Advertisement
ಜಗತ್ತಿನಾದ್ಯಂತ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಶಬ್ದಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವುದು ಮುಖ್ಯ. ಯಾಕೆಂದರೆ ಇದು ಜೀವನ ಮತ್ತು ಭವಿಷ್ಯ ಸಾವಿನ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ.
ಈ ಶಬ್ದಗಳ ಬಗ್ಗೆ ಬಳಕೆ ಬಗ್ಗೆ ಗೊಂದಲಗಳಿದ್ದರೆ…ಈ ವರದಿ ಓದಿ. ಏನಿದು ಸೋಶಿಯಲ್ ಡಿಸ್ಟೆನ್ಸ್:
ಸೋಶಿಯಲ್ ಡಿಸ್ಟ್ಯಾನ್ಸಿಂಗ್(ಸಾಮಾಜಿಕ ಅಂತರ) ಅಂದರೆ ಇತರ ಜನರೊಂದಿಗಿನ ಮುಖಾಮುಖಿ ಸಂವಹನ (ಮಾತುಕತೆ) ಆದಷ್ಟು ಕಡಿಮೆ ಮಾಡುವುದು. ಅಲ್ಲದೇ ಕನಿಷ್ಠ ಆರು ಅಡಿಗಳಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಸಾಮಾಜಿಕ ಅಂತರದಲ್ಲಿ
*ಸಾರ್ವಜನಿಕವಾಗಿ ಹೆಚ್ಚು ಬೆರೆಯುವುದನ್ನು ಕಡಿಮೆ ಮಾಡಬೇಕು
*ಯಾವುದೇ ಗುಂಪುಗಳ ಜತೆ, ಗುಂಪು, ಗುಂಪಾಗಿ ಮಾತನಾಡುವುದನ್ನು ನಿಲ್ಲಿಸಿ
*ಯಾವುದೇ ಧಾರ್ಮಿಕ, ಸಾಮಾಜಿಕ ಹಾಗೂ ಕ್ರೀಡಾ ಸ್ಪರ್ಧೆ/ಸಮಾರಂಭಗಳಲ್ಲಿ ಭಾಗವಹಿಸಬೇಡಿ
*ಗುಂಪು ಸೇರೋದನ್ನು ಮೊದಲು ನಿಷೇಧಿಸಿ
*ಮನೆ ಪಾಠ, ಸಾಮಾಜಿಕ ಜಾಲತಾಣಗಳ ಪಾಠ ನಿಲ್ಲಿಸಿ
*ಮನೆಯಿಂದ ಹೊರ ಹೋದರೆ ಆರು ಅಡಿಗಳ ಅಂತರ ಕಾಯ್ದುಕೊಳ್ಳಿ
*ಹ್ಯಾಂಡ್ ಶೇಕ್ ಬದಲು ನಮಸ್ತೆ ಎಂದು ಹೇಳಿ
Related Articles
ಸೋಶಿಯಲ್ ಡಿಸ್ಟ್ಯಾನ್ಸಿಂಗ್ ಗಿಂತ ಕ್ವಾರಂಟೈನ್ ತುಂಬಾ ಗಂಭೀರವಾದದ್ದು. ಕ್ವಾರಂಟೈನ್ ಅಂದ್ರೆ ಮನೆಯೊಳಗೆ ಪ್ರತ್ಯೇಕವಾಗಿ ಇರುವುದು. ಯಾವ ವ್ಯಕ್ತಿ ಪರೀಕ್ಷೆಗೊಳಗಾದಾಗ ಕೋವಿಡ್ 19 ವೈರಸ್ ಶಂಕಿತ ಅಂತಾದರೆ ಅಂತಹ ವ್ಯಕ್ತಿಗಳನ್ನು ಬೇರೆ ಜನರಿಂದ 14 ದಿನ ದೂರ ಇರಿಸಲು ಮನೆಯಲ್ಲೇ ತೀವ್ರ ನಿಗಾದಲ್ಲಿ ಇರಿಸಲು ಕ್ವಾರಂಟೈನ್ ಅಂತ ಹೇಳುತ್ತಾರೆ.
