Advertisement

‘ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು’: ಶೃಂಗೇರಿಯಲ್ಲಿ ಸಿಎಂಗೆ ವ್ಯಂಗ್ಯದ ಸ್ವಾಗತ

10:42 AM Apr 19, 2022 | Team Udayavani |

ಚಿಕ್ಕಮಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಶೃಂಗೇರಿಗೂ ಸಿಎಂ ಭೇಟಿ ನೀಡುತ್ತಿದ್ದು, ಸಿಎಂ ಭೇಟಿಗೆ ಸ್ವಾಗತ ಕೋರಿ ಅಣಕವಾಡುತ್ತಿರುವ ಬ್ಯಾನರೊಂದು ಪತ್ತೆಯಾಗಿದೆ.

Advertisement

“ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು” ಎಂದು ಸಿಎಂ ಗೆ ಸೂಚಿಸುತ್ತಿರುವ ಬ್ಯಾನರ್ ಗಮನ ಸೆಳೆಯುತ್ತಿದೆ. ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಪದೇ ಪದೇ ಮಾತು ತಪ್ಪುತ್ತಿದೆ. ಹೀಗಾಗಿ ಸಿಎಂ ಗೆ ಸ್ವಾಗತ ಕೋರಿ ನಿಧಾನವಾಗಿ ಚಲಿಸುವಂತೆ ಎಚ್ಚರಿಸುವ ಬ್ಯಾನರ್ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ: ಸಿಎಂ ಬೊಮ್ಮಾಯಿ

“ಶಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾರಿ ಕಡತವು 15 ವರ್ಷಗಳಿಂದ ಪ್ರಗತಿಯಲ್ಲಿದೆ. ತೀವ್ರ ಅನಾರೋಗ್ಯ ಸಂದರ್ಭದಲ್ಲಿ ಸುಮಾರು ನೂರು ಕಿ.ಮೀ ದೂರದ ಆಸ್ಪತ್ರೆಗೆ ತೆರೆಳಬೇಕಾದ ಕಾರಣ, ದಯವಿಟ್ಟು ತಮ್ಮ ಹಾಗೂ ನಮ್ಮ ಊರಿನವರ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ” ಎಂದು ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next