Advertisement
ಮರಡೋನಾ ಕೋಪಕ್ಕೆ ಕಾರಣವಾಗಿದ್ದು ಕಿಕ್ಕೀರಿದು ತುಂಬಿದ್ದ ಅಭಿಮಾನಿಗಳ ವರ್ತನೆ. ಮರಡೋನಾ ಸ್ಥಳೀಯ ಕ್ಲಬ್ ಕಾರ್ಯಕ್ರಮವೊಂದಕ್ಕಾಗಿ ಆಗಮಿಸಿದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ತುಂಬಿಕೊಂಡಿದ್ದರು. ಮರಡೋನಾಗೆ ಕಾರಿನಿಂದ ಕೆಳಕ್ಕೆ ಇಳಿಯಲು ಸಾಧ್ಯವಾಗಲೇ ಇಲ್ಲ. ಭದ್ರತಾ ಅಧಿಕಾರಿಗಳು ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು. 2 ನಿಮಿಷ ಇಳಿಯುತ್ತೇನೆ ಎಂದರು ಅಭಿಮಾನಿಗಳು ಕೇಳಲಿಲ್ಲ. ಇದರಿಂದ ಮರಡೋನಾ ಅಭಿಮಾನಿಗಳ ವಿರುದ್ಧ ತಾಳ್ಮೆ ಕಳೆದುಕೊಂಡರು. ಡಿಯಾಗೊ ಸಿಟ್ಟಾಗಿದ್ದನ್ನು ಗಮನಿಸಿದ ಕಾರ್ಯಕ್ರಮದ ಸಂಘಟಕರು ಅವರನ್ನು ಕೆಳಕ್ಕೆ ಇಳಿಯುವಂತೆ ಮತ್ತೆ ಹೇಳಲಿಲ್ಲ. ಮರಡೋನಾ ಕಾರ್ಯಕ್ರಮದ ಸ್ಮರಣಾರ್ಥ ಸಿದ್ಧಪಡಿಸಿದ್ದ ಹಾಳೆಗೆ ಕಾರಿನಲ್ಲೇ ಕುಳಿತು ಸಹಿ ಮಾಡಿ ವಾಪಸ್ ಹೋಟೆಲ್‌ಗೆ ಮರಳಿದರು. Advertisement
ಕೋಲ್ಕತಾದಲ್ಲಿ ಮುನಿಸಿಕೊಂಡರು ಫುಟ್ಬಾಲ್ ದೇವರು ಮರಡೋನಾ
01:13 PM Dec 14, 2017 | |
Advertisement
Udayavani is now on Telegram. Click here to join our channel and stay updated with the latest news.