Advertisement

“ಹೇ ರಾಮ್‌’ಬಗ್ಗೆ ಸ್ಪಷ್ಟನೆ

06:25 AM Jan 31, 2018 | Team Udayavani |

ನವದೆಹಲಿ: ಎಪ್ಪತ್ತು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಹತ್ಯೆಗೀಡಾದಾಗ ಕೊನೆಯದಾಗಿ “ಹೇ ರಾಮ್‌’ ಎಂದು ಉದ್ಗರಿಸಿರಲಿಲ್ಲ ಎಂದು ತಾವು ಹೇಳಿಯೇ ಇಲ್ಲ ಎಂದು ಅವರ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ ಹೇಳಿದ್ದಾರೆ. ನಾನು ಹೇಳಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದರು. ಗಾಂಧಿ ಹೇ ರಾಮ್‌ ಎಂದು ಹೇಳಿಯೇ ಇಲ್ಲ ಎಂದು ನಾನು ಯಾವತ್ತೂ ಹೇಳಲಿಲ್ಲ. ಅವರು ಹೇಳಿದ್ದಾರೋ, ಇಲ್ಲವೋ ಎಂಬುದು ನನಗೆ ಸರಿಯಾಗಿ ಕೇಳಿರಲಿಲ್ಲ ಎಂದಷ್ಟೇ ಹೇಳಿದ್ದೆ ಎಂದು ವೆಂಕಿಟ ಸ್ಪಷ್ಟಪಡಿಸಿದ್ದಾರೆ. 1943 ರಿಂದ 1948ರ ವರೆಗೆ ಇವರು, ಮಹಾತ್ಮರ ಆಪ್ತ ಕಾರ್ಯದರ್ಶಿಯಾಗಿದ್ದರು.

Advertisement

ಇದೇ ವೇಳೆ, ಗಾಂಧೀಜಿ ಹತ್ಯೆ ಆರೋಪಿಗಳಾದ ಗೋಡ್ಸೆ ಮತ್ತು ನಾರಾಯಣ ದತ್ತಾತ್ರೇಯ ಆಪ್ಟೆಯನ್ನು ಸುಪ್ರೀಂ ಕೋರ್ಟ್‌ ಅಸ್ತಿತ್ವಕ್ಕೆ ಬರುವ ಮೊದಲೇ ಅಂದರೆ 1949ರ ನ.15ರಂದೇ ಗಲ್ಲಿಗೇರಿಸಲಾಗಿತ್ತು. ಹಾಗಾಗಿ, ಆರೋಪಿಗಳಿಗೆ ಕಾನೂನಾತ್ಮಕ ನ್ಯಾಯ ಸಿಕ್ಕಿಲ್ಲ ಎಂದು ಮುಂಬೈನ ಪಂಕಜ್‌ ಫ‌ಡ್ನಿಸ್‌ ಎಂಬವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ. 

ಏತನ್ಮಧ್ಯೆ, ಗಾಂಧಿ ಸ್ಮಾರಕವಿರುವ ರಾಜ್‌ಘಾಟ್‌ನ ದುರವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್‌, ಸೂಕ್ತ ನಿರ್ವಹಣೆಗಾಗಿ ನಾವೇ ಆದೇಶ ನೀಡಬೇಕೇ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next