Advertisement

‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು  ?

11:45 AM Feb 26, 2021 | Team Udayavani |

ಬೆಂಗಳೂರು : ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಪೊಗರು’ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಕಳೆದ ವಾರ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಪೊಗರು ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿರುವ ಪ್ರಶಾಂತ್, ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಿದ್ದಾರೆ.

Advertisement

ಇದೊಂದು ಮೈಲಿಗಲ್ಲು ಎಂದಿರುವ ಅವರು ನಿರ್ದೇಶಕ ನಂದಕಿಶೋರ್ ಹಾಗೂ ನಟಿ ರಶ್ಮಿಕಾ ಮಂದಣ್ಣವನ್ನು ಶ್ಲಾಘಿಸಿದ್ದಾರೆ. ಚಿತ್ರನಟ ಧ್ರುವ ಸರ್ಜಾ ಅವರ ಅಭಿನಯಕ್ಕೆ ಬಾಯ್ತುಂಬ ಹೊಗಳಿಕೆ ನೀಡಿರುವ ಅವರು, ಸಿನಿಮಾ ಕುರಿತು ನಿಮಗಿರುವ ಫ್ಯಾಶನ್ ಹಾಗೂ ಪಾತ್ರಕ್ಕೆ ನೀವು ಮಾಡಿರುವ ತಯಾರಿ, ತ್ಯಾಗ ಅದ್ಭುತ. ಚಿತ್ರದ ಯಶಸ್ಸಿಗೆ ನೀವು ಅರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪೊಗರು ಸಿನಿಮಾ ಫೆ.19 ಕ್ಕೆ ತೆರೆಕಂಡಿದೆ.  ನಂದ ಕಿಶೋರ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 30 ಕೋಟಿ ಹಣ ಬಾಚಿಕೊಂಡಿದೆ. ಆದರೆ, ಚಿತ್ರದ ಕೆಲವೊಂದು ದೃಶ್ಯಗಳ ವಿರುದ್ಧ ಆಕ್ಷೇಪ ಕೇಳಿ ಬಂದಿದ್ದರಿಂದ ಅವುಗಳಿಗೆ ಕತ್ತರಿಹಾಕಿ, ಮರು ಸೆನ್ಸಾರ್ ಗೊಂಡು ಇಂದಿನಿಂದ ಮತ್ತೆ ಪ್ರದರ್ಶನಗೊಳ್ಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next