಪ್ರತಿಯೊಬ್ಬರಿಗೂ 1960ರ ದಶಕದ ಚಿತ್ರಣ ಕಣ್ಮುಂದೆ ಬರುತ್ತದೆ. ನಮ್ಮ ಅಜ್ಜ-ಅಜ್ಜಿ, ತಂದೆ- ತಾಯಿ, ಹಿರಿಯರು ಇಂದಿನ ಜನರೇಶನ್‌ಗೆ ಹೇಳುತ್ತಿದ್ದ ಆ ಹಿಂದಿನ ದಿನಗಳನ್ನು ಈ ಸಿನಿಮಾದಲ್ಲಿ ತೋರಿಸಿ ದ್ದೇವೆ. ಖಂಡಿತವಾಗಿಯೂ ಇಡೀ ಫ್ಯಾಮಿಲಿ ಕೂತು ನೋಡುವಂಥ ಈ ಸಿನಿಮಾ, ನೋಡುಗರನ್ನು ಐವತ್ತು ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ’ – ಇದು ಈ ವಾರ ತೆರೆಗೆ ಬರುತ್ತಿರುವ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಬಗ್ಗೆ ನಿರ್ದೇಶಕಿ ಸಿಂಧೂ ಶ್ರೀನಿವಾಸ ಮೂರ್ತಿ ಅವರ ಮಾತು.
ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರ ಸಂಖ್ಯೆ ಕಡಿಮೆ ಎಂಬ ಮಾತುಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾದರೂ, ಚಿತ್ರರಂಗಕ್ಕೆ ನಿರ್ದೇಶಕಿಯಾಗಿ ಪರಿಚಯವಾಗುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇಂಥ ಬೆರಣಿಕೆಯ ಮಹಿಳಾ ನಿರ್ದೇಶಕರ ಸಾಲಿಗೆ ಈ ವಾರ ತೆರೆ ಕಾಣುತ್ತಿರುವ “ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಮೂಲಕ ಸಿಂಧೂ ಶ್ರೀನಿವಾಸಮೂರ್ತಿ ಮತ್ತೂಬ್ಬ ನಿರ್ದೇಶಕಿಯಾಗಿ ಸೇರ್ಪಡೆಯಾಗುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ “ಆಚಾರ್ ಆ್ಯಂಡ್ ಕೋ’ ಬಗ್ಗೆ ಮಾತನಾಡಿದ ಸಿಂಧೂ, ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ಈ ಸಿನಿಮಾದ ಸಬ್ಜೆಕ್ಟ್ ಕೇಳಿದಾಗಲೇ “ಪಿಆರ್‌ಕೆ ಪ್ರೊಡಕ್ಷನ್’ನವರು ತುಂಬ ಖುಷಿಯಿಂದ ಸಿನಿಮಾ ಮಾಡಲು ಒಪ್ಪಿಕೊಂಡರು. ಅಷ್ಟೇ ಅಲ್ಲದೆ ಸಿನಿಮಾಕ್ಕೆ ಏನೇನೂ ಬೇಕೋ, ಅದೆಲ್ಲವನ್ನೂ ಒದಗಿಸಿದ್ದಾರೆ. ಇವತ್ತು “ಆಚಾರ್ ಆ್ಯಂಡ್ ಕೋ’ ಸಿನಿಮಾ ಇಷ್ಟು ಚೆನ್ನಾಗಿ ಬರಲು ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಕಾರಣ. ಸಿನಿಮಾ ಶುರುವಾದಾಗಿ ನಿಂದ ಇಲ್ಲಿಯವರೆಗೆ, ಯಾವುದೇ ಅಡೆತಡೆಯಿಲ್ಲದೆ ಕೆಲಸಗಳು ಪೂರ್ಣಗೊಂಡು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ’ ಎನ್ನುವುದು ಸಿಂಧೂ ಮಾತು.
“ಈಗಾಗಲೇ “ಆಚಾರ್ ಆ್ಯಂಡ್ ಕೋ’ ಸಿನಿಮಾದ ಸ್ಪೆಷಲ್ ಪ್ರೀಮಿಯರ್ ನಡೆದಿದೆ. ಈ ವೇಳೆ ಚಿತ್ರರಂಗದ ಅನೇಕ ಹಿರಿಯರು ಸಿನಿಮಾ ನೋಡಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಘವೇಂದ್ರ ರಾಜಕುಮಾರ್, ವಿನಯ್, ಯುವ ಹೀಗೆ ರಾಜಕುಮಾರ್ ಕುಟುಂಬದ ಎಲ್ಲರೂ ಸಿನಿಮಾ ನೋಡಿದ್ದಾರೆ. ಮೈಸೂರಿನಲ್ಲಿ ನಡೆದ ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಆಡಿಯನ್ಸ್ ಜೊತೆ ಕುಳಿತು ಸಿನಿಮಾ ನೋಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ತುಂಬ ಸರಳವಾದ ಫ್ಯಾಮಿಲಿ ಕಥೆ, ಪಾತ್ರಗಳು ಮತ್ತು ನಿರೂಪಣೆ ಸಿನಿಮಾದಲ್ಲಿರುವುದರಿಂದ ಆಡಿಯನ್ಸ್‌ಗೂ “ಆಚಾರ್ ಆ್ಯಂಡ್ ಕೋ’ ಇಷ್ಟವಾಗಲಿದೆ’ ಎಂಬುದು ನಿರ್ದೇಶಕಿ ಸಿಂಧೂ ಶ್ರೀನಿವಾಸ ಮೂರ್ತಿ ಭರವಸೆಯ ಮಾತು.
“ಇಡೀ ಕರ್ನಾಟಕದಾದ್ಯಂತ ಎಲ್ಲ ನಗರಗಳಲ್ಲಿ “ಆಚಾರ್ ಆ್ಯಂಡ್ ಕೋ’ ಬಿಡುಗಡೆಯಾಗುತ್ತಿದೆ. ಒಂದು ಫ್ಯಾಮಿಲಿಯ ಕಥೆಯನ್ನು ಇಡೀ ಫ್ಯಾಮಿಲಿ ಕುಳಿತು ನೋಡುವಂಥ ಸಿನಿಮಾವಾಗಿ ಮಾಡಿದ್ದೇವೆ. ಹಿರಿಯರು, ಕಿರಿಯರು ಎಲ್ಲರಿಗೂ ಸಿನಿಮಾ ಇಷ್ಟವಾಗುವಂತಿದೆ ಎಂಬುದು ನಮ್ಮ ನಂಬಿಕೆ. ಜನರ ಪ್ರತಿಕ್ರಿಯೆ ನೋಡಲು ನಮ್ಮ ತಂಡ ತುಂಬ ಎಕ್ಸೆ„ಟ್ ಆಗಿದೆ’ ಎನ್ನುತ್ತಾರೆ ಸಿಂಧೂ.
ಜಿ.ಎಸ್. ಕಾರ್ತಿಕ ಸುಧನ್