Advertisement

‘ಮಧುಮೇಹ ಮುಕ್ತ ಭಾರತ’ಅಭಿಯಾನ

02:26 PM Nov 13, 2017 | |

ಗಂಜಿಮಠ: ಮಕ್ಕಳು ಹಾಗೂ ಯುವಜನರಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸಲು ಇಲ್ಲಿನ ಆಯುರ್‌ ಸ್ಪರ್ಶ ಡಯಾಬಿಟಿಕ್‌ ಇನ್ನೋವೇಟಿವ್‌ ಫೌಂಡೇಶನ್‌ ಮತ್ತು ಆಯುರ್‌ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ ‘ಮಧುಮೇಹ ಮುಕ್ತ ಭಾರತ’ ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ರವಿವಾರ ಏರ್ಪಡಿಸಿದ್ದು, 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

Advertisement

ಈ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿತ್ತು. ಚಿತ್ರದುರ್ಗ, ಮಂಗಳೂರು, ಉಡುಪಿ, ಧಾರವಾಡ, ಬೆಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.

ಫ‌ಲಿತಾಂಶ
ಶಾರದಾ ಪದವಿಪೂರ್ವ ಕಾಲೇಜಿನ ಧನುಷ್‌ ಪ್ರಥಮ, ಉರ್ವದ ಸೈಂಟ್‌ ಅಲೋಶಿಯನ್‌ ಆಂಗ್ಲ ಮಾಧ್ಯಮ ಶಾಲೆಯ
ಸಿಂಚನಾ ಸುಭಾಷ್‌, ಕೊಡಿಯಾಲ್‌ಬೈಲ್‌ನ ಸೈಂಟ್‌ ಅಲೋಶಿಯಸ್‌ ಹೈಸ್ಕೂಲ್‌ನ ಗೌರವ ದೇವ್‌ ಅವರು ಮೊದಲ ಮೂರು ಬಹುಮಾನ ಗಳಿಸಿದರು. ಶಾರದಾ ಪದವಿಪೂರ್ವ ಕಾಲೇಜಿನ ಆಕಾಂಕ್ಷಾ ಶೆಟ್ಟಿ, ಉಡುಪಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸಾ ವಿ. ಅಂಚನ್‌, ಪ್ರತೀಷ್‌ ಪ್ರಭು, ಮಂಗಳೂರು ಕೆನರಾ ಪ್ರೌಢಶಾಲೆಯ ಗಣೇಶ ನಾಯಕ್‌, ಮೂಡಬಿದಿರೆ ಆಳ್ವಾಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆತೀತ ಪೈ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಎಂ. ವೈಭವ ಶೆಣೈ ಸಹಿತ 7 ಜನರು ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ. ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದ 2ನೇ ತರಗತಿ ವಿದ್ಯಾರ್ಥಿ ಅನ್ವೇಷ್‌ಗೂ ಬಹುಮಾನ ನೀಡಲಾಯಿತು.

ಹೆಚ್ಚಳ ಆತಂಕಕಾರಿ
ಆಯುರ್‌ ಸ್ಪರ್ಶ ಡಯಾಬಿಟಿಕ್‌ ಇನ್ನೋವೇಟಿವ್‌ ಫೌಂಡೇಶನ್‌ ಅಧ್ಯಕ್ಷ ಡಾ| ಸತೀಶ ಶಂಕರ ಬಿ. ಅವರು ಮಾತನಾಡಿ, ಗಂಜಿಮಠದಿಂದ ಮಧುಮೇಹ ಮುಕ್ತ ಭಾರತ ಜನ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಅವರ ಪ್ರಕಾರ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ. ಮಧುಮೇಹ ಪ್ರಕಾರ 2ನ್ನು ನಿಯಂತ್ರಿಸಬಹುದು, ತಡೆಗಟ್ಟಬಹುದು. ಕ್ರಮಬದ್ಧವಲ್ಲದ ಆಹಾರ ಸೇವನೆ, ಮಾನಸಿಕ ಒತ್ತಡ ಹೆಚ್ಚು ಮಧುಮೇಹಕ್ಕೆ ಕಾರಣವಾಗಿದೆ. ವಿಶ್ವ ಸಂಸ್ಥೆ ಹಾಗೂ ಡಬ್ಲೂಎಚ್‌ಒ ಕೂಡ ಮಕ್ಕಳು ಹಾಗೂ ಯುವಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿವೆ. ರಾಜ್ಯಮಟ್ಟದ ಚಿತ್ರಕಲೆಯ ಸ್ಪರ್ಧೆ ಇಲ್ಲಿ ಏರ್ಪಡಿಸಿದ್ದು ಇದು ಪ್ರಥಮ ಬಾರಿ. ಮಕ್ಕಳು ಹಾಗೂ ಯುವಕರಲ್ಲಿ ಮಧುಮೇಹದ ಬಗ್ಗೆ ಎಷ್ಟು ಅರಿವಿದೆ ಎನ್ನುವುದನ್ನು ಇಲ್ಲಿ ತಿಳಿಯಲಾಗಿದೆ. ಅದರೊಂದಿಗೆ ಮಧುಮೇಹ ತಡೆಯುವ ಬಗೆಯೂ ಮುಖ್ಯವಾಗಿದೆ ಎಂದರು.

ನ. 14ರಂದು ಗಂಜಿಮಠ ಆಯುರ್‌ ಸ್ಪರ್ಶ ಆಯುರ್ವೇದ ಆಸ್ಪತ್ರೆಯಲ್ಲಿ ಮಧುಮೇಹ ಕುರಿತು ಜಾಗೃತಿ ಏರ್ಪಡಿಸಲಾಗಿದೆ. ವೈದ್ಯರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಕವಿಗೋಷ್ಠಿ ಏರ್ಪಡಿಸಲಾಗಿದೆ. ಯೋಗ, ಮಾಧ್ಯಮ ಸಂವಾದ ಆಯೋಜಿಸಲಾಗಿದೆ.

Advertisement

ಜಾಗೃತಿಯಿಂದ ಅರಳಿದ ಮನಸ್ಸು
ಈ ಚಿತ್ರಕಲೆಯಲ್ಲಿ ಮಕ್ಕಳು ಮಧುಮೇಹದ ಬಗ್ಗೆ ಜಾಗೃತಿ ಹೇಗೆ ಮೂಡಿಸಿದ್ದಾರೆ ಎನ್ನುವುದು ಮುಖ್ಯ ವಿಷಯವಾಗಿದೆ. ಮಧುಮೇಹ ಹೇಗೆ ಬರುತ್ತದೆ? ತಡೆಗಟ್ಟುವ ಬಗೆ ಹೇಗೆ ಎಂಬ ಬಗ್ಗೆಯೂ ಕಲೆಯಲ್ಲಿ ಅಭಿವ್ಯಕ್ತಪಡಿಸಿದ್ದಾರೆ. ಮಾನಸಿಕ ಒತ್ತಡ, ವಿಲಾಸಿ ಜೀವನ, ಬೇಕರಿ ತಿನಸು ಮಧುಮೇಹಕ್ಕೆ ಕಾರಣವೆಂದೂ, ಸೈಕಿಂಗ್‌, ಯೋಗ, ಈಜು, ವಾಕಿಂಗ್‌ ಪರಿಹಾರವೆಂದೂ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next