Advertisement

ಪ್ರಕೃತಿಯೊಂದಿಗೆ ಬೆರೆತು ಚಿತ್ರ ಬಿಡಿಸುವ ವಿಭಿನ್ನ ಪ್ರಯೋಗ

11:47 AM Nov 16, 2018 | Team Udayavani |

ಕನಕಮಜಲು: ಕನಕಮಜಲಿನಲ್ಲಿ ಆರಂಭವಾದ ಸುಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು ವಿಭಿನ್ನ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕನಕಮಜಲು ಗ್ರಾಮದ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಸುಮಾರು 30 ವಿದ್ಯಾರ್ಥಿ ಗಳು ಭಾಗವಹಿಸಿದ್ದಾರೆ. ಒಂದು ವಾರಗಳ ಕಾಲ ನಡೆಯುವ ಸುಯೋಗ ಶಿಬಿರದಲ್ಲಿ ನಿಸರ್ಗ ರಮಣೀಯ ದೃಶ್ಯಗಳನ್ನು ಚಿತ್ರಿಸುತ್ತಿದ್ದಾರೆ.

Advertisement

ಕಲಾತ್ಮಕ ಚಿಂತನೆಯುಳ್ಳ ವಿದ್ಯಾರ್ಥಿಗಳು ಹಲವು ಹಳ್ಳಿಯ ದೈನಂದಿನ ಆಗು-ಹೋಗುಗಳು, ಸಂಪ್ರದಾಯಗಳು ಹೀಗೆ ನಿಸರ್ಗದ ವಾಸ್ತವ ಮಜಲುಗಳನ್ನು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಕಾಡಿನಿಂದ ಕೂಡಿದ ರಸ್ತೆಗಳು, ಜನ ನಡೆದಾಡುವ ಹಾದಿಗಳು, ಹಳೇ ಹೆಂಚಿನ ಮನೆ, ಹಟ್ಟಿಯ ಸ್ವರೂಪ ಹೀಗೆ ಎಲ್ಲವನ್ನೂ ನೋಡಿಕೊಂಡು ಮನನ ಮಾಡಿ ಸ್ಥಳದಲ್ಲಿಯೇ ಕುಳಿತು ಬಿಡಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಇದೊಂದು ವಿಭಿನ್ನ ಪ್ರಯೋಗವಾದ ಕಾರಣ ಜನರು ಕೂಡ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಸುಯೋಗ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ವ್ಯವಸ್ಥಾಪಕರು ಆಯೋಜಿಸಿದ್ದರು. ಬೆಳಗ್ಗೆ ಶುರುವಾದ ಚಿತ್ರಕಲಾ ಶಿಬಿರ ಸಂಜೆ ಮುಕ್ತಾಯವಾಗುತ್ತಿದೆ. ಶಿಬಿರವು ಯುವಕ ಮಂಡಲ ಕನಮಜಲು ಹಾಗೂ ಮಹಾಲಸಾ ಚಿತ್ರಕಲಾ ಶಾಲೆ ಮಂಗಳೂರು ಇವರ ಆಶ್ರಯದಲ್ಲಿ ನಡೆಯುತ್ತಿವೆ. ನ. 11ರಂದು ಆರಂಭವಾದ ಈ ಶಿಬಿರ ನ. 18ಕ್ಕೆ ಕೊನೆಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next