Advertisement

ಡಿಜಿಟಲ್‌ ಶಕ್ತಿಯಾಗಿ ಭಾರತ: ಕೇಂದ್ರ ಸಚಿವ ರವಿಶಂಕರ ಪ್ರಸಾದ್‌

11:09 AM Jan 26, 2017 | Team Udayavani |

ಮಂಗಳೂರು: ಭಾರತವನ್ನು ಜಗತ್ತಿನ ಅಗ್ರಮಾನ್ಯ ಡಿಜಿಟಲ್‌ ಶಕ್ತಿಯನ್ನಾಗಿ ರೂಪಿಸುವ ಪ್ರಧಾನಿ ಮೋದಿ ಅವರ ಕನಸನ್ನು ಜನತೆ ಸಾಕಾರಧಿಗೊಳಿಸಬೇಕು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ, ಕಾನೂನು ಮತ್ತು ನ್ಯಾಯ ಇಲಾಖೆಗಳ ಸಚಿವ ರವಿಶಂಕರ್‌ ಪ್ರಸಾದ್‌ ಕರೆ ನೀಡಿದರು.

Advertisement

ಭಾರತ ಸರಕಾರ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿಧಿವಾಧಿಲಯ, ನೀತಿ ಆಯೋಗ ದಿಲ್ಲಿ, ಕರ್ನಾಟಕ ಸರಕಾರ, ದ.ಕ. ಜಿಲ್ಲಾಡಧಿಳಿತ ವತಿಯಿಂದ ಪುರಭವನಧಿದಲ್ಲಿ ಜ. 25ರಂದು ಅವರು “ಡಿಜಿಧನ್‌ ಮೇಳ’ಧಿವನ್ನು ಉದ್ಘಾಟಿಸಿದರು. ದೇಶದ ಎಲ್ಲ ಆರ್ಥಿಕ ವ್ಯವಹಾರಗಳು ಕೂಡ ಡಿಜಿಟಲ್‌ ಪಾವತಿಯ ಮೂಲಕ ನಡೆಯುಧಿವಂತಾಗಧಿಬೇಕು; ಪಾರಧಿದರ್ಶಕಧಿಧಿಧಿವಾಗಿರಧಿಬೇಕು. ತನ್ಮೂಲಕ ಭ್ರಷ್ಟಾಧಿಧಿಚಾರಮುಕ್ತ ಭಾರತ ನಿರ್ಮಾಣಧಿಧಿವಾಗುಧಿತ್ತದೆ ಎಂದರು.

ಡಿಜಿಟಲ್‌ ಪೇಮೆಂಟ್‌: ಸಂತಸ
ಕರ್ನಾಟಕ ಕರಾವಳಿಯ ಈ ಪ್ರದೇಶಕ್ಕೆ ಭೇಟಿ ನೀಡಿ ನನಗೆ ತುಂಬಾ ಸಂತಸವಾಗಿದೆ. ಇಲ್ಲಿನ ಕೊಲ್ಲೂರು, ಉಡುಪಿ, ಮಂಗಳೂರು ಧಾರ್ಮಿಕ ಕ್ಷೇತ್ರಗಳಿಗೆ ಕಳೆದೆರಡು ದಿನಗಳಲ್ಲಿ ಭೇಟಿ ನೀಡಿದ್ದೇನೆ. ಇಲ್ಲಿನ ದೇವಸ್ಥಾನಗಳಲ್ಲೂ ಡಿಜಿಟಲ್‌ ಪೇಮೆಂಟ್‌ ಕೌಂಟರ್‌ಗಳನ್ನು ಕಂಡು ನಾನು ಹರ್ಷಿತನಾಗಿದ್ದೇನೆ’ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದರು ಎಂದು ತಿಳಿಸಿದರು.

ಜನಪರ: ಜಿಗಜಿಣಗಿ
ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ಸ್ವತ್ಛತಾ ಇಲಾಖೆಯ ಸಹಾಧಿಯಕ ಸಚಿವ ರಮೇಶ್‌ ಜಿಗಜಿಣಗಿ ವಿಶೇಷ ಅತಿಥಿಯಾಗಿದ್ದರು. ವಸ್ತು ಪ್ರದರ್ಶನಧಿವನ್ನು ಉದ್ಘಾಟಿಸಿದರು. ಡಿಜಿಟಲ್‌ ಇಂಡಿಯಾ ಎಂಬ ಪ್ರಧಾನಿ ಮೋದಿ ಕನಸು ನನಸಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ಬಲಿಷ್ಠ ಭಾರತ ರೂಪುಗೊಳ್ಳುತ್ತಿದೆ ಎಂದರು.