Advertisement
ಕೋವಿಡ್ 19 ಸೋಂಕಿಗೆ ಸಂಬಂಧಿಸಿದ ಲಕ್ಷಣ ಕಂಡು ಬಂದಲ್ಲಿ ಅಂತಹವರು ಸ್ವಯಂ ಆಗಿ ಪ್ರತ್ಯೇಕವಾಗಿ ಇರುವುದು ಮುಖ್ಯ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಹೋಂ ಕ್ವಾರಂಟೈನ್:*ಶಂಕಿತ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ಅಗತ್ಯ ಇಲ್ಲ ಎಂದಾದಲ್ಲಿ ಮನೆಯಲ್ಲಿಯೇ 14 ದಿನಗಳ ಕಾಲ ಪ್ರತ್ಯೇಕವಾಗಿ ಇರುವುದು.
*ಸಾರ್ವಜನಿಕ ಸ್ಥಳಗಳಿಂದ ದೂರ ಇರಬೇಕು, ಸಾರ್ವಜನಿಕ ಸಂಚಾರ ವ್ಯವಸ್ಥೆ ಬಳಸಿಕೊಳ್ಳಬಾರದು
*ಕೋವಿಡ್ 19 ಶಂಕಿತ ವ್ಯಕ್ತಿಗಳನ್ನು ದಿನಂಪ್ರತಿ ರೋಗ ಲಕ್ಷಣದ ಬಗ್ಗೆ ತಪಾಸಣೆ, ಉಸಿರಾಟದ ತೊಂದರೆ, ಜ್ವರ ಹಾಗೂ ಕೆಮ್ಮ ಇದೆಯೇ ಎಂಬ ಬಗ್ಗೆ ಪರಿಶೀಲನೆ
*ಸೋಪು ಅಥವಾ ಸ್ಯಾನಿಟೈಸರ್ ನಿಂದ ನೀರನ್ನು ಬಳಸಿ ಕೈ ತೊಳೆಯುತ್ತಿರಬೇಕು
*ಮನೆಯನ್ನು ಕೂಡಾ ಶುಚಿಯಾಗಿಟ್ಟುಕೊಳ್ಳಬೇಕು
*ಸಾಧ್ಯವಾದರೆ ಮನೆಯಲ್ಲಿರುವ ಸದಸ್ಯರಿಂದಲೂ ಅಂತರ ಕಾಯ್ದುಕೊಳ್ಳಿ ಐಸೋಲೇಶನ್:
ಕೋವಿಡ್ 19 ವೈರಸ್ ದೃಢ ಪಟ್ಟ ವ್ಯಕ್ತಿಗಳನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದೇ ಐಸೋಲೇಶನ್. ಕೋವಿಡ್ 19 ಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಅತೀಯಾದ ಉಷ್ಣಾಂಶದಲ್ಲಿ ಇಡುವುದು. ಈ ವ್ಯಕ್ತಿಗಳನ್ನು ಕೇವಲ ವೈದ್ಯರು ಮತ್ತು ನರ್ಸ್ ಗಳು ಮಾತ್ರ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಚಿಕಿತ್ಸೆ ನೀಡುವ ಕ್ರಮ ಇದಾಗಿದೆ. ಒಂದು ವೇಳೆ ಯಾರೊ ಒಬ್ಬರು ಐಸೋಲೇಶನ್ ನಲ್ಲಿ ಇದ್ದಾರೆ/ಳೆ ಎಂದರೆ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಇರಲಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಅವರನ್ನು ಹೊರ ಕಳುಹಿಸಲಾಗುತ್ತದೆ. ಲಾಕ್ ಡೌನ್:
ನಗರವನ್ನು ಲಾಕ್ ಡೌನ್ ಮಾಡುವ ಮುಖ್ಯ ಉದ್ದೇಶ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನ ಸಂಚಾರವನ್ನು ಸ್ಥಗಿತಗೊಳಿಸುವುದಾಗಿದೆ. ಜನರೇ ಸ್ವಯಂ ಆಗಿ ಈ ನಿರ್ಧಾರ ತೆಗೆದುಕೊಳ್ಳದೇ ಇದ್ದಾಗ ಸರ್ಕಾರವೇ ಮುಂದಾಗಿ ನಗರಗಳನ್ನು, ರಾಜ್ಯವನ್ನು ಲಾಕ್ ಡೌನ್ ಮಾಡುವ ನಿರ್ಧಾರ ಕೈಗೊಂಡು ಜನ ಸಂಚಾರವನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ.