Advertisement

“ನ್ಯಾಯಾಂಗ ಸೇವೆಯ ವೇಗಕ್ಕೆ ಡಿಜಿಟಲೀಕರಣ’ : ಸಚಿವ ಮಾಧುಸ್ವಾಮಿ ಭರವಸೆ

12:23 AM Apr 25, 2022 | Team Udayavani |

ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲೀಕರಣ ಹಾಗೂ ಗಣಕೀಕರಣಗೊಳಿಸಲು ಮನವಿಯನ್ನು ನೀಡಿದರೆ ಅದನ್ನು ಸಾಕಾರಗೊಳಿಸುವಲ್ಲಿ ಅಗತ್ಯವಿರುವ ಎಲ್ಲ ನೆರವು ಸರಕಾರದಿಂದ ನೀಡಲಾಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.

Advertisement

ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ವತಿಯಿಂದ ರವಿವಾರ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ದ ಡಾ| ಬಾಬು ರಾಜೇಂದ್ರ ಪ್ರಸಾದ್‌ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ ದ್ವೆ„ವಾರ್ಷಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಇಂದು ಕಾಲ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರ ನಾಗಾಲೋಟದಲ್ಲಿ ಚಲಿಸುತ್ತಿದೆ. ಅದರೊಂದಿಗೆ ಚಲಿಸಿದಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅಂತ್ಯದ ಹಾದಿ ಹಿಡಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನದ ಅವಿಷ್ಕಾರದಿಂದ ನ್ಯಾಯಾಂಗ ಸೇವೆಗೆ ವೇಗ ನೀಡುವುದರ ಜತೆಗೆ ಪರಿಣಾಮಕಾರಿಯಾಗಿಸುವಲ್ಲಿ ಪ್ರಯತ್ನಿಸಬೇಕಾಗಿದೆ.

ವೇಗಕ್ಕೆ ಸಹಕಾರಿ
ವ್ಯವಸ್ಥೆಯನ್ನು ಡಿಜಿಟಲೀಕರಣ ಹಾಗೂ ಗಣಕೀಕರಣಗೊಳಿಸಿದರೆ ನ್ಯಾಯಾಂಗ ಸೇವೆ ವೇಗಕ್ಕೆ ಸಹಾಯಕವಾಗಲಿದೆ ಎಂದರು.

ಮಾನವೀಯ ಕಾನೂನು
ಇಂದು ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದ್ದೇವೆ. ನ್ಯಾಯ ಹೇಳುವ ಹಾಗೂ ಕೇಳುವ ಎಲ್ಲರೂ ಒಂದೇ. ಮಾನವೀಯತೆ ಮುಂದೆ ಯಾವುದೇ ಕಾನೂನು ಮಾಡಲು ಸಾಧ್ಯತೆ ಇಲ್ಲ. ಎಲ್ಲ ಕಾನೂನುಗಳ ಮೂಲ ಮಾನವೀಯತೆ ಆಗಿದೆ. ಕೆಟ್ಟವರನ್ನು ಶಿಕ್ಷಿಸುವ ಜತೆಗೆ ಒಳ್ಳೆಯವರಿಗೆ ಸಕಾಲದಲ್ಲಿ ರಕ್ಷಣೆ ನೀಡಬೇಕು. ಜನರಿಗೆ ಜೀವಿತಾವಧಿಯಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಹಾಗೂ ಭರವಸೆ ನೀಡಬೇಕು ಎಂದು ಹೇಳಿದರು.

ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಾಮೂರ್ತಿ ರವಿ ಮಳಿಮಠ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿಗಳಾದ ದಿನೇಶ್‌ ಮಹೇಶ್ವರಿ, ಎಸ್‌. ಅಬ್ದುಲ್‌ ನಜೀರ್‌ ಹಾಗೂ ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲನಗೌಡ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next