“ನನಗೆ ಗೊತ್ತಿರುವಂತೆ ಡಿಲೇರಿಯಂ ಫೋಬಿಯಾ ಎಂಬ ಮೆಡಿಕಲ್ ಸಬೆjಕ್ಟ್ ಮೇಲೆ ಬರುತ್ತಿರುವುದು ಇದೇ ಮೊದಲ ಸಿನಿಮಾ. ನೈಜ ಘಟನೆಗಳನ್ನ ಆಧಾರವಾಗಿಟ್ಟುಕೊಂಡು ಅಷ್ಟೇ ನೈಜವಾಗಿ ಸಿನಿಮಾವನ್ನ ಸ್ಕ್ರೀನ್ ಮೇಲೆ ತಂದಿದ್ದೇವೆ. ಕನ್ನಡದ ಆಡಿಯನ್ಸ್‌ಗೆ ಖಂಡಿತವಾಗಿಯೂ, ಇದೊಂದು ವಿಭಿನ್ನ ಅನುಭವ ಕೊಡುವ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ಸಿನಿಮಾದ ಕ್ಲೈಮ್ಯಾಕ್ಸ್ ಅಂತೂ ಆಡಿಯನ್ಸ್‌ನ ಸೀಟಿನ ತುದಿಯಲ್ಲಿ ಕೂರಿಸುತ್ತದೆ. ಇದು ಕೇವಲ ನನ್ನ ಮಾತಲ್ಲ. ಸಿನಿಮಾ ನೋಡಿದವರಿಗೆ ಆಗುವ ಅನುಭವ’ – ಇದು “ಬಹುಕೃತ ವೇಷಂ’ ಸಿನಿಮಾದ ಬಗ್ಗೆ ನಾಯಕಿ ನಟ ಶಶಿಕಾಂತ್ ಅವರ ಮಾತು.
“ಉದರ ನಿಮಿತ್ತಂ ಬಹುಕೃತ ವೇಷಂ’ ಎಂಬ ಮಾತು ನೀವು ಕೇಳಿರಬಹುದು. ತುತ್ತು ಅನ್ನಕ್ಕಾಗಿ (ಬದುಕಿಗಾಗಿ) ನಾನಾ ವೇಷ ಎಂಬುದು ಇದರ ಸಂಕ್ಷಿಪ್ತ ಸಾರ. ಈಗ ಇದೇ “ಬಹುಕೃತ ವೇಷಂ’ ಎಂಬ ಹೆಸರಿನಲ್ಲಿ ಹೊಸಬರ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ಚಿತ್ರ ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲೂ ತೆರೆ ಕಾಣುತ್ತಿದೆ.
ಯುವನಟ ಶಶಿಕಾಂತ್, ವೈಷ್ಣವಿ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪ್ರಶಾಂತ್ ಕೆ. ಎಳ್ಳಂಪಳ್ಳಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರದ ಬಗ್ಗೆ ಮಾತ ನಾ ಡುವ ನಾಯಕ ಶಶಿಕಾಂತ್, “ಇದು ಡಿಲೇರಿಯಂ ಫೋಬಿಯಾ ಎನ್ನುವ ವಿಚಿತ್ರ ಖಾಯಿಲೆಯ ಮೇಲೆ ಹೆಣೆದ ಸಿನಿಮಾ. ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾದಲ್ಲಿ, ಒಬ್ಬ ವ್ಯಕ್ತಿ ಅವನ ವಿರುದ್ಧ ಅವನೇ ಫೈಟ್ ಮಾಡುತ್ತಾನೆ. ಎರಡು ವಿಭಿನ್ನ ಶೇ ಡ್,ವಿಭಿನ್ನ ಮ್ಯಾನರಿಸಂ ಇರುವಂಥ ಪಾತ್ರ ಇದರಲ್ಲಿದೆ’ ಎಂದು ಚಿತ್ರದ ಕಥೆ ಮತ್ತು ಪಾತ್ರ ಪರಿಚಯ ಮಾಡಿಕೊಡುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಶಾಂತ್ ಕೆ. ಎಳ್ಳಂಪಳ್ಳಿ, “ಯಾರು ಊಹಿಸಲಾಗದ ರೀತಿಯಲ್ಲಿ ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ಮೂಡಿಬಂದಿದೆ. ನಾಲ್ಕೂವರೆ ನಿಮಿಷದ ಒಂದೇ ಸಂಭಾಷಣೆ ಇದ್ದು, ಶಶಿಕಾಂತ್ ಹಾಗೂ ವೈಷ್ಣವಿ ಗೌಡ ಪೈಪೋಟಿ ಮೇಲೆ ಅಭಿನಯಿಸಿ¨ªಾರೆ’ ತೆರೆ ಮೇಲೆ ಸಿನಿಮಾ ನೋಡುಗರನ್ನು ಹಿಡಿದು ಕೂರಿಸಿಕೊಂಡು ಸಾಗುತ್ತದೆ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.
ಇನ್ನು “ಬಹುಕೃತ ವೇಷಂ’ ಸಿನಿಮಾ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕಾದಲ್ಲೂ ಸುಮಾರು 25ಕ್ಕೂ ಹೆಚ್ಚಿನ ಕಡೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟ್ರೇಲರ್ ನೋಡಿದ ಅಮೆರಿಕಾ ನಿವಾಸಿಯೊಬ್ಬರು “ಬಹುಕೃತ ವೇಷಂ’ ಸಿನಿಮಾವನ್ನು ಯುಎಸ್‌ಎ ನಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿ¨ªಾರಂತೆ. ಸಿನಿಮಾದ ಕಂಟೆಂಟ್ ಎಲ್ಲ ಕಡೆಗೂ ಹೋಗುವಂತಿರುವುದರಿಂದ ಹೊರದೇಶಗಳಲ್ಲೂ “ಬಹುಕೃತ ವೇಷಂ’ ಬಿಡುಗಡೆ ಮಾಡುತ್ತಿದ್ದೇವೆ ಎನ್ನುವುದು ಚಿತ್ರತಂಡದ ಮಾತು. “ಬಹುಕೃತ ವೇಷಂ’ ಚಿತ್ರವನ್ನು ಹೆಚ್. ನಂದ ಹಾಗೂ ಡಿ. ಕೆ. ರವಿ ನಿರ್ಮಾಣ ಮಾಡಿದ್ದಾರೆ. ಚಿತ್ರದ 4 ಹಾಡುಗಳಿಗೆ ವೈಶಾಖ್ ವಿ. ಭಾರ್ಗವ್ ಸಂಗೀತ ಸಂಯೋಜನೆಯಿದೆ. ಕಿರಣ್ ಕೃಷ್ಣಮೂರ್ತಿ ಹಿನ್ನೆಲೆ ಸಂಗೀತವಿದೆ. ಅಧ್ಯಾಯ್ ತೇಜ್ ಕಥೆ, ಚಿತ್ರಕಥೆ ಇದೆ. ಚಿತ್ರಕ್ಕೆ ಹರ್ಷಕುಮಾರ್ ಛಾಯಾ ಗ್ರ ಹಣ, ಜ್ಞಾನೇಶ್ ಬಿ ಮಾತಾಡ್ ಸಂಕಲನವಿದೆ.