Advertisement

ಟೀಸರ್ ನಲ್ಲಿ ಝಲಕ್ ಕೊಟ್ಟ ‘ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’

05:36 PM Oct 20, 2022 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ “ಗಾಳಿಪಟ-2′ ಸಿನಿಮಾದಲ್ಲಿ ಹಿರಿಯ ನಟ ಅನಂತನಾಗ್‌ ಮತ್ತು ದಿಗಂತ್‌ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಈಗ ಅನಂತನಾಗ್‌ ಮತ್ತು ದಿಗಂತ್‌ ಮತ್ತೂಂದು ಸಿನಿಮಾದಲ್ಲಿ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಅಂದಹಾಗೆ, ಆ ಸಿನಿಮಾದ ಹೆಸರು “ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’. ಸದ್ದಿಲ್ಲದೆ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ “ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅನಂತನಾಗ್‌ ಮತ್ತು ದಿಗಂತ್‌ ಕಾಂಬಿನೇಶನ್‌ ಸೋಶಿಯಲ್‌ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

ತಾತ ಮತ್ತು ಮೊಮ್ಮಗನ ನಡುವಿನ ಬಾಂಧವ್ಯದ ಸುತ್ತ ಹೆಣೆಯಲಾದ “ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾಕ್ಕೆ ಸಂಜಯ್‌ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ಗರುಡ ಮೂವೀಸ್‌ ಪಿಕ್ಚರ್’ ಬ್ಯಾನರ್‌ನಲ್ಲಿ ರಾಜೇಶ್‌ ಶರ್ಮ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

“ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾದಲ್ಲಿ ಅನಂತನಾಗ್‌, ದಿಗಂತ್‌ ಅವರೊಂದಿಗೆ ಐಂದ್ರಿತಾ ರೈ, ಶುಭ್ರ ಅಯ್ಯಪ್ಪ, ಅಂಬುಜಾಕ್ಷಿ, ಪ್ರಕಾಶ್‌ ತುಮ್ಮಿನಾಡು, ವಿನೀತ್‌ ಬೀಪ್‌ ಕುಮಾರ್‌, ಮಿಮಿಕ್ರಿ ಗೋಪಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ “ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾದ ಹಾಡುಗಳಿಗೆ ಜಯಂತ್‌ ಕಾಯ್ಕಿಣಿ, ಪ್ರಮೋದ್‌ ಮರವಂತೆ ಸಾಹಿತ್ಯವಿದೆ. ಚಿತ್ರಕ್ಕೆ ಛಾಯಾಗ್ರಹಣ ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್‌ ಅರಸ್‌ ಸಂಕಲನವಿದೆ. ಬೆಂಗಳೂರು, ಕೊಡಗು ಮೊದಲಾದ ಕಡೆಗಳಲ್ಲಿ “ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next