Advertisement

ಶಿಥಿಲಗೊಂಡ ಸೇತುವೆ; ಕುಸಿಯುವ ಆತಂಕ

06:38 PM Sep 21, 2021 | Team Udayavani |

ಬಾಳೆಹೊನ್ನೂರು: ಸಮೀಪದ ಹಿರೇಗದ್ದೆ ಗ್ರಾ.ಪಂ ವ್ಯಾಪ್ತಿಯ ಕೊಪ್ಪ- ಮೇಲ್ಪಾಲ್‌- ಬಾಳೆಹೊನ್ನೂರು ಮುಖ್ಯರಸ್ತೆಯಲ್ಲಿರುವ ‌ ಅರಳೀಕೊಪ್ಪ ಕೈಮರ ಎಂಬಲ್ಲಿರುವ ಸೇತುವೆಯು ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ.

Advertisement

ಅರಳೀಕೊಪ್ಪ- ಕೈಮರದಲ್ಲಿ ಮುಖ್ಯರಸ್ತೆ ಬಳಿ ಹರಿಯುವ ಹಳ್ಳಕ್ಕೆ ಕಳೆದ 50 ವರ್ಷಗಳ ಹಿಂದೆ ಸುಣ್ಣ ಬೆಲ್ಲ ಮರಳಿನ ಗಾರೆ ಬಳಸಿ ಕಲ್ಲು ಕಟ್ಟಿ ಉತ್ತಮ ಗುಣಮಟ್ಟದಲ್ಲಿ ಸೇತುವೆಯೊಂದನ್ನು ನಿರ್ಮಿಸಿದ್ದು ಇದೀಗ ಸೇತುವೆ ನಿರ್ವಹಣೆಯಿಲ್ಲದೆ ಶಿಥಿಲಗೊಳ್ಳುತ್ತಿದೆ.

ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿದ್ದ ಸೇತುವೆ ದೀರ್ಘ‌ ಬಾಳಿಕೆಯ ಬಳಿಕ ಹಾಗೂ ಇತ್ತೀಚೆಗೆ ಹೆಚ್ಚಿದ ವಾಹನಗಳ ದಟ್ಟಣೆಯಿಂದಲೂ ಅದರ
ಆಯಸ್ಸು ಕಡಿಮೆಗೊಳ್ಳುತ್ತಿದೆ. ಇದರ ‌ ನಡುವೆ ಕಳೆದ ಹಲವು ವರ್ಷಗಳಿಂದ ಈ ಸೇತುವೆಯನ್ನು  ಸಂಬಂಧಪಟ್ಟ ಇಲಾಖೆಯವರು ಸಮರ್ಪಕವಾಗಿ ನಿರ್ವಹಣೆ ಮಾಡದ ‌ ಪರಿಣಾಮ ಸೇತುವೆಯ ಆಯಸ್ಸು ಇನ್ನಷ್ಟು ಕಡಿಮೆಗೊಳ್ಳುತ್ತಿದೆ.

ಕಳೆದ ಕಳೆದ ಕೆಲ ವರ್ಷಗಳಿಂದ ನಿರ್ವಹಣೆಯಾಗದ ಕಾರಣ ಸೇತುವೆಯ ಬೃಹತ್‌ ಗಾತ್ರದ ಪಿಲ್ಲರ್‌ಗಳ ನಡುವೆ ಹಾಗೂ ಸೇತುವೆಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಕಾಡು ಮರಗಳು ಬೆಳೆಯುತ್ತಿದೆ. ಇದರಿಂದಾಗಿ ಸೇತುವೆಯಲ್ಲಿ ಬಿರುಕು ಬರಲು ಪ್ರಾರಂಭವಾಗಿದೆ. ಮರ ‌ ಬೆಳೆದು ಬಿರುಕು ಬರುತ್ತಿರುವ ಕಾರಣ ಸೇತುವೆ ಮುಂದೊಂದು ಸೇತುವೆ ಕುಸಿತಗೊಂಡರೂ ಅಚ್ಚರಿಯಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದರ ನಡುವೆ ಮೇಲ್ಭಾಗದಲ್ಲಿ ಸೇತುವೆಯ ಕೈಪಿಡಿಗಳು ಸಹ ಮುರಿದಿದ್ದು ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

