ಶ್ವೇತವರ್ಣದವರಿಗೆ
ಶ್ವೇತವರ್ಣದವರು ಗಾಢವಾದ ಬಣ್ಣವನ್ನು ಕೇಶಕ್ಕೆ ಬಳಸುವ ಬದಲು, ಹೈಲೈಟ್ಸ್‌ನ(ಕೂದಲಿನ ಕೆಲವು ಭಾಗಕ್ಕಷ್ಟೇ ಬಣ್ಣ ಹಚ್ಚುವುದು) ಮೊರೆ ಹೋಗುವುದು ಉತ್ತಮ. ನೀವು ಬಿಳಿಚರ್ಮದವರಾಗಿದ್ದರೆ, ಕೆಂಪು, ತಿಳಿಕಂದು ಬಣ್ಣ ಅಥವಾ ಚಾಕ್ಲೆಟ್ ಕಲರ್‌ನ ಶೇಡ್‌ಗಳನ್ನು ಕೊಟ್ಟರೆ ಸರಿಯಾಗಿ ಒಪ್ಪುತ್ತದೆ.
Advertisement
ಮಧ್ಯಮವರ್ಣದವರಿಗೆಚರ್ಮದ ಬಣ್ಣ ಅತ್ತ ಕಪ್ಪೂ ಅಲ್ಲ, ಇತ್ತ ಬಿಳಿಯೂ ಅಲ್ಲ ಎನ್ನುವಂಥವರು ಹೆಚ್ಚು ತಿಳಿಯಾದ ಬಣ್ಣವನ್ನು ಆಯ್ಕೆ ಮಾಡದಿರುವುದು ಒಳಿತು. ಗಾಢವಾದ ಪ್ಲಮ್ ಶೇಡ್ ಅಥವಾ ಕಂದು, ಚಾಕ್ಲೆಟ್ ಬ್ರೌನ್, ನೀಲಿ ಅಥವಾ ನೇರಳೆ ಬಣ್ಣ ಬಳಸಿದರೆ ಕೂದಲಿಗೆ ಹೊಸ ಕಳೆ ಬರುತ್ತದೆ.
ಇಂಥವರು ವಾರ್ಮ್ ಹೈಲೈಟ್ಸ್ ಇರುವಂತೆ ಗಾಢವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ನಿಮ್ಮ ಕೇಶದ ಬಣ್ಣ ಗಾಢವಾಗಿದ್ದು, ಬದಲಾವಣೆ ಬಯಸಿದ್ದರೆ, ಕೇಶದ ನೈಸರ್ಗಿಕ ಬಣ್ಣಕ್ಕೆ ಹತ್ತಿರವಾದ ಶೇಡ್ ಅನ್ನು ಬಳಸಿ. ಕಪ್ಪು ಬಣ್ಣದವರಿಗೆ ಮರೂನ್ ಅಥವಾ ಡಾರ್ಕ್ ಬ್ರೌನ್ ಚೆನ್ನಾಗಿ ಕಾಣುತ್ತದೆ. ಎಣ್ಣೆ ಚರ್ಮದವರಿಗೆ
ಕಡು ಕಂದು ಅಥವಾ ತಿಳಿಕಂದು ಬಣ್ಣವನ್ನು ಕೇಶಕ್ಕೆ ಹಚ್ಚಿದರೆ ಎಣ್ಣೆ ಚರ್ಮದವರಿಗೆ ಹೊಸ ಲುಕ್ ಸಿಗುತ್ತದೆ. ಇವರು ಶೇಡ್‌ಗಳನ್ನು ಕೂಡ ಬಳಸಬಹುದು. ಎಣ್ಣೆ ಚರ್ಮವೆಂಬುದು ನ್ಯೂಟ್ರಲ್ ಸ್ಕಿನ್ ಟೋನ್ ಆಗಿರುವ ಕಾರಣ ಬೂದುಬಣ್ಣವೂ ಇವರಿಗೆ ಚೆನ್ನಾಗಿ ಒಪ್ಪುತ್ತದೆ.
Related Articles
ಡಾರ್ಕ್ ಬ್ರೌನ್ ಅಥವಾ ಕೂಲ್ ಲೈಟ್ ಬ್ರೌನ್ ಇವರಿಗೆ ಚೆನ್ನಾಗಿ ಒಪ್ಪುತ್ತದೆ. ಗೋದಿ ಬಣ್ಣದ ಚರ್ಮದವರು ಮಧ್ಯಮ- ಗಾಢ ಚರ್ಮದ ವಿಭಾಗದಲ್ಲಿ ಬರುವ ಕಾರಣ, ಕಡು ಕಂದು ಬಣ್ಣದ ಶೇಡ್ ಅವರ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
Advertisement
ಬಟ್ಟೆ ನೋಡಿ ಬಣ್ಣ ಹಚ್ಚಿ– ವಾರ್ಡ್‌ರೋಬ್‌ನಲ್ಲಿರುವ ಬಟ್ಟೆಗಳನ್ನು ನೋಡಿಯೂ ಕೇಶದ ಬಣ್ಣ ಆಯ್ಕೆ ಮಾಡಿಕೊಳ್ಳಬಹುದು. ಯಾವ ಬಣ್ಣದ ಬಟ್ಟೆ ನಿಮಗೆ ಚೆನ್ನಾಗಿ ಕಾಣುತ್ತದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಕೆಂಪು, ಕೇಸರಿ, ಹಳದಿ, ಹಸಿರು, ಚಿನ್ನದ ಬಣ್ಣ ಒಪ್ಪುವುದಾದರೆ, ಗೋಲ್ಡನ್ ಬ್ಲಾಂಡ್, ಸ್ಟ್ರಾಬೆರಿ ಬ್ಲಾಂಡ್ ಬಣ್ಣಗಳೇ ಸೂಕ್ತ. – ಮರೂನ್, ರಾಯಲ್ ಬ್ಲೂ, ಕಪ್ಪು ಬಣ್ಣದ ಬಟ್ಟೆ ಯಾರಿಗೆ ಸುಂದರವಾಗಿ ಕಾಣುತ್ತದೋ, ಅವರು ಪ್ಲಾಟಿನಂ, ಆಶ್ ಬ್ಲಾಂಡ್, ಬರ್ಗುಂಡಿ, ಜೆಟ್ ಬ್ಲ್ಯಾಕ್ ಬಣ್ಣ ಬಳಸಬಹುದು. – ಕೆಂಪು, ಬೂದು ಬಣ್ಣ, ನೇರಳೆ ಬಣ್ಣದ ವಸ್ತ್ರಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದಾದರೆ, ಚಾಕ್ಲೆಟ್ ಬ್ರೌನ್, ಸ್ಯಾಂಡಿ ಬ್ಲಾಂಡ್, ಹೀಜ್ ಬ್ಲಾಂಡ್‌ನ ಬಣ್ಣಗಳು ಸೂಕ್ತ. ಹಲೀಮತ್ ಸ ಅದಿಯ