Advertisement

ನಟ ದಿಲೀಪ್‌ ಕುಮಾರ್‌ ಕಿಡ್ನಿ ವೈಫ‌ಲ್ಯ; ಐಸಿಯುಗೆ ದಾಖಲು

07:25 PM Aug 03, 2017 | Team Udayavani |

ಮುಂಬಯಿ : ದೇಹದಲ್ಲಿ ನೀರಿನ ಕೊರತೆ ಮತ್ತು ಮೂತ್ರನಾಳದ ಸೋಂಕಿನಿಂದ ಅಸ್ವಸ್ಥರಾಗಿ ನಗರದ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಆಸ್ಪತ್ರೆಗೆ ನಿನ್ನೆ ಬುಧವಾರ ದಾಖಲಾಗಿದ್ದ 94ರ ಹರೆಯದ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರ ದೇಹಾರೋಗ್ಯ ಇದೀಗ ಕೊಂಚ ಬಿಗಡಾಯಿಸಿದ್ದು ಅವರನ್ನು ಐಸಿಯುಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. 

Advertisement

ದಿಲೀಪ್‌ ಕುಮಾರ್‌ ಅವರಿಗೆ ಕಿಡ್ನಿ ತೊಂದರೆಗಳು ಕಾಣಿಸಿಕೊಂಡಿವೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. 
 
ವೈದ್ಯರು ಹೇಳುವ ಪ್ರಕಾರ, ದಿಲೀಪ್‌ ಕುಮಾರ್‌ ಅವರ ರಕ್ತದಲ್ಲಿನ ಕ್ರೀಟಿನೈನ್‌ ಮಟ್ಟ ಹೆಚ್ಚುತ್ತಿದೆ. ಪರಿಣಾಮವಾಗಿ ಕಿಡ್ನಿ ವೈಫ‌ಲ್ಯ ಕಾಣಿಸಿಕೊಂಡಿದೆ. ಅವರ ವಯಸ್ಸಿನ ದೃಷ್ಟಿಯಿಂದ ಹೇಳುವುದಾದರೆ ಇದು ಗಂಭೀರ ಪರಿಸ್ಥಿತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next