ಐತಿಹಾಸಿಕ: ನಳಿನ್‌
ಡಿಜಿ-ಧನ್‌ ಮೇಳಕ್ಕೆ ಮಂಗಳೂರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿ, ಇಂದಿನ ಕಾರ್ಯಕ್ರಮವನ್ನು ನಡೆಸುತ್ತಿರುವುದು ಐತಿಹಾಸಿಕ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಅಭಿನಂದಿಸಿದರು. 

Advertisement

ಶಾಸಕರಾದ ಕೆ. ಅಭಯಚಂದ್ರ ಜೈನ್‌, ಕ್ಯಾ| ಗಣೇಶ್‌ ಕಾರ್ಣಿಕ್‌, ಬಿ.ಎ.ಮೊದಿನ್‌ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಮೇಯರ್‌ ಸುಮಿತ್ರಾ ಕರಿಯ, ನೀತಿ ಆಯೋಗದ ಸಲಹೆಗಾರ ಡಾ| ಯೋಗೇಶ್‌ ಸೂರಿ ಮುಖ್ಯ ಅತಿಥಿಗಳಾಗಿದ್ದರು. ದ.ಕ. ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ| ಎಂ.ಆರ್‌. ರವಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್‌ ಸ್ವಾಗತಿಸಿದರು. ನಗರಪಾಲಿಕೆಯ ಜಂಟಿ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ವಂದಿಸಿದರು.

ಕಂಬಳಕ್ಕೆ ಬೆಂಬಲ
ಡಿಜಿಟಲ್‌ ಪಾವತಿಯ ಮಾಹಿತಿಯ ವಸ್ತು ಪ್ರದರ್ಶನ ಡಿಜಿ-ಧನ್‌ ಮೇಳ ದಲ್ಲಿ ಕರಾವಳಿಯ ಕಂಬಳದ ಕುರಿತಾದ ಕಳಕಳಿ ವ್ಯಕ್ತವಾಯಿತು. ಈ ಬಗ್ಗೆ ಸಭೆಯಲ್ಲಿ ಸಂಸದ ನಳಿನ್‌ ಅವರು ಪ್ರಸ್ತಾವಿಸಿ, ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಅವರು ಕಂಬಳಕ್ಕೆ ಅನುಮತಿ ದೊರಕಿಸಿಕೊಡಬೇಕೆಂದು ಕೋರಿದರು. ಈ ಬಗ್ಗೆ ರಾಜ್ಯ ಸರಕಾರದ ನಿರ್ಣಯಕ್ಕೆ ಕೇಂದ್ರ ಮುಕ್ತ ಸಹಕಾರ ನೀಡಲಿದೆ ಎಂದು ಸಚಿವರು ಈಗಾಗಲೇ ಪ್ರಕಟಿಸಿದ್ದಾರೆ ಎಂದರು. 

ಮಂಗಳೂರು ಆದರ್ಶ: ಪ್ರಸಾದ್‌
ಉನ್ನತ ಶಿಕ್ಷಣ, ಬ್ಯಾಂಕಿಂಗ್‌, ವಿಶಿಷ್ಟ  ಸಂಸ್ಕೃತಿ, ಐಟಿ ನಿರ್ವಹಣೆಗಳ ಜತೆ ಡಿಜಿಟಲ್‌ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿಯೂ ಮಂಗಳೂರಿನ ಸಾಧನೆ ಆದರ್ಶಯುತ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಶ್ಲಾಘಿಸಿದರು. ಮಂಗಳೂರಿನ ಐಟಿ ಪಾರ್ಕ್‌ಗೆ ಸಂಸದ ನಳಿನ್‌ ಅವರ ಕೋರಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು ಮಂಗಳೂರಿನ ಐಟಿ ಪಾರ್ಕ್‌ ಕಳೆದ ವರ್ಷ 4 ಸಾವಿರ ಕೋಟಿ ರೂ. ವಿಶೇಷ ಸಾಧನೆ ನಡೆಸಿದೆ ಎಂದು ಅಭಿನಂದಿಸಿದರು. ಕಂಪ್ಯೂಟರ್‌ ಸೇವಾ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್‌ ಕ್ರಾಂತಿಗೆ ಪೂರಕವಾಗಿವೆ. ಮೋದಿ ಅವರ ಹೊಸ ಆರ್ಥಿಕ ಚಿಂತನೆಗೆ ಇಲ್ಲಿನ ಜನತೆಯ ಸ್ಪಂದನೆ ಸ್ವಾಗತಾರ್ಹವೆಂದರು.

Advertisement

Udayavani is now on Telegram. Click here to join our channel and stay updated with the latest news.

Next