Advertisement

ಇದನ್ನೂ ಓದಿ:ಸೆ.27ರ ಭಾರತ್‌ ಬಂದ್‌ ಬೆಂಬಲಿಸಲು ರೈತ ಸಂಘಟನೆಗಳ ನಿರ್ಧಾರ

ಮುಖ್ಯರಸ್ತೆಯಲ್ಲಿಯೇ ಸೇತುವೆ ಇದ್ದು, ಇದರ ಒಂದು ಬದಿಯ ಕೈಪಿಡಿಯ ಅಡ್ಡಗೋಡೆಗಳು ಮುರಿದು ಹೋಗಿ 4 ವರ್ಷಗಳೇ ಕಳೆದಿವೆ. ಬೈಕ್‌ ಮತ್ತು ಕಾರು ಸೇರಿದಂತೆ ಸಣ್ಣ ಪುಟ್ಟ ವಾಹನಗಳು ನಿಯಂತ್ರಣ ತಪ್ಪಿದರೆ ಕೆಳಗಿನ ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸುವುದು ಖಚಿತವಾಗಿದೆ. ಇನ್ನು ಈ ಸೇತುವೆ ಮೇಲೆ ರಾತ್ರಿ ವೇಳೆಯಲ್ಲಿ ಸಂಚರಿಸುವ ಪಾದಚಾರಿಗಳು ಆಯ ತಪ್ಪಿದರೆ ಕೆಳಗೆ ಬಿದ್ದು ಅವಘಡ ನಡೆಯಲಿದೆ.ಸೇತುವೆ ಕೈಪಿಡಿಗಳು ಮುರಿದಿರುವ ಕಾರಣ ಸ್ಥಳೀಯರೇ ಕೈಪಿಡಿ ಇರುವ ಜಾಗಕ್ಕೆ ತಂತಿಗಳನ್ನು ಕಟ್ಟಿ ವಾಹನ ಚಾಲಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಮುಖ್ಯರಸ್ತೆಯ ಸೇತುವೆ ಶಿಥಿಲಾವಸ್ಥೆಗೆ ತಲುಪುತ್ತಿದ ªರೂ ಸಹ ಸಂಬಂಧಪಟ್ಟ ಇಲಾಖೆ ಈ ಕುರಿತು ಇನ್ನೂ ಸಹ ಗಮನಹರಿಸಿಲ್ಲ. ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತು ಸಂಬಂಧಿಸಿದ ಇಲಾಖೆ ಗಮನ ಹರಿಸಲಿದೆಯೇ ಕಾದು ನೋಡಬೇಕಿದೆ.

ಐವತ್ತು ವರ್ಷಗಳ ಹಿಂದೆ ಹಿಂದಿನ ಅತ್ಯುತ್ತಮ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಸೇತುವೆಯನ್ನು ಸಂಬಂಧಪಟ್ಟ ಇಲಾಖೆಕೂಡಲೇ ನಿರ್ವಹಣೆ ಮಾಡಿ ರಕ್ಷಣೆ ಮಾಡಬೇಕಿದೆ. ಸುಣ್ಣ, ಬೆಲ್ಲ, ಮರಳಿನ ಗಾರೆ ಬಳಸಿ ನಿರ್ಮಿಸಿರುವ ಸೇತುವೆ ಇನ್ನೂ ಉತ್ತಮ ಸ್ಥಿತಿಯಲ್ಲಿದ್ದು ಬೆಳೆಯುತ್ತಿರುವ ಮರಗಳನ್ನುಕಡಿದು ಸುಣ್ಣ ಬಣ್ಣ ಮಾಡಿ, ಸೇತುವೆಯಕೈಪಿಡಿಗಳನ್ನು ಹೊಸದಾಗಿ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
– ಸತೀಶ್‌,ಅರಳೀಕೊಪ್ಪ ಗ್ರಾಮಸ್ಥ

ಕೊಪ್ಪ-ಮೇಲ್ಪಾಲ್‌ ರಸ್ತೆಯ ನಿರ್ವಹಣೆಯನ್ನು ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯವರು ನೋಡಿಕೊಳ್ಳುತ್ತಿದ್ದು, ಸೇತುವೆ ನಿರ್ವಹಣೆಯನ್ನು ಮಾಡುತ್ತಿರಲಿಲ್ಲ. ಈಗ ಕಳೆದ ಆರು ತಿಂಗಳಿನಿಂದ ರಸ್ತೆ ನಿರ್ವಹಣೆಯನ್ನು ಇಲಾಖೆಗೆ ವಾಪಸ್‌ ನೀಡಲಾಗಿದೆ. ಅರಳೀಕೊಪ್ಪ ಸೇತುವೆಯಕೈಪಿಡಿ ಇಲ್ಲದ ಬಗ್ಗೆ ಗಮನಕ್ಕೆ ಬಂದಿದ್ದು, ಸೇತುವೆ ಇಕ್ಕೆಲಗಳಲ್ಲಿ ಮರಗಿಡ ಬೆಳೆದು ಬಿರುಕು ಬರುತ್ತಿರುವ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ದಾವೂದ್‌,
ಪಿಡಬ್ಲ್ಯೂ ಡಿ ಎಂಜಿನಿಯರ್‌,ಕೊಪ್ಪ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next