Advertisement
ಆದರೆ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವ ಹಳೆ ನೀರಿನ ಟ್ಯಾಂಕ್ ಮಾತ್ರ ಹಾಗೆಯೇ ಮುಖ್ಯ ರಸ್ತೆ ಪಕ್ಕ ಉಳಿದುಕೊಂಡಿದೆ. ಇದರ ಸುತ್ತ ಮುತ್ತ ಹಲವು ಮನೆಗಳಿದ್ದು, ಬಿದ್ದರೆ ಅಪಾಯ ಕಟ್ಟಿಟ್ಟದ್ದು. ತತ್‌ಕ್ಷಣ ತೆರವು ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ. ನಮ್ಮ ಮನೆ ಸಮೀಪವೇ ಹಳೆಯ ಟ್ಯಾಂಕ್ ಇದೆ. ಇದು ಯಾವಾಗ ಬೀಳುತ್ತದೆ ಎಂದು ಹೇಳಲಾಗದು. ಬಿದ್ದರೆ ಗಂಡಾಂತರ ತಪ್ಪಿದ್ದಲ್ಲ, ಅದಕ್ಕೂ ಮೊದಲೇ ತೆರವು ಮಾಡಬೇಕಿದೆ ಎಂದು ಸ್ಥಳೀಯರಾದ ಶ್ರೀಧರ ಹೇಳುತ್ತಾರೆ.
ಬಸ್ರೂರು ಗ್ರಾ.ಪಂ. ವತಿಯಿಂದ ಕೆಲವು ವರ್ಷಗಳ ಹಿಂದೆಯೇ ಹಳೆ ನೀರಿನ ಟ್ಯಾಂಕನ್ನು ಉರುಳಿಸಲು ಅನುಮತಿ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಅವರಿಂದ ಯಾವುದೇ ಪತ್ರ ಬಂದಿಲ್ಲ. ಅನುಮತಿ ನೀಡಿದ ತತ್‌ಕ್ಷಣ ಹಳೆ ನೀರಿನ ಟ್ಯಾಂಕನ್ನು ತೆರವು ಮಾಡಿ ಅಪಾಯವಾಗದಂತೆ ಜಾಗ್ರತೆ ಮಾಡಲಾಗುತ್ತದೆ.
– ನಾಗೇಂದ್ರ ಜೆ., ಪಿಡಿಒ, ಬಸ್ರೂರು