Advertisement

ಡಿಜಿಟಲ್‌ ಬ್ಯಾಂಕ್‌ ಕ್ರಾಂತಿ! ಬೆರಳ ತುದಿಯಲ್ಲೇ ಬ್ಯಾಂಕಿಂಗ್‌ ಸೇವೆ; ಪ್ರಧಾನಿ ಮೋದಿ ಚಾಲನೆ

05:44 PM Oct 17, 2022 | Team Udayavani |

ಹೊಸದಿಲ್ಲಿ/ಬೆಂಗಳೂರು: ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತೀ ದೊಡ್ಡ ಸುಧಾರಣೆ ಎಂಬಂತೆ ಕೇಂದ್ರ ಸರಕಾರವು 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ ಗಳಿಗೆ ಚಾಲನೆ ನೀಡಿದೆ. ಇದರಲ್ಲಿ ಕರ್ನಾಟಕದ ಮಂಗಳೂರು, ಬೆಂಗಳೂರು ಗ್ರಾಮಾಂತರದ ದೇವನ ಹಳ್ಳಿ, ಮೈಸೂರು ಮತ್ತು ರಾಯಚೂರು ಕೂಡ ಸೇರಿವೆ.

Advertisement

ಪ್ರಧಾನಿ ಮೋದಿ ರವಿವಾರ ಬೆಳಗ್ಗೆ ಈ ಡಿಜಿಟಲ್‌ ಬ್ಯಾಂಕ್‌ಗಳಿಗೆ ವಚ್ಯುìವಲ್‌ ಆಗಿ ಚಾಲನೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 2, ಸರಕಾರಿ ಸ್ವಾಮ್ಯದ 11, 12 ಖಾಸಗಿ ಬ್ಯಾಂಕ್‌ಗಳು, ಒಂದು ಸಣ್ಣ ಹಣಕಾಸು ಸಂಸ್ಥೆಗಳು ಈ ಯೋಜನೆಯಲ್ಲಿ ಭಾಗಿಯಾಗಿವೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ 75 ಡಿಜಿಟಲ್‌ ಬ್ಯಾಂಕ್‌ಗಳನ್ನು ಸ್ಥಾಪಿಸ ಲಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ದೇಶವು ಮೊಬೈಲ್‌ ಬ್ಯಾಂಕಿಂಗ್‌ನಿಂದ ಈಗ ಡಿಜಿಟಲ್‌ ಬ್ಯಾಂಕ್‌ನತ್ತ ಹೊರಳುತ್ತಿದೆ. ಈ ಮೂಲಕ ದೇಶವನ್ನು ಸ್ಥಿರತೆಯುಳ್ಳ ಆರ್ಥಿಕತೆಯತ್ತ ಕೊಂಡೊಯ್ಯಲಾಗುತ್ತಿದೆ ಎಂದಿದ್ದಾರೆ.

ಹಿಂದಿನ ಯುಪಿಎ ಕಾಲದಲ್ಲಿ ಫೋನ್‌ ಬ್ಯಾಂಕಿಂಗ್‌ ಇತ್ತು. ಯಾರಿಗೆ ಸಾಲ ಕೊಡಬಹುದು, ಯಾವ ಷರತ್ತು ಗಳಿವೆ ಎಂಬುದನ್ನು ಫೋನ್‌ ಮೂಲಕವೇ ಹೇಳ ಬೇಕಾಗಿತ್ತು. ಆದರೆ ಈಗ ಕೈ ಬೆರಳ ತುದಿಯಲ್ಲೇ ಈ ಎಲ್ಲ ಸೌಲಭ್ಯಗಳು ಸಿಗುವಂತಾಗಿದೆ ಎಂದಿದ್ದಾರೆ. ಅಲ್ಲದೆ ಬ್ಯಾಂಕಿಂಗ್‌ ವಲಯವು ಉತ್ತಮ ಆಡಳಿತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದೆ. ಫ‌ಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸೌಲಭ್ಯ ನೀಡುವ ಮೂಲಕ ಹಣದ ಸೋರಿಕೆಯನ್ನು ತಪ್ಪಿಸಲಾಗಿದೆ ಎಂದು ಶ್ಲಾ ಸಿದ್ದಾರೆ.

ಇಂದು ಮತ್ತೊಂದು ಸುತ್ತಿನ ಪಿಎಂ-ಕಿಸಾನ್‌ ಹಣ
ಡಿಬಿಟಿ ಮೂಲಕ ಇದುವರೆಗೆ 25 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ಹಾಕ ಲಾಗಿದೆ. ಸೋಮವಾರ ಕಿಸಾನ್‌ ಸಮ್ಮಾನ್‌ನ ಮತ್ತೊಂದು ಕಂತಿನ ಹಣವನ್ನು ಹಾಕಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ವರ್ಷಕ್ಕೆ 3 ಕಂತಿನಂತೆ 6 ಸಾವಿರ ರೂ.ಗಳನ್ನು ಈ ಯೋಜನೆ ಮೂಲಕ ನೀಡಲಾಗುತ್ತಿದೆ.

Advertisement

ರಾಜ್ಯದಲ್ಲಿ ನಾಲ್ಕು ಕಡೆ
ಕರ್ನಾಟಕದಲ್ಲೂ ಈ ಡಿಜಿಟಲ್‌ ಬ್ಯಾಂಕ್‌ ಸೌಲಭ್ಯ ವನ್ನು ನಾಲ್ಕು ಕಡೆಗಳಲ್ಲಿ ನೀಡಲಾಗಿದೆ. ಮಂಗಳೂರು, ಬೆಂಗಳೂರು ಬಳಿ ಇರುವ ದೇವನಹಳ್ಳಿ, ಮೈಸೂರು ಮತ್ತು ರಾಯಚೂರಿನಲ್ಲಿ ತೆರೆಯಲಾಗಿದೆ. ದೇವನಹಳ್ಳಿ ಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಯಚೂರಿನಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ ಅವರು ಕೆನರಾ ಬ್ಯಾಂಕಿನ ಶಾಖೆಗಳಿಗೆ ಚಾಲನೆ ನೀಡಿದರು.

ಮೈಸೂರಿನಲ್ಲಿ ಕರ್ಣಾಟಕ ಬ್ಯಾಂಕ್‌ ಶಾಖೆಗೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕಿನ ಶಾಖೆಯನ್ನು ಸಂಸದ ನಳಿನ್‌ಕುಮಾರ್‌ ಉದ್ಘಾಟಿಸಿದರು.

ಡಿಜಿಟಲ್‌ ಬ್ಯಾಂಕಿಂಗ್‌ ಪ್ರಯೋಜನಗಳು
1. ಉಳಿತಾಯ ಖಾತೆ ತೆರೆಯುವಿಕೆ
2. ಖಾತೆಯ ಬ್ಯಾಲೆನ್ಸ್‌ ಪರಿಶೀಲನೆ
3. ಪಾಸ್‌ಬುಕ್‌ ಮುದ್ರಣ
4. ನಗದು ವರ್ಗಾವಣೆ
5. ನಿಗದಿತ ಠೇವಣಿ ಹೂಡಿಕೆ
6. ಸಾಲದ ಅರ್ಜಿ
7. ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ಗಳಿಗೆ ಅರ್ಜಿ
8. ಬಿಲ್‌ಗ‌ಳು, ತೆರಿಗೆ ಪಾವತಿಸುವಿಕೆ

Advertisement

Udayavani is now on Telegram. Click here to join our channel and stay updated with the latest news.

Next