ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಆಂಗ್ಲರ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದೆ. ಇದೇ ವೇಳೆ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಅವರು ಟೀಂ ಇಂಡಿಯಾ ಆಟಗಾರರಿಗೆ ಉಪಯುಕ್ತ ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ಪಿಚ್ ನಲ್ಲಿ ಚಲಿಸುವ ಚೆಂಡಿನ ವಿರುದ್ಧ ಆಫ್-ಸ್ಟಂಪ್‌ನ ಹೊರಗೆ ದೊಡ್ಡ ಬೂಮಿಂಗ್ ಡ್ರೈವ್ ಶಾಟ್ ಗಳನ್ನು ಆಡದಂತೆ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ವೆಂಗ್ ಸರ್ಕಾರ್ ಎಚ್ಚರಿಕೆ ನೀಡಿದರು. ಅದೇ ರೀತಿ ವೇಗದ ಬೌಲರ್‌ಗಳನ್ನು ಎದುರಿಸುವಾಗ ಹೆಚ್ಚು ಬಲವಾಗಿ ಆಡದೆ ಮೃದು ಹಿಡಿತದಿಂದ ಆಡಬೇಕು ಎಂದು ಅವರು ಹೇಳಿದರು.
ಇಂಗ್ಲೆಂಡ್ ಪಿಚ್ ಗಳಲ್ಲಿ ಚೆಂಡು ಸ್ವಲ್ಪ ಹೆಚ್ಚು ಹೊರಗಡೆ ಹೋಗುತ್ತದೆ. ಹಾಗಾಗಿ ನಿಮ್ಮ ಹೊಡೆತದ ಏರಿಯಾದಲ್ಲಿ ಚೆಂಡು ಬಂದಾಗ ದೊಡ್ಡ ಡ್ರೈವ್ ಮಾಡದೆ, ಚೆಂಡನ್ನು ತಳ್ಳಬೇಕು. ಒಂದು ವೇಳೆ ಡ್ರೈವ್ ಪ್ರಯತ್ನ ಮಾಡಿದರೆ ಆಗ ಸ್ಲಿಪ್ ಗೆ ಕ್ಯಾಚ್ ಆಗುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೆಕೆಆರ್ ತಂಡಕ್ಕೆ ಮತ್ತೆ ದಿನೇಶ್ ಕಾರ್ತಿಕ್ ನಾಯಕತ್ವ? ಸುಳಿವು ಬಿಚ್ಚಿಟ್ಟ ವಿಕೆಟ್ ಕೀಪರ್
ಜೂ.18ರಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌಥಂಪ್ಟನ್ ನಲ್ಲಿ ನಡೆಯಲಿದೆ. ಭಾರತ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಟೀಂ ಇಂಡಿಯಾ ಐದು ಟೆಸ್ಟ್ ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ.