Advertisement
ಕೋವಿಡ್-19 ವೈರಸ್ ನಿರಂತರವಾಗಿ ರೂಪ ಬದಲಿಸುತ್ತಿರುತ್ತದೆ. ಆ ರೀತಿ ಬದಲಾದ ವೈರಸ್‌ನ ರೂಪವನ್ನು “ರೂಪಾಂತರಿ’ ಎಂದು ಕರೆಯುತ್ತಾರೆ. ಡೆಲ್ಟಾ ( ಬಿ.1.617.2) ರೂಪಾಂತರಿಯು ಮೊದಲು ಕಂಡು ಬಂದಿದ್ದೇ ಭಾರತದಲ್ಲಿ. ಇದನ್ನು ಕಳವಳಕಾರಿ ರೂಪಾಂತರಿ ಎಂದು ಪರಿಗಣಿಸಲಾಗಿದೆ. ಇದು ಈಗ ಮತ್ತೂಂದು ಸ್ವರೂಪ ಪಡೆದಿದೆ. ಈ ಹೊಸ ಸ್ವರೂಪವೇ ಡೆಲ್ಟಾ ಪ್ಲಸ್ (ಬಿ.1.617.2.1). ಡೆಲ್ಟಾ ಮೊದಲು ಭಾರತದಲ್ಲಿ ಪತ್ತೆಯಾದರೆ, ಡೆಲ್ಟಾ ಪ್ಲಸ್ ಪತ್ತೆಯಾಗಿದ್ದು ಇಂಗ್ಲೆಂಡ್ ನಲ್ಲಿ (ಜೂನ್ 11ರಂದು)
Related Articles
Advertisement
ಡೆಲಾ ಪ್ಲಸ್ ಹೆಚ್ಚು ಅಪಾಯಕಾರಿಯೇ?
2ನೇ ಅಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಲು ಡೆಲ್ಟಾ ರೂಪಾಂತರಿ ಕಾರಣ ಎಂದು ಹೇಳಲಾಗಿದೆ. ಮುಂಬರುವ ಮೂರನೇ ಅಲೆಯ ವೇಳೆ ಡೆಲ್ಟಾ ಪ್ಲಸ್ ರೂಪಾಂತರಿಯ ಪ್ರಭಾವ ಹೆಚ್ಚಿರುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ. ಇದು ಎಷ್ಟು ಅಪಾಯಕಾರಿ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಡೆಲ್ಟಾ ಪ್ಲಸ್‌ನ ವ್ಯಾಪಿಸುವಿಕೆಯ ವೇಗ ಹೆಚ್ಚಿರುವ ಕಾರಣ, 3ನೇ ಅಲೆಯು ನಿರೀಕ್ಷೆಗಿಂತಲೂ ಮುಂಚೆಯೇ ಅಪ್ಪಳಿಸುವ ಭೀತಿಯಿದೆ ಎನ್ನುತ್ತಾರೆ ತಜ್ಞರು.