ಕಲಬುರಗಿ: ಸರ್ವಜ್ಞ ಶಿಕ್ಷಣ ಸಂಸ್ಥೆಯು ಕಲ್ಯಾಣ ಕರ್ನಾಟಕದಲ್ಲಿಯೇ ಗುಣಮಟ್ಟದ ಡಿಜಿಟಲ್ ಕ್ಲಾಸಸ್ 100 ದಿನ ಪೂರೈಸಿದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸರ್ವಜ್ಞ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಿತ್ಯ ಸರ್ವಜ್ಞ ಆ್ಯಪ್‌ನಲ್ಲಿ ಭೌತಶಾಸ್ತ್ರ, ರಸಯಾನಶಾಸ್ತ್ರ, ಗಣಿತ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮತ್ತು ಭಾಷಾ ವಿಷಯಗಳ ಬೋಧನೆ ಅತ್ಯುತ್ತಮ ನುರಿತ ಉಪನ್ಯಾಸಕರಿಂದ ಪಾಠ ಮತ್ತು ವಿದ್ಯಾರ್ಥಿಗಳು ಯಾವುದೇ ನಿರ್ಬಂಧಗಳಿಲ್ಲದೇ ಕಲಿಕೆ ಮುಂದುವರಿದಿದೆ. ಪ್ರತಿವಾರ ಕಿರು ಪರೀಕ್ಷೆ, ನೀಟ್, ಜೆಇಇ ಹಾಗೂ ಸಿಇಟಿ ಪ್ರಶ್ನೆ ಪತ್ರಿಕೆ ಚರ್ಚೆಗಳು, ಲೈವ್ ಡೌಟ್ ಕ್ಲಿಯರಿಂಗ್ ಸೆಷನ್ಸ್, ಆನ್ ಲೈನ್ ಮೀಟಿಂಗ್‌ಗಳನ್ನು ನಡೆಸಲಾಗುತ್ತಿದೆ. ಸ್ಟಡಿ ಮಟೇರಿಯಲ್ಸ್ ಕೂಡ ಈ ಸರ್ವಜ್ಞ ಆ್ಯಪ್‌ನಲ್ಲಿ ದೊರೆಯುತ್ತವೆ. ವಿದ್ಯಾರ್ಥಿಗಳು ಯಾವುದೇ ಸಮಯದಲ್ಲಿ ಬೇಕಾದ ವಿಷಯದ ವಿಡಿಯೋ ನೋಡಬಹುದು.
ಫಿಸಿಕಲ್ ಸ್ಟ್ರೆಸ್ ಇರುವುದಿಲ್ಲ, ಉಪನ್ಯಾಸಕರು ನೀಡಿದ ಅಸೈನ್‌ಮೆಂಟ್‌ಗಳನ್ನು ಆನ್‌ಲೈನ್ ಮೂಲಕವೇ ಕಳುಹಿಸಲಾಗುತ್ತಿದೆ. ಡಿಜಿಟಲ್ ಕ್ಲಾಸಸ್ ಫೇಸ್ ಟೂ ಫೇಸ್ ಬೋಧನೆಯಷ್ಟೇ ಪರಿಣಾಮ ಬೀರುತ್ತಿದೆ ಎಂದು ಅಭಿಷೇಕ್ ಚನ್ನಾರಡ್ಡಿ ಪಾಟೀಲ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಅವರ ಪ್ರತಿಯೊಂದು ಹಂತದ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಲಾಕ್‌ಡೌನ್ ಪರಿಸ್ಥಿತಿಯಲ್ಲಿ ಕಲಿಕೆ ನಿಲ್ಲಬಾರದೆಂದು ಈ ಡಿಜಿಟಲ್ ಟಚ್ ನೀಡಿದೆ.
ಕಳೆದ 100 ದಿನಗಳಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಾಗೂ ನೀಟ್, ಜೆಇಇ ಬರೆಯುವ ಮತ್ತು ಸಿಇಟಿ ಪರೀಕ್ಷೆ ಪೂರೈಸಿದ ವಿದ್ಯಾರ್ಥಿಗಳಿಗೆ ಎಚ್.ಡಿ. ಗುಣಮಟ್ಟದ ನುರಿತ ಉಪನ್ಯಾಸಕರಿಂದ ಬೋಧನೆ ಮತ್ತು ಹಲವು ಗ್ರ್ಯಾಂಡ್ ಟೆಸ್ಟ್‌ಗಳನ್ನು ಆನ್‌ಲೈನ್ನಲ್ಲೇ ತೆಗೆದುಕೊಂಡು ತಕ್ಷಣ ವಿದ್ಯಾರ್ಥಿಗಳಿಗೆ ಅವರ ಮಾರ್ಕ್ಸ್ ನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಪ್ರಥಮ ಪಿಯು ವಿದ್ಯಾರ್ಥಿಗಳು ಕೂಡ ಆನ್‌ಲೈನ್ ಕ್ಲಾಸಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ರೋಲ್ ಆಗುತ್ತಿದ್ದಾರೆ ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಚನ್ನಾರಡ್ಡಿ ಪಾಟೀಲ ತಿಳಿಸಿದ್ದಾರೆ.
ಡಿಜಿಟಲ್ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಅವರ ಅನುಕೂಲಕ್ಕೆ ತಕ್ಕ ಸಮಯ ಕಲಿಯಲು ನೀಡುತ್ತೇವೆ. ಆನ್‌ಲೈನ್ ಕೋರ್ಸ್‌ನಲ್ಲಿಯೂ ವಿದ್ಯಾರ್ಥಿ ತನ್ನ ಎಲ್ಲಾ ಸಂಶಯಗಳಿಗೆ ಉತ್ತರ ಪಡೆಯಲು, ಉಪನ್ಯಾಸಕರೊಂದಿಗೆ ಮುಕ್ತವಾಗಿ ಸಂವಾದಿಸಲು ಮಾಡುವ ಅವಕಾಶವಿದೆ. ಡಿಜಿಟಲ್ ಕ್ಲಾಸಸ್ ಇಂದು ಉನ್ನತ ಶಿಕ್ಷಣಕ್ಕೆ ಒಂದು ಪರ್ಯಾಯವಾಗಿ ಮಾರ್ಪಾಡುತ್ತಿದೆ.
-ಅಭಿಷೇಕ ಚನ್ನಾರೆಡ್ಡಿ ಪಾಟೀಲ್, ಸರ್ವಜ್ಞ ಕಾಲೇಜಿನ ಮುಖ್ಯ ಶೈಕ್ಷಣಿಕ ನಿರ್ದೇಶಕರು.