Advertisement
ವಿಶೇಷ ಭದ್ರತಾ ವಿಭಾಗದಲ್ಲಿನ ಹೈ ಸೆಕ್ಯುರಿಟಿ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇಲ್ಲಿ ಬೇರೆ ಬೇರೆ ಸೆಲ್‌ಗಳಲ್ಲಿ ಹೆಚ್ಚಾಗಿ ಬೇರೆ ಕಡೆಯಿಂದ ಸ್ಥಳಾಂತರ ಆದವರನ್ನೇ ಇರಿಸಲಾಗುತ್ತದೆ. ಸದ್ಯ 10ಕ್ಕೂ ಹೆಚ್ಚು ಕೈದಿಗಳು ಇಲ್ಲಿದ್ದಾರೆ. ಈ ಸೆಲ್‌ಗಳನ್ನು ಬೆಳಗ್ಗೆ 7.30ರಿಂದ 8ರ ವರೆಗೆ ಮಾತ್ರ ತೆರೆಯಲಾಗುತ್ತದೆ. ಈ ಅವ ಧಿಯಲ್ಲೇ ಬೆಳಗಿನ ಉಪಾಹಾರ ನೀಡಲಾಗುತ್ತದೆ.
ವಿಶೇಷ ಭದ್ರತಾ ವಿಭಾಗದ ಸೆಲ್‌ಗಳಿಗೆ ಸಿಸಿ ಕೆಮರಾ ಅಳವಡಿಸಿ ಕಣ್ಗಾವಲು ಏರ್ಪಡಿಸಲಾಗಿದೆ. ಆದರೆ ಜಾಮರ್ ವ್ಯವಸ್ಥೆ ಇಲ್ಲ. ಕೇಂದ್ರ ಕಾರಾಗೃಹದ ಮುಖ್ಯ ಕಟ್ಟಡಕ್ಕೆ 3ಜಿ ನೆಟ್‌ವರ್ಕ್ ಸೌಲಭ್ಯವುಳ್ಳ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ಇದೇ 3ಜಿ ಮೊಬೈಲ್ ಜಾಮರ್ ಪಕ್ಕದ ವಿಶೇಷ ಭದ್ರತಾ ವಿಭಾಗದ ಸೆಲ್‌ಗಳ ಪ್ರದೇಶವನ್ನೂ ಆವರಿಸುತ್ತದೆ. ಈಗೆಲ್ಲ 4ಜಿ, 5ಜಿ ನೆಟ್‌ವರ್ಕ್ ಇರುವಾಗ 3ಜಿ ಮೊಬೈಲ್ ಜಾಮರ್ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ಎಂದು ಯತ್ನ ಪ್ರಶ್ನೆಯಾಗಿದೆ.