Advertisement

ಶಾಲೆ ಆರಂಭಕ್ಕೆ ಭಿನ್ನ ಪ್ರತಿಕ್ರಿಯೆ

03:06 PM Oct 05, 2020 | Suhan S |

ರಾಮನಗರ: ಕೋವಿಡ್‌ ಸೋಂಕಿನಿಂದ ಶಾಲಾ, ಕಾಲೇಜುಗಳು ಮುಚ್ಚಿದ್ದು, ಶಾಲೆಗಳನ್ನು ತೆರೆಯಲು ರಾಜ್ಯದ ಶಿಕ್ಷಣ ಸಚಿವರು ಯಾವ ಧಾವಂತವೂ ಇಲ್ಲ ಎಂದಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಬಯಸಿದ್ದಾರೆ. ಆದರೆ ಸಾರ್ವಜನಿಕ ವಲಯದಲ್ಲಿ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Advertisement

ವಿಶೇಷವಾಗಿ ಪೋಷಕರು ಶಾಲೆಗಳ ಆರಂಭ ಈಗಲೇ ಬೇಡ, ಶೂನ್ಯ ಶೈಕ್ಷಣಿಕ ವರ್ಷಎಂದು ಘೋಷಿಸಿ ಎಂದು ಸರ್ಕಾರಕ್ಕೆ ಸಲಹೆನೀಡಿದ್ದಾರೆ.ಅಪ್ಪ ಅಮ್ಮ ಕೆಲಸ, ವ್ಯಾಪಾರ ಅಂತ ಹೊರಗೆ ಹೋಗಿ ಕೋವಿಡ್ ಅಂಟಿಸಿ ಕೊಂಡು ಬಂದರೆ ಮಕ್ಕಳಿಗೆ ಹರಡೋಲ್ಲವೇ ಎಂದು ಪ್ರಶ್ನಿಸುವವರು ಇದ್ದಾರೆ.

ಆದಾಯ ಬರೋ ಉದ್ಯಮ ಆಗಿದ್ರೆ ಓಪನ್‌!: ನಗರದ ಕೊತ್ತಿಪುರ ನಿವಾಸಿ ಗಿರೀಶ್‌ ಎಂಬುವರು ಪ್ರತಿಕ್ರಿಯಿಸಿ ಮಕ್ಕಳ ಕಾಳಜಿ ಎಂಬುದು ಸರ್ಕಾರಕ್ಕೆಒಂದು ನೆಪ ಮಾತ್ರ. ಸರ್ಕಾರಕ್ಕೆ ಆದಾಯ ಬರೊ ಉದ್ಯಮವಾಗಿದ್ರೆ, ಶಾಲಾ ಕಾಲೇಜು ಆರಂಭಕ್ಕೆ ಎಂದೋ ಸಮ್ಮತಿ ದೊರೆಯುತ್ತಿತ್ತು. ವೈನ್‌ ಸ್ಟೋರ್‌ಗಳನ್ನು ತೆರೆಯಲುಯಾರ ಸಲಹೆಯನ್ನು ಕೇಳದ ಸರ್ಕಾರ ಶಾಲೆಗಳ ತೆರವಿಗೆ ಎಲ್ಲರ ಸಲಹೆ ಪಡೆಯುತ್ತಿದೆ ಎಂದಿದ್ದಾರೆ.

ಲಾಕ್‌ಡೌನ್‌ ತೆರವಾದಂತೆಲ್ಲ ಮನೆಯೊಳಗೆ ಯಾರೂ ಬಂಧಿಗಳಾಗಿಲ್ಲ. ಎಲ್ಲ ಮನೆಗಳಲ್ಲೂ ಕುಟುಂಬಸ್ಥರು ಕಚೇರಿ, ಪೇಟೆ, ಅಂಗಡಿ, ಬ್ಯಾಂಕ್‌ಗೆ ಬಂದು ಮರಳಿ ಮನೆಗೆ ಹೋಗುತ್ತಾರೆ.ಆಗಕೊರೊನಾಮನೆಯವರಿಗೆ ಬರುವುದಿಲ್ಲವೆ. ಮಕ್ಕಳು ಶಾಲಾ ಕಾಲೇಜಿಗೆ ಬಂದು ಮನೆಗೆ ಹೋದ್ರೆ ಕೋವಿಡ್ ಬಂದು ಬಿಡುತ್ತಾ? ಮಕ್ಕಳೇನು ಕೋವಿಡ್ ವಾಹಕರೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಸೋಂಕು ಮಕ್ಕಳು, ಯುವಕರಿಗೆ ಬಂದಿದ್ದು ಕಡಿಮೆ. ಸಾವು ನೋವಂತು ಇಲ್ಲವೇ ಇಲ್ಲ. ಸರ್ಕಾರದ ಪ್ರತಿನಿಧಿಗಳು ತಜ್ಞ ವೈದ್ಯರ ಸಲಹೆ ಪಡೆಯಬೇಕು ಎಂದಿದ್ದಾರೆ.

ಪದವಿ, ಪಿಯೂ ಆರಂಭವಾಗಲಿ: ಪದವಿ, ಪಿಯೂ ತರಗತಿಗಳನ್ನು ಆರಂಭಿಸಲು ಕೆಲವು ಪೋಷಕರು ಒಲವು ತೋರಿದ್ದಾರೆ. ವಯಸ್ಕ ಮಕ್ಕಳಿಗೆ ‌ ಸೂಕ್ತ ತಿಳುವಳಿಕೆ ಮತ್ತು ಮುಂಜಾ ಗ್ರತಾ ಕ್ರಮಗಳಿಗೆ ಅಗತ್ಯವಾದ ಸೌಕರ್ಯ ಕಲ್ಪಿಸಿಕೊಟ್ಟು ತರಗತಿ ಆರಂಭಿಸಲು ಸಲಹೆ ನೀಡಿದ್ದಾರೆ.

Advertisement

2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷ ಎಂದುಘೋಷಿಸಿ ದರೆ, ಅನೇಕ ವಿದ್ಯಾರ್ಥಿಗಳು ಕಟ್ಟಿಕೊಂಡ ಕನಸುಗಳು ನುಚ್ಚು ನೂರಾಗುತ್ತವೆ.-ಸೌಜನ್ಯಗೌಡ, ವಿದ್ಯಾರ್ಥಿನಿ

ಪ್ರಾಥಮಿಕ ತರಗತಿಗಳಆರಂಭದ ವಿಚಾರದಲ್ಲಿಪೋಷಕರುಒಲವು ತೋರುತ್ತಿಲ್ಲ.ಇತ್ತ 6 ತಿಂಗಳಿಂದ ಶಿಕ್ಷಕರಿಗೆ ವೇತನವಿಲ್ಲದೆ ಸೊರಗುವಂತಾಗಿದೆ. ಸರ್ಕಾರದ ನಿರ್ಧಾರಕ್ಕೆ ಸಾಕಾಗಿದೆ.ಹೀಗಾಗಿ ಸರ್ಕಾರ ತಕ್ಷಣತನ್ನ ನಿರ್ಧಾರಪ್ರಕಟಿಸಬೇಕು. ಪಟೇಲ್‌ .ಸಿ ರಾಜು, ಉಸ್ಮಾರ್ಡ್‌ ಅಧ್ಯಕ

 

ಬಿ.ವಿ.ಸೂರ್ಯಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next