Advertisement
ಬಹುತೇಕ ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರೂ, “ಪೊಗರು’ ಮಾತ್ರ ಆ ಬಗ್ಗೆ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಆರಂಭದಲ್ಲಿ ಜನವರಿ ಕೊನೆಯ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ ಎಂಬ ಸುದ್ದಿ ಕೇಳಿ ಬಂದಿತ್ತಾದರೂ, ಆ ನಂತರ ಅದು ಫೆಬ್ರವರಿ ಮೊದಲ ವಾರವಂತೆ ಎಂದು ಕೇಳಿಬಂತು. ಇದರಿಂದ ಬೇರೆ ಚಿತ್ರತಂಡಗಳಿಗೆ ತಮ್ಮ ಸಿನಿಮಾ ಬಿಡುಗಡೆ ಪ್ಲ್ರಾನ್ ಮಾಡಿಕೊಳ್ಳುವುದು ಕಷ್ಟವಾಗಿತ್ತು.
Related Articles
Advertisement
ಈ ಎಲ್ಲಾ ಕಾರಣಗಳಿಂದ ದೊಡ್ಡ ಸಿನಿಮಾ ಎದುರು ಬಂದು ರಿಸ್ಕ್ ಹಾಕಿಕೊಳ್ಳೋದು ಬೇಡ ಎಂಬ ನಿರ್ಧಾರಕ್ಕೆ ಇತರ ಚಿತ್ರತಂಡಗಳು “ಪೊಗರು’ ರಿಲೀಸ್ ಡೇಟ್‌ಗೆ ಕಾಯುತ್ತಿದ್ದವು. ಈಗ ಎಲ್ಲವೂ ಪಕ್ಕಾ ಆಗಿದೆ. ಇಡೀ ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ಸಿನಿಮಾಭಿಮಾನಿಗಳಿಗೆ ಸ್ಟಾರ್ ಸಿನಿಮಾಗಳ ಕುರಿತಾಗಿ ಒಂದು ಸ್ಪಷ್ಟತೆ ಸಿಕ್ಕಿದೆ. ಈಗ ಇತರರು ಕೂಡಾ ತಮ್ಮ ಸಿನಿಮಾ ಬಿಡುಗಡೆ ತಯಾರಿ ಮಾಡಿಕೊಳ್ಳಲು ಸುಲಭವಾಗಿದೆ.
ಅಂದಹಾಗೆ, “ಪೊಗರು’ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.