ಮೆಟೀರಿಯಲ್‌ನಲ್ಲೇನೋ ಹೆಚ್ಚಿನ ವ್ಯತ್ಯಾಸ ಇರಲ್ಲ. ಆದರೆ, ಟೀಶರ್ಟ್ ಡಿಸೈನ್‌ಗಳು ಬದಲಾಗುತ್ತ ಇರುತ್ತವೆ. ಅವುಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತವೆ. ಸದ್ಯಕ್ಕೀಗ ಡೈನೊಸರ್ ಟ್ರೆಂಡ್ ಟೀ ಶರ್ಟ್‌ನ್ನಾವರಿಸಿದೆ. ನಮ್ಮ ಬಾಲಿವುಡ್‌ಗಿಂತಲೂ ಹಾಲಿವುಡ್‌ನಲ್ಲೇ ಇದರ ಹವಾ ಹೆಚ್ಚು.
*
ಟೀ ಶರ್ಟ್‌ಗಳಲ್ಲಿ ಎಷ್ಟೊಂದು ಟ್ರೆಂಡ್‌ಗಳು ಬಂದವು ಒಂದು ಸಲ ನೆನಪು ಮಾಡ್ಕೊಳ್ಳಿ. ಮೊದ ಮೊದಲು ಬಂದಿದ್ದು ಗ್ರಾಫಿಕ್ಸ್ ಪ್ರಿಂಟ್. ಟೀಶರ್ಟ್‌ನಲ್ಲಿ ಸಿಂಹ, ಹುಲಿ, ಚಿರತೆಗಳು ಗರ್ಜಿಸಿ, ಪರಚಿ ಮರೆಯಾದವು. ನಂತರ ಹೂಗಳ ಟ್ರೆಂಡ್ ಬಂತು. ಚೆಂದ ಹೂ ಬಳ್ಳಿಗಳು ಹೂ ಬಿಸಿಲಿನ ನಗು ಬೀರುತ್ತ ಬಾಯ್ ಮಾಡಿದವು. ಚೆಂದದ ಕೋಟ್‌ಗಳಿದ್ದ ಟೀ ಶರ್ಟ್‌ಗಳು ಬಂದವು, ಪ್ರೇಮ ನಿವೇದನೆ, ತತ್ವ, ಗಜಲ್, ಶಾಯಿರಿ, ಸೂಫಿ ಲೈನ್‌ಗಳೆಲ್ಲ ಟೀ ಶರ್ಟ್‌ನ ಮೇಲೆ ಓಡಾಡಿ ಅದನ್ನೋದಿದ ಹುಡುಗರ ಬಾಯಲ್ಲಿ ಒಳ್ಳೆ ಮಾತುಗಳು ಓಡಾಡಿದವು. ಇದಾಗಿ ಬೆಕ್ಕಿನ ಟೀ ಶರ್ಟ್‌ಗಳು ಫೇಮಸ್ ಆದವು. ಸೆ¾„ಲಿಗಳು ಕಾರುಬಾರು ಮಾಡಿದವು, ಅರಳಿದ ತುಟಿಗಳು ಟೀ ಶರ್ಟ್ ಮೇಲೆ ನಸುನಗೆ ಬೀರಿದವು.
Advertisement
ಇವೆಲ್ಲ ಮೆರವಣಿಗೆ ಮುಗಿದು ಈಗ ಟೀ ಶರ್ಟ್ ಮೆರವಣಿಗೆಯಲ್ಲಿ ಡೈನೋಸರ್‌ಗಳ ಸವಾರಿ ಶುರುವಾಗಿದೆ. ಇದಿನ್ನೂ ನಮ್ಮ ದೇಶದಲ್ಲಿ ಅಷ್ಟು ಫೇಮಸ್ ಆಗಿಲ್ಲ. ಆದರೆ ವಿದೇಶಗಳಲ್ಲಿ ಭರ್ಜರಿಯಾಗಿ ಓಡಾಡ್ತಿವೆ, ಇದನ್ನು ಮೊದಲು ಪರಿಚಯಿಸಿದ್ದು ಹಾಲಿವುಡ್.
Related Articles
Advertisement
ಡೈನೋಸರ್ ಜಂಪರ್‌ಗಳಲ್ಲಿ ಕಡುಬಣ್ಣದಲ್ಲಿ ಡೈನೋಸರ್ ಪ್ರಿಂಟ್‌ಗಳಿರೋದು ನೋಡಕ್ಕೂ ಚೆಂದ. ಅಂಥ ಡಿಸೈನ್‌ಗಳೇ ಹೆಚ್ಚು. ಕಡುನೀಲಿ, ಕಡುಗಪ್ಪು ಬಣ್ಣದ ಡೈನೋಸರ್ ಪ್ರಿಂಟ್ ಜಂಪರ್‌ಗಳನ್ನು ನೀವೂ ತೊಟ್ಕೊಳ್ಳಿ.
– ನಿಶಾಂತ್ ಕಮ್ಮರಡಿ