ಯಾವುದೇ ಕೆಲಸವಿರಲಿ ಏಕಾಗ್ರತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ, ನೋವು, ಹತಾಶೆ, ಕೋಪ ಒಟ್ಟಿಗೆ ಉಂಟಾಗುತ್ತಿದೆ ಎಂದರೆ ನಾವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೇವೆ ಎಂದರ್ಥ.
ಮಾನಸಿಕ ಒತ್ತಡ ಎಲ್ಲರನ್ನೂ ಕಾಡುವ ಸಾಮಾನ್ಯ ಸಮ ಸ್ಯೆಯಾದರೂ ಸರಿಯಾದ ಸಮಯಕ್ಕೆ ಅದನ್ನು ನಿಯಂತ್ರಿಸದಿದ್ದರೆ ಮುಂದೆ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮಾನಸಿಕ ಒತ್ತಡ ನಿವಾರಣೆಯಲ್ಲಿ ಯೋಗ, ಧ್ಯಾನ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಇದರೊಂದಿಗೆ ಕೆಲವೊಂದು ಆಹಾರಗಳೂ ಕೂಡ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಕಾರಿಯಾಗುತ್ತದೆ. ಪಿಸ್ತಾ, ವಾಲ್ನಟ್, ಗೋಡಂಬಿ, ಬಾದಾಮಿಯಲ್ಲಿ ವಿಟ ಮಿನ್ ಬಿ ಅಧಿಕವಾಗಿದ್ದು, ನಿತ್ಯ ಒಂದು ಮುಷ್ಟಿಯಷ್ಟು ತಿಂದರೆ ಮನಸ್ಸಿನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.
ಅತ್ಯುತ್ತಮ ಕೊಬ್ಬಿನಾಂಶವಿರುವ ಅವಕಾಡೋ ಅಥವಾ ಬೆಣ್ಣೆ ಹಣ್ಣು ನರಗಳ ಆರೋಗ್ಯಕ್ಕೆ ಬಹಳ ಉತ್ತಮ. ಇದು ದೇಹದಲ್ಲಿ ಕೊಬ್ಬಿನಾಂಶ ಸಂಗ್ರಹಿಸುವುದಿಲ್ಲ. ಬದಲಾಗಿ ಮಾನ ಸಿಕ ಒತ್ತಡ ಕಡಿಮೆ ಮಾಡಲು ಬೇಕಾಗುವ ಹಾರ್ಮೋನ್ ಗಳ ಬಿಡುಗಡೆ ಮಾಡಲು ನೆರವಾಗುತ್ತದೆ.
ದೇಹದ ತೂಕ ನಿಯಂತ್ರಿ ಸುವ ಓಟ್ಸ್ ನಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೇ ಮಾನಸಿಕ ಒತ್ತಡ ಕಡಿಮೆ ಮಾಡಲು ಬೇಕಾಗುವ ಹಾರ್ಮೋನ್ ಅನ್ನು ಬಿಡುಗಡೆಗೊಳಿಸುತ್ತದೆ.
ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಸೇವನೆಯಿಂದ ದೇಹ, ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂನಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆತು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
ಡಾರ್ಕ್ ಚಾಕಲೇಟ್ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಕಾರಿ. ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಲು ಸ್ವಲ್ಪ ಡಾರ್ಕ್ ಚಾಕ ಲೇಟ್ ತಿಂದರೆ ಖುಷಿಯಾಗಿರಲು ಬೇಕಾಗುವ ಹಾರ್ಮೋನ್ ಬಿಡುಗಡೆಯಾಗಿ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.