ಹೊಸದಿಲ್ಲಿ: ಇನ್ನು ಮುಂದೆ ವಾಹನ ಸವಾರರು ಆರ್.ಸಿ., ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಇತ್ಯಾದಿ ದಾಖಲೆಗಳನ್ನು ಹೊತ್ತೂಯ್ಯಬೇಕಾಗಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್ ನಲ್ಲಿ ಅವುಗಳನ್ನೆಲ್ಲ ಇಟ್ಟುಕೊಂಡು, ಅಧಿಕಾರಿಗಳು ಕೇಳಿದಾಗ ಅದನ್ನೇ ತೋರಿಸಿದರೆ ಸಾಕು! ಕೇಂದ್ರ ಮೋಟಾರು ವಾಹನ ನಿಯಮಾವಳಿಗಳಿಗೆ ತರಲಾದ ತಿದ್ದುಪಡಿಯಲ್ಲಿ ಈ ಅಂಶವನ್ನು ಸೇರಿಸಲಾಗಿದೆ. ಈ ಹೊಸ ನಿಯಮಗಳು ವಾಹನಗಳ ಮಾಲಕರಿಗೆ ನೆಮ್ಮದಿ ತರಲಿವೆೆ. ಇದಲ್ಲದೆ ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, 8 ವರ್ಷ ಮೀರಿದ ವಾಹನಗಳ ಪರವಾನಿಗೆ ನವೀಕರಣ, ಸರಕು ಸಾಗಣೆ ಮತ್ತಿತರ ವಿಚಾರಗಳಿಗೂ ಸಂಬಂಧಿಸಿದ ಅನೇಕ ಪ್ರಸ್ತಾವಗಳನ್ನು ರಸ್ತೆ ಸಾರಿಗೆ ಸಚಿವಾಲಯ ಇದರಲ್ಲಿ ಸೇರಿಸಿದೆ.
ಆ.11ರೊಳಗೆ ಪ್ರತಿಕ್ರಿಯಿಸಿ: ಸಾರ್ವಜನಿಕರು ಈ ತಿದ್ದುಪಡಿ ಪ್ರಸ್ತಾವಕ್ಕೆ ಪ್ರತಿಕ್ರಿಯೆ, ಸಲಹೆ ಹಾಗೂ ಆಕ್ಷೇಪಗಳಿದ್ದರೆ ಆ.11ರೊಳಗೆ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಪ್ರತಿಕ್ರಿಯೆಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ (ಸಾರಿಗೆ) ಕಳುಹಿಸುವಂತೆ ಹೇಳಿದೆ.
ಪ್ರಸ್ತಾವಿತ ತಿದ್ದುಪಡಿಯಲ್ಲೇನಿದೆ?
– ವಾಹನ ಚಾಲಕರು ಚಾಲನಾ ಪರವಾನಿಗೆ, ಆರ್‌ಸಿ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲೂ ಒಯ್ಯ ಬಹುದು.
– ರಾಷ್ಟ್ರೀಯ ಪರವಾನಿಗೆ ಹೊಂದಿರುವ ಎಲ್ಲ ವಾಣಿಜ್ಯ ವಾಹನ ಗಳಿಗೂ ಫಾಸ್ಟಾಗ್‌ಗಳು, ವಾಹನ ಟ್ರ್ಯಾಕಿಂಗ್ ವ್ಯವಸ್ಥೆ ಕಡ್ಡಾಯ.
Related Articles
– ರಾಷ್ಟ್ರೀಯ ಪರ್ಮಿಟ್ ಪಡೆಯಬೇಕೆಂದರೆ, ವಾಹನದ ಮುಂಭಾಗ, ಹಿಂಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ನ್ಯಾಶನಲ್ ಪರ್ಮಿಟ್ ಅಥವಾ ಎನ್/ಪಿ ಎಂದು ಬರೆಯುವುದು ಕಡ್ಡಾಯ.
– ಅಪಾಯಕಾರಿ ಅಥವಾ ಹಾನಿಕಾರಕ ಸರಕುಗಳನ್ನು ಒಯ್ಯುವ ಟ್ಯಾಂಕರ್ ಗಳಿಗೆ ಬಿಳಿ ಬಣ್ಣವನ್ನೇ ಬಳಿಯಬೇಕು. ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫಲಿತ ಟೇಪ್ ಅಂಟಿಸಬೇಕು.