Advertisement

Cyber: “ಡಿಜಿಟಲ್‌ ಅರೆಸ್ಟ್‌” ವ್ಯವಸ್ಥೆ: ಇದು ಸೈಬರ್‌ ಕಳ್ಳರ ಹೊಸ ಮೋಸದ ಜಾಲ

11:51 PM Dec 02, 2023 | Team Udayavani |

ಲಕ್ನೋ: ದೇಶದಲ್ಲಿ ಸೈಬರ್‌ ಅಪರಾಧಿಗಳ ತಂಡ ಮತ್ತೆ ಗರಿಗೆದರಿದ್ದು ಜನರನ್ನು ವಂಚಿಸಲು ದುಷ್ಕರ್ಮಿಗಳು ಇದೀಗ ಪೊಲೀಸರ ಹೆಸರನ್ನೇ ದಾಳವಾಗಿಸಿಕೊಂಡಿ ದ್ದಾರೆ. ಐಪಿಎಸ್‌, ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಮಹಿಳೆಯೊಬ್ಬರನ್ನು “ಡಿಜಿಟಲ್‌ ಅರೆಸ್ಟ್‌’ ಮಾಡುವ ಮೂಲಕ 11 ಲಕ್ಷ ರೂ. ವಂಚಿಸಿರುವ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ. ನೋಯ್ಡಾ ಮೂಲದ ಮಹಿಳೆ ಯೊಬ್ಬರಿಗೆ ಮುಂಬಯಿ ಪೊಲೀಸರ ಹೆಸರಿನಲ್ಲಿ ಕರೆಯೊಂದು ಬಂದಿದೆ.

Advertisement

ಅದರಲ್ಲಿ ಮಾತನಾಡಿದ ವ್ಯಕ್ತಿಯು ” ನಾನು ಪೊಲೀಸ್‌ ಅಧಿಕಾರಿ ನಿಮ್ಮ ಆಧಾರ್‌ಕಾರ್ಡ್‌ ಬಳಸಿ ಖರೀದಿಸಿರುವ ಮೊಬೈಲ್‌ ಮತ್ತು ಸಿಮ್‌ಕಾರ್ಡ್‌ಗಳಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆದಿವೆ ಈ ಕುರಿತು ನಿಮ್ಮನ್ನು ತನಿಖೆ ಮಾಡ ಬೇಕಿದೆ’ಎಂದಿದ್ದಾನೆ. ಬಳಿಕ “ಆಧಾರ್‌ಕಾರ್ಡ್‌ ಮೂಲಕ ಬ್ಯಾಂಕ್‌ ಖಾತೆಯನ್ನು ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಹೀಗಾಗಿ ತನಿಖೆಗೆ ಸಹಕರಿಸಿ ಇದು ಡಿಜಿಟಲ್‌ ಅರೆಸ್ಟ್‌’ ಎಂದು ಹಾದಿ ತಪ್ಪಿಸಿದ್ದಾನೆ. ಬಳಿಕ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ, ಖಾತೆಯಲ್ಲಿರುವ ಎಲ್ಲ ಹಣವನ್ನು ವೈಯಕ್ತಿಕ ವಿದೇಶಿ ಕರೆನ್ಸಿ ಅಕೌಂಟ್‌ಗೆ ವರ್ಗಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿ, ಬಳಿಕ ಆಕೆಗೇ ತಿಳಿಯದಂತೆ 11 ಲಕ್ಷ ರೂ. ಲಪಟಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next