Advertisement

“ಮಾರಿಗೋಲ್ಡ್‌’ನಲ್ಲಿ ದಿಗಂತ್

04:07 AM Jun 11, 2020 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ದೂದ್‌ಪೇಡ ಎಂದೇ ಕರೆಸಿಕೊಳ್ಳುವ ಗುಳಿಕೆನ್ನೆ ಹುಡುಗ ದಿಗಂತ್‌ ಕೈಯಲ್ಲಿ ಈಗ ಎರಡು ಮತ್ತೂಂದು ಚಿತ್ರಗಳಿವೆ. ಸದ್ಯಕ್ಕೆ ದಿಗಂತ್‌ ಅಭಿನಯಿಸಿರುವ “ಹುಟ್ಟು ಹಬ್ಬದ ಶುಭಾಶಯಗಳು ‘ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಮೇಲೆ ದಿಗಂತ್‌ ಗೆ ನಿರೀಕ್ಷೆಯೂ ಇದೆ. ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ 2′ ಚಿತ್ರವೂ ಇದೆ. ಈ ಸಿನಿಮಾದಲ್ಲಿ ಗಣೇಶ್‌ ಹಾಗು ಪವನ್‌ಕುಮಾರ್‌ ದಿಗಂತ್‌ನೊಂದಿಗಿದ್ದಾರೆ.

Advertisement

ಹಿಂದೆ “ಗಾಳಿಪಟ’ದಲ್ಲೂ  ಮೋಡಿ ಮಾಡಿದ್ದ ಗಣೇಶ್‌ ಹಾಗು ದಿಗಂತ್‌ ಈಗ “ಗಾಳಿಪಟ 2′ ಚಿತ್ರದಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗುತ್ತಿದ್ದಾರೆ. ಇನ್ನು, ಇದೇ ಮೊದಲ ಬಾರಿಗೆ ಕಾಮಿಡಿ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಮಾರಿಗೋಲ್ಡ್‌’ ಸಿನಿಮಾದಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡುತ್ತಿದ್ದು, ಆರ್‌.ವಿ.ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ರಘುವರ್ಧನ್‌ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

“ಮಾರಿಗೋಲ್ಡ್‌’ ಅಂದಾಕ್ಷಣ ಎಲ್ಲರಿಗೂ ಬಿಸ್ಕತ್‌ ನೆನಪಾಗಬಹುದು. ಇಲ್ಲಿ ಹೆಸರು ಮಾತ್ರ ಹಾಗೆ ಇಡಲಾಗಿದೆ.  ಚಿತ್ರದೊಳಗಿರುವ ಕಥಾಹಂದರ ಹೊಸತನದೊಂದಿಗೆ ಕೂಡಿದ್ದು, ದಿಗಂತ್‌ಗೆ ಇದೇ ಮೊದಲ ಬಾರಿಗೆ ಒಂದು ವಿಶೇಷ ಪಾತ್ರ ಸೃಷ್ಟಿ ಮಾಡಲಾಗಿದೆ. ದಿಗಂತ್‌ ಕೂಡ ಕಥೆ, ಪಾತ್ರ ಮೆಚ್ಚಿಕೊಂಡು ಚಿತ್ರಕ್ಕಾಗಿ ಸಾಕಷ್ಟು ತಯಾರಿ  ಮಾಡಿಕೊಂಡಿದ್ದಾರೆ. ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದ ದಿಗಂತ್‌ಗೆ “ಮಾರಿಗೋಲ್ಡ್‌’ ಹೊಸ ರೀತಿಯ ಸಿನಿಮಾ ಆಗಲಿದೆ ಎಂಬುದು ಸಿನಿಮಾ ತಂಡದ ಅಭಿಪ್ರಾಯ. ಅಂದಹಾಗೆ, ಈಗಾಗಲೇ ಮೊದಲ ಹಂತದ ಚಿತ್ರದ ಚಿತ್ರೀಕರಣ ನಡೆದಿದೆ.

ಬೆಂಗಳೂರು, ಚಿತ್ರದುರ್ಗ  ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಿಸಿರುವ ತಂಡ, ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಸಿ‌ದ್ಧತೆ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ದಿಗಂತ್‌ಗೆ ಜೋಡಿಯಾಗಿ ಸಂಗೀತಾ ಶೃಂಗೇರಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ “ಟಗರು’ ಕಾಕ್ರೋಚ್‌ ಖ್ಯಾತಿಯ ಸುಧಿ, ಯಶ್‌ಶೆಟ್ಟಿ, ಸಂಪತ್‌ಕುಮಾರ್‌ ಸೇರಿದಂತೆ ಹಲವು ಕಲಾವಿದರು  ನಟಿಸುತ್ತಿದ್ದಾರೆ. ಚಿತ್ರಕ್ಕೆ ವೀರ್‌ ಸಮರ್ಥ್ ಸಂಗೀತ ನೀಡಿದ್ದು, ಎರಡು ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಕೆ.ಎಸ್‌.ಚಂದ್ರಶೇಖರ್‌ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next